Virat Kohli: 11 ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳದೇ ಬೆಂಗಳೂರು ತೊರೆದ ವಿರುಷ್ಕಾ ಜೋಡಿ! ಆಕ್ರೋಶ...RCB Stampede

ಬೆಂಗಳೂರು, ಜೂನ್ 05: ರಾಜಧಾನಿ ಬೆಂಗಳೂರಿನಲ್ಲಿ RCB ವಿಜಯೋತ್ಸವ ವೇಳೆ ಕಾಲ್ತುಳಿತ ದುರಂತ ಸಂಭವಿಸಿದೆ. 11 ಜನ ಮೃತಪಟ್ಟಿದ್ದಾರೆ. ಈ ವಿಚಾರವಾಗಿ ಬಹಿರಂಗವಾಗಿ ಪ್ರತಿಕ್ರಿಯಿಸದೇ ಬೆಂಗಳೂರನ್ನು ತೊರೆಯುವ ಮೂಲಕ ಆರ್‌ಸಿಬಿ ಬ್ಯಾಟರ್, ಖ್ಯಾತ ಕ್ರಿಕೇಟಿಗ ವಿರಾಟ್ ಕೊಹ್ಲಿ (Virat Kohli) ಅವರು ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅವರು ದಂಪತಿ ಸಮೇತ ಬೆಂಗಳೂರಿನಿಂದ ವಿಮಾನ ಏರಿದ್ದಾರೆ. ಮುಂದಿನ IPL 2026ನಲ್ಲಿ ಆರ್‌ಸಿಬಿ ಗೆಲ್ಲುವುದು ಅನುಮಾನ ಎಂದು ಹೇಳುತ್ತಿದ್ದಾರೆ.

ವಿರಾಟ್ ಕೊಹ್ಲಿ ಎಂದರೆ ಸಾಕು ಕ್ರಿಕೇಟ್ ಪ್ರೇಮಿಗಳಲ್ಲಿ ಇನ್ನಿಲ್ಲ ಉತ್ಸಾಹ, ಹುರುಪು ಬರುತ್ತದೆ. ಅಷ್ಟರ ಮಟ್ಟಿಗೆ ಕೊಹ್ಲಿ ಆಟ ಇಷ್ಟಪಡುತ್ತಾರೆ. ಊಟ ನಿದ್ದೆ ಬಿಟ್ಟು ಆರ್‌ಸಿಬಿಗಾಗಿ, ವಿರಾಟ್ ಕೊಹ್ಲಿ ಆಟಕ್ಕಾಗಿ ಕಾಯುತ್ತಾರೆ. ಅಷ್ಟರ ಮಟ್ಟಿಗೆ ಅಭಿಮಾನ ಮೆರೆಯುವವರು ಇದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಅಭಿಮಾನ ಅಪಾರ. ಹೀಗಿದ್ದರೂ ಸಹಿತ ಬೆಂಗಳೂರಿನಲ್ಲೇ ಇದ್ದ ವಿರಾಟ್ ಕೊಹ್ಲಿ ಅವರು ದಂಪತಿ ಸಮೇತ ಲಂಡನ್‌ಗೆ ಹಾರಿದ್ದೇಕೆ? ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಏರ್‌ಪೋರ್ಟ್ ಮೂಲಕ ವಿರುಷ್ಕಾ ದಂಪತಿ ಹೋಗುತ್ತಿರುವ ವಿಡಿಯೋ ಅನ್ನು ANI ಹಂಚಿಕೊಂಡಿದೆ. ಸಾಕಷ್ಟು ಕಮೆಂಟುಗಳು ಬಂದಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.

RCB Virat Kohli Left Bangalore for Going to London without Meet Victims Family of Stampede

ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತ್ರವಲ್ಲದೇ, ಆರ್‌ಸಿಬಿ ಕನ್ನಡಾಭಿಮಾನಿಗಳು 18 ವರ್ಷಗಳಿಂದ ಕಾಯುತ್ತಿದ್ದರು. ಕೊನೆಗೂ ಕಪ್ ಗೆದ್ದಿತು ಎಂಬ ಖುಷಿಗಿಂತ ವಿಧಾನಸೌಧ ಸನ್ಮಾನ ಸಮಾರಂಭ ಮುಗಿಯುತ್ತಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶಿಸಲು ಮುಂದಾಗಿ ಕಾಲ್ತುಳಿತದಲ್ಲಿ ಮೃತಪಟ್ಟ ನೋವೇ ಹೆಚ್ಚಾಯಿತು. ಬೆಂಗಳೂರಿಗೆ, ಕರ್ನಾಟಕ ಎಂದೂ ಮರೆಯದಂತಹ ಅವಘಡ ಸಂಭವಿಸಿತು.

ಈ ವೇಳೆ ಬೆಂಗಳೂರಿನಲ್ಲೇ ಇದ್ದ ವಿರಾಟ್ ಕೊಹ್ಲಿ, ಕ್ರೀಡಾಂಗಣ ಕಾರ್ಯಕ್ರಮದಲ್ಲಿ ಮೌನಾಚರಣೆ ಸಹ ಮಾಡಲಿಲ್ಲ. ಅಲ್ಲದೇ ಮೃತ 11 ಯುವಕರ ಬಗ್ಗೆ ಸಾಂತ್ವನದ ಮಾತುಗಳು ಹೇಳದೇ, ಸಂತ್ರಸ್ತರನ್ನು ಭೇಟಿ ಮಾಡಲು ಮುಂದಾಗಲಿಲ್ಲ. ಗಾಯಾಳು ಆಸ್ಪತ್ರೆಯಲ್ಲಿ ಇದ್ದರೂ ಸಹಿತ ಅವರನ್ನು ಭೇಟಿ ಮಾಡುವ ಸಣ್ಣ ವ್ಯವಧಾನ ಕೊಹ್ಲಿಯಲ್ಲಿ ಇಲ್ಲದಾಯಿತೇ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

RCB Virat Kohli Left Bangalore for Going to London without Meet Victims Family of Stampede

ಕಪ್ ಬಂದ ಬಳಿಕ ಮುನಷ್ಯತ್ವ ಮರೆತ ಕೊಹ್ಲಿ..?

ಕೊಹ್ಲಿಗೆ ಆರ್‌ಸಿಬಿ ಅಭಿಮಾನಿಗಳಿಗಿಂತ ತಾವು ದಂಪತಿ ಸಮೇತ ಲಂಡನ್‌ ಹಾರುವುದೇ ಮುಖ್ಯವಾಯಿತೇ. ಸದಾ ಕಾಲ ಬೆನ್ನಿಗೆ ನಿಂತು ಕಪ್‌ ಗೆಲ್ಲುವವರೆಗೂ ಬೆಂಬಲಿಸಿದ ಅಭಿಮಾನಿ ಕನ್ನಡಿಗರು ಬೇಡವಾಯಿತು. ಕಪ್ ಬಂದ ಮೇಲೆ ವಿರಾಟ್ ಕೊಹ್ಲಿಗೆ ಮುನಷ್ಯತ್ವ ಮರೆತು ಹೋಯಿತೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಸೆಲೆಬ್ರಿಟಿಗಳ ಆರಾಧನೆ ನಿಲ್ಲಿಸಿ: ವಿರಾಟ್‌ ಕೊಹ್ಲಿ ಬಂಧಿಸಬೇಕು

ಭಾರತ ಈ ಸೆಲೆಬ್ರಿಟಿಗಳನ್ನು ಪೂಜಿಸುವುದನ್ನು ಮತ್ತು ಆರಾಧಿಸುವುದನ್ನು ನಿಲ್ಲಿಸಿ. ಅವರು ಕೇವಲ ಮನರಂಜನೆ ನೀಡುವವರು ಬೇರೇನೂ ಅಲ್ಲ ಎಂದು ಪೋಸ್ಟ್‌ಗೆ ಕಮೆಂಟ್ ಹಾಕಲಾಗಿದೆ. ವಿರಾಟ್ ಕೊಹ್ಲಿಗೆ ಲಂಡನ್‌ಗೆ ಹಿಂತಿರುಗಲು ಬಯಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ! ಕಾಲ್ತುಳಿತಕ್ಕೆ ಪರೋಕ್ಷವಾಗಿ ಕಾರಣವಾದ ಆರ್‌ಸಿಬಿ ಪ್ರಮುಖ ಬ್ಯಾಟರ್ ಆದ ವಿರಾಟ್ ಕೊಹ್ಲಿ ಅವರನ್ನು ಬಂಧಿಸಬೇಕು ಎಂದಿದ್ದಾರೆ. ನಟ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾ ವೇಳೆ ನಡೆದ ಕಾಲ್ತುಳಿತ, ಸಾವು ಹಾಗೂ ನಟನ ಬಂಧನವನ್ನು ಈ ವೇಳೆ ನೆನಪಿಸಿಕೊಂಡಿದ್ದಾರೆ.

ಕಪ್ ಗೆದ್ದ ಮರುದಿನವೇ ವಿರಾಟ್ ಲಂಡನ್‌ಗೆ ಹೊರಡಲು ಬಯಸಿದ್ದರು. ಬೆಂಗಳೂರು ಪೊಲೀಸರು ವಿಜಯೋತ್ಸವ ಮೆರವಣಿಗೆಗೆ ಅನುಮತಿ ನೀಡುವಂತೆ ಒತ್ತಾಯಿಸಲಾಗಿತ್ತು. ಇತ್ತ ಪೊಲೀಸರು ಭದ್ರತೆಗಾಗಿ ಎರಡು ದಿನ ಕಾಲಾವಕಾಶ ಪಡೆಯಲು ಇಚ್ಛಿಸಿದ್ದರು. ಅದಾಗದೇ ಇದ್ದ ಕಾರಣ ಇಂಥಹ ಘಟನೆ ನಡೆದು, ಹಲವು ಜೀವಗಳು ಬಲಿಯಾಗಬೇಕಾಯಿತು ಎಂದು ಬೇಸರ ವ್ಯಕ್ತವಾಗಿದೆ.

ಇಂತಹ ಸಂದರ್ಭಗಳು ನಿಮಗೆ 'ಸೆಲೆಬ್ರಿಟಿಗಳು ಜನರೊಂದಿಗಿನ ಆಳ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಹೇಗೆ ಕಡೆಗಣಿಸುತ್ತಾರೆ' ಅರ್ಥಮಾಡಿಸುತ್ತವೆ. ಇದನ್ನು ಜನರಿಗೆ ಅರ್ಥ ಮಾಡಿಸುವುದು ಕಷ್ಟ. ಅಭಿಮಾನಿಗಳು ಸೆಲೆಬ್ರೆಟಿಗಳನ್ನು ಪೂಜಿಸಿದರೆ ಅವರು ಕುಟುಂಬವು ದೊಡ್ಡ ನಷ್ಟ ಭರಿಸುವಂತಾಗಿದೆ. ಆರ್‌ಸಿಬಿ ಮತ್ತೆ ಎಂದಿಗೂ ಗೆಲ್ಲುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಬ್ಬರು ತಿಳಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+