ದುರಂತಕ್ಕೂ ಮುನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌: ಆರ್‌ಸಿಬಿ ವಿರುದ್ಧ ತನಿಖೆ, ಕೊಹ್ಲಿಗೂ ಕಾದಿದೆಯಾ ಸಂಕಷ್ಟ?

RCB stampede Case: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮ್ಯಾನೇಜ್‌ಮೆಂಟ್‌ ವಿರುದ್ಧ ಅಧಿಕೃತ ತನಿಖೆ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಐಪಿಎಲ್ ಗೆಲುವಿನ ಸಂಭ್ರಮಿಸಲು ಸಾರ್ವಜನಿಕ ವಿಜಯೋತ್ಸವವನ್ನು ಆಚರಿಸಲಾಗುವುದು ಎಂದು ಆರ್‌ಸಿಬಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಂಚಿಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರೀ ದುರಂತ ಸಂಭವಿಸಿದೆ. ಈ ಭೀಕರ ಘಟನೆಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದು, 47 ಮಂದಿ ಗಾಯಗೊಂಡಿದ್ದಾರೆ.

ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ (ಕೆಎಸ್‌ಸಿಎ) ಹಿರಿಯ ಸದಸ್ಯರ ಪಾತ್ರವನ್ನೂ ತನಿಖಾ ಸಮಿತಿ ಪರಿಶೀಲಿಸಲಿದೆ. ಫೆಲಿಸಿಟೇಶನ್ ಕಾರ್ಯಕ್ರಮದ ಯೋಜನೆಗೆ ಸಂಬಂಧಿಸಿದಂತೆ ಅವರ ಪಾತ್ರವನ್ನೂ ಪರಿಶೀಲಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

RCB Management Under Probe After Social Media Post Sparks Bengaluru Stadium Stampede

ಈ ಕಾಲ್ತುಳಿತ ದುರಂತವು ಜೂನ್ 4ರ ಮಧ್ಯಾಹ್ನ ನಡೆದಿದೆ. ಸತತ 18 ವರ್ಷಗಳ ನಿರೀಕ್ಷೆಯ ನಂತರ ಆರ್‌ಸಿಬಿ ತಂಡವು ಐಪಿಎಲ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳು ಇದ್ದರು. ಇದೇ ವೇಳೆ ವಿಜಯೋತ್ಸವವನ್ನು ಆಚರಿಸಲು ಲಕ್ಷಾಂತರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನೆರೆದಿದ್ದರು. ಆ ವೇಳೆ ದುರಂತ ಸಂಭವಿಸಿದೆ.

ಜೂನ್ 4ರಂದು ಮಧ್ಯಾಹ್ನ 3:14ಕ್ಕೆ, ಆರ್‌ಸಿಬಿ ಸಾಮಾನಿಜಕ ಮಾಧ್ಯಮ ಖಾತೆಯಲ್ಲಿ 'ವಿಜಯೋತ್ಸವ ಪರೇಡ್‌' ಬಗ್ಗೆ ಘೋಷಣೆ ಮಾಡಿಕೊಂಡಿತ್ತು. ಈ ಪೆರೇಡ್ ಸಂಜೆ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ನಂತರ ಸ್ಟೇಡಿಯಂನಲ್ಲಿ ಫೆಲಿಸಿಟೇಶನ್ ಕಾರ್ಯಕ್ರಮ ನಡೆಯಲಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

'ಮಿತ ಸಂಖ್ಯೆಯ ಉಚಿತ ಪಾಸ್‌ಗಳು shop.royalchallengers.com ನಲ್ಲಿ ಲಭ್ಯವಿದ್ದು. ಪೊಲೀಸ್ ಮಾರ್ಗಸೂಚಿಗಳನ್ನು ಪಾಲಿಸಲು ಅಭಿಮಾನಿಗಳಲ್ಲಿ ವಿನಂತಿಸುತ್ತೇವೆ' ಎಂದು ಆ ಪೋಸ್ಟ್‌ನಲ್ಲಿ ತಿಳಿಸಲಾಗಿತ್ತು. ಇದರ ಬೆನ್ನಲ್ಲೇ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಥಿಯೇಟರ್‌ವೊಂದರ ಬಳಿ ಕಾಲ್ತುಳಿತ ಪ್ರಕರಣ ನೆನಪಿಗೆ ಬರುತ್ತಿದೆ. ಯಾಕೆ ಅಂತೀರಾ ಇಲ್ಲಿದೆ ನೋಡಿ ಉತ್ತರ.

ಪುಷ್ಪ 2 ಸಿನಿಮಾ ಸಿನಿಮಾ ಬಿಡುಗಡೆ ವೇಳೆ ಹೈದರಾಬಾದ್‌ನಲ್ಲಿ ಸಂಧ್ಯಾ ಥಿಯೇಟರ್‌ ಬಳಿ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ ಮಹಿಳೆಯೊಬ್ಬರು ನಿಧನವೊಂದಿದ್ದರು. ಇನ್ನು ಈ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದರು.

ಪುಷ್ಪ 2 ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇನ್ನು ಅವರ ಪುತ್ರ ತೀವ್ರ ಗಾಯಗೊಂಡಿದ್ದರು. ಈ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲು ಆಗಿತ್ತು.

ಈ ದೂರಿನ ಆಧಾರದ ಮೇಲೆ ನಟ ಅಲ್ಲು ಅರ್ಜುನ್ ಹಾಗೂ ಅವರ ಬಾಡಿಗಾರ್ಡ್​ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಘಟನೆ ಡಿಸೆಂಬರ್ 4ರಂದು ನಡೆದಿತ್ತು. ಇನ್ನೂ ಇದೀಗ ನಿನ್ನೆ (ಜೂನ್‌ 4) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕುರಿತು ಈಗಾಗಲೇ ರಾಜ್ಯದ ಸರ್ಕಾರಕ್ಕೆ ಕರ್ನಾಟಕ ಹೈಕೊರ್ಟ್‌ ಸಮಗ್ರ ವರದಿ ನೀಡುವಂತೆ ನೋಟಿಸ್‌ ನೀಡಿದೆ. ಇದರ ಬೆನ್ನಲ್ಲೇ ಅಲ್ಲು ಅರ್ಜುನ್‌ರಂತೆ ವಿರಾಟ್‌ ಕೊಹ್ಲಿಗೂ ನೋಟಿಸ್‌ ಜಾರಿಯ ಆತಂಕ ಎದುರಾಗಿದೆ. ಯಾಕಂದ್ರೆ, ಬೆಂಗಳೂರಿನಲ್ಲಿ ನಿನ್ನೆ ಘಟನೆ ನಡೆದ ಸಂದರ್ಭದಲ್ಲಿ ಕೊಹ್ಲಿ ಸಹ ಬೆಂಗಳೂರಿನಲ್ಲಿದ್ದರು. ಆದ್ದರಿಂದ ಅವರಿಗೂ ನೋಟಿಸ್‌ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+