RCB: ಆರ್‌ಸಿಬಿ ಕಾಲ್ತುಳಿತ ಪ್ರಕರಣ: ಮರಣೋತ್ತರ ಶವ ಪರೀಕ್ಷೆ ಸಮಯದಲ್ಲಿ ಯುವತಿಯ ಚಿನ್ನಾಭರಣ ಕಳ್ಳತನ, ದೂರು ದಾಖಲು!

RCB: ರಾಯಲ್ ಚಾಲೆಂಜರ್ಸ್ಸ್‌ ಬೆಂಗಳೂರು ಸಂಭ್ರಮಾಚರಣೆಯ ವೇಳೆ ನಡೆದಿದ್ದ ಕಾಲ್ತುಳಿತ ಪ್ರಕರಣ ಇದೀಗ ಭಾರೀ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಕೇಸ್‌ನಲ್ಲಿ ಹಲವರು ಜೈಲು ಸೇರುವ ಸಾಧ್ಯತೆ ಇದೆ. ಕರ್ನಾಟಕದ ಪೊಲೀಸರು ಹಾಗೂ ಆರ್‌ಸಿಬಿ ತಂಡಕ್ಕೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಆದರೆ, ಈ ಕಾಲ್ತುಳಿತದಲ್ಲಿ ದಾರುಣವಾಗಿ ಸಾವನ್ನಪ್ಪಿದವರ ಕುಟುಂಬದವರ ಆಕ್ರಂದನ ಕಡಿಮೆ ಆಗುತ್ತಿಲ್ಲ. ಇನ್ನೂ ಆ ಕರಾಳ ದಿನ ಸಾವನ್ನಪ್ಪಿದವರ ಕುಟುಂಬದವರಿಗೆ ಆ ನೋವಿನಿಂದ ಇನ್ನೂ ಹೊರಗೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಭಾರೀ ದೊಡ್ಡ ಕಾಲ್ತುಳಿತ ಪ್ರಕರಣ ಇದಾಗಿದೆ. ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ನಂತರವೂ ಮುಜುಗರಕ್ಕೆ ಒಳಗಾಗುವಂತಹ ಘಟನೆ ಸಂಭವಿಸಿರುವುದು ಇದೀಗ ವರದಿಯಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಈಚೆಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಯುವತಿಯೊಬ್ಬರ ಚಿನ್ನಾಭರಣಗಳನ್ನು ಆ ನೋವಿನ ಸಂದರ್ಭದಲ್ಲೂ ಕಳವು ಮಾಡಲಾಗಿದೆ ಎಂದು ಆರೋಪಿಸಿ ತಾಯಿಯೊಬ್ಬರು ದೂರು ದಾಖಲಿಸಿದ್ದಾರೆ. ಇದು ಭಾರೀ ಆಕ್ರೋಶ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿಯ ಸಂಭ್ರಮಾಚರಣೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿರಲಿಲ್ಲ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಸಮಯದಲ್ಲಿ ಸಂಭವಿಸಿದ ದುರಂತಕ್ಕೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯೂ ಕಾರಣ ಎನ್ನುವ ಮಾತುಗಳು ಸಹ ಕೇಳಿ ಬಂದಿತ್ತು. ಇದೀಗ ಈ ಕಾಲ್ತುಳಿತದಲ್ಲಿ ಮೃತಪಟ್ಟ ಯುವತಿಯ ಚಿನ್ನಾಭರಣವು ಕಳುವಾಗಿದೆ ಎಂದು ವರದಿಯಾಗಿದೆ.

RCB Bengaluru stampede case Young woman s jewellery stolen during autopsy complaint filed

ಇದೇ ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 18 ವರ್ಷದ ದಿವ್ಯಾಂಶಿ ಎನ್ನುವವರು ಸಾವನ್ನಪ್ಪಿದ್ದರು. ದಿವ್ಯಾಂಶಿ ಅವರ ತಾಯಿ ಅಶ್ವಿನಿ ಅವರು ಇದೀಗ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದಾರೆ. ಅವರು ದಾಖಲಿಸಿರುವ ದೂರಿನಲ್ಲಿ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

ಶವಪರೀಕ್ಷೆಯ ನಂತರ ಅವರ ಮಗಳ ದೇಹವನ್ನು ಹಸ್ತಾಂತರಿಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ದಿವ್ಯಾಂಶಿ ಅವರ ಚಿನ್ನದ ಕಿವಿಯೋಲೆಗಳನ್ನು ಕಳ್ಳತನ ಮಾಡಲಾಗಿದೆ. ಈ ಒಡವೆಗಳು ಕಳುವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದಿವ್ಯಾಂಶ ಅವರಿಗೆ ಕಿವಿಯೋಲೆಗಳನ್ನು ಒಂದೂವರೆ ವರ್ಷಗಳ ಹಿಂದೆ ಅವರ ಚಿಕ್ಕಪ್ಪ ಗಿಫ್ಟ್‌ ಆಗಿ ಕೊಟ್ಟಿದ್ದರು. ಮಗಳು ಅದನ್ನು ಸದಾ ಹಾಕಿಕೊಳ್ಳುತ್ತಿದ್ದರು. ಆ ದುರಂತ ಸಂಭಸಿದ ದಿನವೂ ಅವರು ಆ ಒಡವೆಗಳನ್ನು ಧರಿಸಿದ್ದರು ಎಂದು ಹೇಳಲಾಗಿದೆ.

ಅಲ್ಲದೇ ದೂರಿನಲ್ಲಿ ಮತ್ತೊಂದು ಗಂಭೀರವಾದ ವಿಚಾರವನ್ನೂ ಅವರು ಉಲ್ಲೇಖ ಮಾಡಿದ್ದಾರೆ. ದೂರು ನೀಡುವುದಕ್ಕೆ ನಾನು ಹಲವು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೆ. ಆದರೆ ಯಾರೂ ದೂರು ದಾಖಲಿಸಿಕೊಳ್ಳಲಿಲ್ಲ. ಯಾವುದೇ ಪರಿಹಾರ ಸಿಗಲಿಲ್ಲ ಎಂದಿದ್ದಾರೆ. ನಾವು ಎಲ್ಲಾ ವಸ್ತುಗಳನ್ನು ಕೇಳುತ್ತಿಲ್ಲ. ನಮಗೆ ಬೇಕಾಗಿರುವುದು ಅವರ ಜ್ಞಾಪಕಾರ್ಥವಾಗಿ ಅವಳ ಕಿವಿಯೋಲೆಗಳು ಮಾತ್ರ ಎಂದು ಕಣ್ಣೀರು ಹಾಕಿದ್ದಾರೆ.

ಏನಿದು ಪ್ರಕರಣ: ರಾಯಲ್ ಚಾಲೆಂಜರ್ಸ್ಸ್‌ ಬೆಂಗಳೂರು ಸಂಭ್ರಮಾಚರಣೆಯ ವೇಳೆ ಭಾರೀ ದುರಂತ ಸಂಭವಿಸಿತ್ತು. ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊಟ್ಟ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆದರೆ, ಆ ಸಂಭ್ರಮಾಚರಣೆ ತುಂಬಾ ಸಮಯ ಉಳಿಯಲಿಲ್ಲ. ಆರ್‌ಸಿಬಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯ ಸಂದರ್ಭದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+