ಜಯನಗರದ ಅಭಿವೃದ್ಧಿಗೆ ರವಿಕೃಷ್ಣಾ ರೆಡ್ಡಿ 5 ಸೂತ್ರಗಳು
Recommended Video

ಬೆಂಗಳೂರು, ಡಿಸೆಂಬರ್ 29 : ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆರಂಭಿಸಿ ಅದರ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ರವಿ ಕೃಷ್ಣಾರೆಡ್ಡಿ ಜಯನಗರ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ಬಯಸಿದ್ದಾರೆ.
ರಾಜಕಾರಣದಲ್ಲಿ ತತ್ವ, ಸಿದ್ದಾಂತ, ಆದರ್ಶಗಳು ಇನ್ನೂ ಉಳಿದಿವೆ. ಹಣ, ಹೆಂಡ ಹಂಚದೇ ಚುನಾವಣೆಗೆ ನಿಂತು ಗೆದ್ದೆಗೆಲ್ಲುವೆ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ.
ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿರುವ ಅವರು ಜಯನಗರ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು 5 ಸೂತ್ರವನ್ನು ಸಿದ್ಧ ಮಾಡಿಕೊಂಡಿರುವುದಾಗಿ ಹೇಳಿದರು. ಅವರು ಹೇಳಿರುವ ಐದು ಅಂಶಗಳು ಇಲ್ಲಿವೆ.

1. ಕ್ಷೇತ್ರದಲ್ಲಿ ಆರ್‌ಟಿಓ ಕಚೇರಿ, ಸರ್ಕಾರಿ ಆಸ್ಪತ್ರೆ, ನಾಡ ಕಚೇರಿ, ಬಿಬಿಎಂಪಿ ಉಪ ವಿಭಾಗವಿದೆ. ಕ್ಷೇತ್ರದ ಎಲ್ಲಾ ಕಚೇರಿಗಳು ಲಂಚ ಮುಕ್ತವಾಗಬೇಕು.
2 . ಬಡವರ ಮಕ್ಕಳು ಹೋಗುವ ಸರ್ಕಾರಿ ಶಾಲೆಗಳು ಗುಣಮಟ್ಟದಲ್ಲಿ ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಅಭಿವೃದ್ಧಿ ಮಾಡಬೇಕು. ಅತ್ಯುತ್ತಮ ಗುಣಮಟ್ಟಣದ ಶಿಕ್ಷಣ ಒಂದು ವರ್ಷದಲ್ಲಿಯೇ ಸಿಗುವಂತೆ ಆಗಬೇಕು.
3. ಇಡೀ ಬೆಂಗಳೂರು ನಗರಕ್ಕೆ ಮಾದರಿಯಾದ ಟ್ರಾಫಿಕ್ ವ್ಯವಸ್ಥೆಯನ್ನು ಜಯನಗರದಲ್ಲಿ ಮಾಡಬೇಕು.
4. ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಜಯನಗರದ ಜನರು ವಿದ್ಯಾವಂತರು, ಬುದ್ಧಿವಂತರು. ಕ್ಷೇತ್ರದಲ್ಲಿ ಸುಮಾರು 40 ಎಕರೆಯಷ್ಟು ಸರ್ಕಾರಿ ಜಾಗ ಖಾಲಿ ಇದೆ. ಅಲ್ಲಿ ಉದ್ಯಾನ ನಿರ್ಮಾಣವಾಗಬೇಕು. ಖಾಲಿ ಸರ್ಕಾರಿ, ಖಾಸಗಿ ಜಾಗದಲ್ಲಿ ಮರಗಳನ್ನು ಬೆಳೆಸಬೇಕು.
5. ಸರ್ಕಾರಿ ಆಸ್ಪತ್ರೆ, ನಿಮ್ಹಾನ್ಸ್, ಸಂಜಯ್ ಗಾಂಧಿ ಆಸ್ಪತ್ರೆ ಸೇರಿ ಹಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಜಯನಗರದಲ್ಲಿವೆ. ಅವುಗಳನ್ನೆಲ್ಲಾ ಸೇರಿಸಿ ಬೆಂಗಳೂರು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕು.












Click it and Unblock the Notifications