ರವಿ ಬೆಳಗೆರೆ ಆರೋಗ್ಯದಲ್ಲಿ ಮತ್ತೆ ಏರುಪೇರು, ಕೆಐಡಿಗೆ ದಾಖಲು

ಬೆಂಗಳೂರು, ಡಿಸೆಂಬರ್ 13: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದೆ.

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ರವಿ ಬೆಳಗೆರೆ ಅವರು ತೀವ್ರ ರಕ್ತದ ಒತ್ತಡ ಉಂಟಾಗಿದೆ. ಇದರಿಂದ ಬುಧವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಯ ಆವರಣದಲ್ಲಿರುವ ಕರ್ನಾಟಕ ಮಧುಮೇಹ ಸಂಸ್ಥೆ (ಕೆಐಡಿ)ಗೆ ದಾಖಲಿಸಲಾಗಿದೆ. ರವಿ ಬೆಳಗೆರೆ ಜೊತೆ ಪುತ್ರಿ ಚೇತನಾ ಮತ್ತು ಪುತ್ರ ಕರ್ಣ ಇದ್ದಾರೆ.

Ravi Belegere admitted to KID for health issues

ಮಂಗಳವಾರ ಸಂಜೆ ಕೂಡ ಇದೇ ಕಾರಣಕ್ಕೆ ರವಿ ಬೆಳಗೆರೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮತ್ತೊಂದೆಡೆ ಮಧ್ಯಂತರ ಜಾಮೀನು ಕೋರಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+