ಗಾಯತ್ರಿನಗರ ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಸಿಕ್ಕಿತು ಇಲಿ!
ಬೆಂಗಳೂರು, ಆಗಸ್ಟ್ 14: ಗಾಯತ್ರಿನಗರದ ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಇಲಿ ಪತ್ತೆಯಾದ ಘಟನೆ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಾಂಬಾರಿನಲ್ಲಿ ಇಲಿ ಕಂಡು ಪೌರಕಾರ್ಮಿಕರು ಬೆಚ್ಚಿಬಿದ್ದರು.
72ನೇ ಸ್ವಾತಂತ್ರ್ಯ ದಿನಾಚರಣೆ 2018
ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಒಂದಾಗಿತ್ತು. ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರವನ್ನು ಪೂರೈಸಿ ಲಕ್ಷಾಂತರ ಜನರ ಹಸಿವು ನೀಗಿಸಿತ್ತು, ಹಗಾಗಿಯೇ ಈಗಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಲು ಅನುಮತಿ ನೀಡಿತ್ತು.
ಆದರೆ ಇಂತಹ ಬೇಜವಾಬ್ದಾರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗಾಯತ್ರಿನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಪೂರೈಸುವಾಗ ಸಾಂಬಾರಿನಲ್ಲಿ ಇಲಿ ಬಿದ್ದಿರುವುದನ್ನು ಕಂಡು ಪೌರಕಾರ್ಮಿಕರು ಬೆಚ್ಚಿಬಿದ್ದಿದ್ದಾರೆ, ಚೆಟ್ ಆಫ್ ಸಂಸ್ಥೆಯಿಂದ ಈ ಎಡವಟ್ಟಾಗಿದೆ. ಈ ಕುರಿತು ಸಂಸ್ಥೆ ಬಗ್ಗೆ ಜಂಟಿ ವಲಯ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

ಯಾವುದೋ ಒಂದು ಕ್ಯಾಂಟೀನ್‌ನಲ್ಲಿ ಈ ರೀತಿಯಾಗಿದೆ ಎಂದರೆ ಎಲ್ಲಾ ಕ್ಯಾಂಟೀನ್‌ಗಳು ಇದೇ ರೀತಿ ಇರುತ್ತವೆ ಎಂದು ಭವಿಸುವುದು ತಪ್ಪಾಗುತ್ತದೆ ಆದರೆ ಈ ಘಟನೆ ಸಾರ್ವಜನಿಕರಲ್ಲಿ ಅತಂಕಮೂಡಿಸಿರುವುದಂತೂ ಸತ್ಯ. ಇನ್ನುಮುಂದೆ ಇಂದಿರಾಕ್ಯಾಂಟೀನ್ ಬರುವವರ ಸಂಖ್ಯೆ ಕೊಂಚ ಕಡಿಮೆಯಾಗಬಹುದು.











Click it and Unblock the Notifications