• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹದಿಹರೆಯದವರನ್ನು ಸಾವಿನ ದವಡೆಗೆ ತಳ್ಳುವ ಅಪರೂಪದ ಕಾಯಿಲೆ ಬಗ್ಗೆ ನಿಮಗೆಷ್ಟು ಗೊತ್ತು?

|

ಬೆಂಗಳೂರು, ನವೆಂಬರ್ 19: ಕೊರೊನಾವೈರಸ್ ಹಾಗೂ ಚಾಪರೆ ವೈರಸ್‌ನಿಂದ ಇಡೀ ಜಗತ್ತೇ ಆತಂಕದಲ್ಲಿ ಮುಳುಗಿದೆ.

ಇದೀಗ ಕೊರೊನಾವೈರಸ್ ಜತೆಗೆ ಮತ್ತೊಂದು ಕಾಯಿಲೆ ಸೇರಿಕೊಂಡು ಹದಿಹರೆಯದವರನ್ನು ಸಾವಿನ ದವಡೆಗೆ ನೂಕುತ್ತಿದೆ.

ಬಂದಿದೆ ಮೆದುಳನ್ನೇ ನಿಷ್ಕ್ರಿಯಗೊಳಿಸಬಲ್ಲ ಹೊಸ ವೈರಸ್

ಹೌದು ಬೆಂಗಳೂರಿನಲ್ಲಿ ಈ ಕಾಯಿಲೆ ಹೆಚ್ಚಾಗಿರುವುದು ತಿಳಿದುಬಂದಿದೆ. ಬಹುತೇಕ ಮಕ್ಕಳು ಕೊವಿಡ್ ಲಕ್ಷಣ ರಹಿತ ಅಥವಾ ಸಾಧಾರಣ ಸೋಂಕಿಗೆ ತುತ್ತಾದರೂ ಬೆಂಗಳೂರಿನ 14 ವರ್ಷದ ಹದಿಹರೆಯದ ಯುವತಿಯೊಬ್ಬಳು ಅಪರೂಪದ ಕಾಯಿಲೆಯಿಂದಾಗಿ ಸಾವಿನ ಬಾಗಿಲು ಬಡಿದು, ಇದೀಗ ಚೇತರಿಸಿಕೊಂಡಿದ್ದಾಳೆ. ಈ ಕಾಯಿಲೆ ಕುರಿತು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

 ಅಕ್ಟೋಬರ್ 14 ರಂದು ಆಸ್ಪತ್ರೆಗೆ ದಾಖಲು

ಅಕ್ಟೋಬರ್ 14 ರಂದು ಆಸ್ಪತ್ರೆಗೆ ದಾಖಲು

ಅಕ್ಟೋಬರ್ 14 ರಂದು ಆಸ್ಪತ್ರೆಗೆ ದಾಖಲಾಗಿದ್ದ ಈ ಯುವತಿ, ಸಾರ್ಸ್ -ಕೋವ್-2 ಜೊತೆಗೆ ತಾತ್ಕಾಲಿಕವಾಗಿ ಸಂಬಂಧ ಹೊಂದಿರುವ ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್ ಕಾರಣದಿಂದಾಗಿ ಹೃದಯ, ಉಸಿರಾಟ ತೊಂದರೆ ಸೇರಿದಂತೆ ಬಹು ಅಂಗಾಂಗ ಸಮಸ್ಯೆಯಿಂದ ನರಳಿದ್ದಾರೆ. ವಿಶ್ವದಾದ್ಯಂತ ಈ ಕಾಯಿಲೆ ಕಂಡುಬರುತ್ತಿದೆ.

 ಕಿಡ್ನಿ ಮತ್ತು ಸ್ನಾಯು ದೌರ್ಬಲ್ಯದ ಸಮಸ್ಯೆ

ಕಿಡ್ನಿ ಮತ್ತು ಸ್ನಾಯು ದೌರ್ಬಲ್ಯದ ಸಮಸ್ಯೆ

ಕಿಡ್ನಿ ಮತ್ತು ನರ ಸ್ನಾಯು ದೌರ್ಬಲ್ಯ ಸಮಸ್ಯೆಯಿಂದ ಆಕೆ ಚೇತರಿಸಿಕೊಂಡಿದ್ದು, ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ನಾಲ್ಕು ದಿನಗಳವರೆಗೂ ಯಾವುದೇ ಆಹಾರವನ್ನು ನೀಡಿಲ್ಲ, ನಂತರ ಆಹಾರ ನೀಡಲು ಶುರು ಮಾಡಲಾಯಿತು. ಸೂಕ್ತ ಚಿಕಿತ್ಸೆಯಿಂದಾಗಿ ಆಕೆಯ ರಕ್ತದೊತ್ತಡ ಪ್ರಮಾಣ ಸರಿಯಾಗಿ ಪ್ರಾಣವನ್ನು ಉಳಿಸಲಾಯಿತು ಎಂದು ಡಾ. ಶ್ರೀಧರ್ ತಿಳಿಸಿದ್ದಾರೆ.

 ಆಸ್ಪತ್ರೆಯಲ್ಲಿದ್ದಾಗ ಕಂಡು ಬಂದ ಲಕ್ಷಣಗಳು

ಆಸ್ಪತ್ರೆಯಲ್ಲಿದ್ದಾಗ ಕಂಡು ಬಂದ ಲಕ್ಷಣಗಳು

ಆಕೆ ಆಸ್ಪತ್ರೆಗೆ ದಾಖಲಾದಾಗ ಜ್ವರ, ಭೇದಿ, ಆಯಾಸ ಮತ್ತು ಉಸಿರಾಟದ ತೊಂದರೆ, ಕಡಿಮೆ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಗಳಿದ್ದವು. ಆದಾಗ್ಯೂ, ಆರ್ ಪಿಟಿ- ಪಿಸಿಆರ್ ಟೆಸ್ಟ್ ನಲ್ಲಿ ಕೊವಿಡ್- ನೆಗೆಟಿವ್ ಬಂದಿದ್ದು, ಈ ಹಿಂದೆ ಆಕೆ ರೋಗಕ್ಕೆ ತುತ್ತಾಗಿದ್ದಾಗಿ ರೋಗ ನಿರೋಧಕ ಪರೀಕ್ಷೆಯಲ್ಲಿ ತಿಳಿಸಲಾಗಿದೆ.

 ತೀವ್ರ ಉರಿಯೂತ, ಜ್ವರ ಪ್ರಮುಖ ಸಮಸ್ಯೆ

ತೀವ್ರ ಉರಿಯೂತ, ಜ್ವರ ಪ್ರಮುಖ ಸಮಸ್ಯೆ

ಪಿಐಎಂಸ್- ಟಿಸ್ ಕಾರಣದಿಂದ ಇದು ಕಂಡುಬಂದಿದೆ ಎಂದು ರೈನ್ ಬೋ ಮಕ್ಕಳ ಆಸ್ಪತ್ರೆ ವೈದ್ಯರು ಶಂಕಿಸಿದ್ದಾರೆ. ಸಾರ್ಸ್ -ಕೋವ್ 2ಗೆ ಒಡ್ಡಿಕೊಂಡ ನಂತರ ನಿರಂತರ ಜ್ವರ ಮತ್ತು ತೀವ್ರ ಉರಿಯೂತವನ್ನು ಒಳಗೊಂಡ ಅಪರೂಪದ ವ್ಯವಸ್ಥಿತ ಕಾಯಿಲೆಯಾಗಿದೆ. ಮಕ್ಕಳಿಗೆ ರೋಗ ನಿರೋಧಕವನ್ನು ನೀಡಲು ಆರಂಭಿಸಿರುವುದಾಗಿ ಮಕ್ಕಳ ತೀವ್ರ ನಿಗಾ ಸಲಹೆಗಾರ ಡಾ. ಶ್ರೀಧರ್ ತಿಳಿಸಿದ್ದಾರೆ.

English summary
Although most children who contract Covid are either asymptomatic or have moderate symptoms, a 14-year-old girl from Bengaluru developed life-threatening post-illness complications and has recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X