ರವೀಂದ್ರ ಕಲಾಕ್ಷೇತ್ರದಲ್ಲಿ ರಂಗವಸಂತ ವಿಶೇಷ ರಂಗೋತ್ಸವ
ಬೆಂಗಳೂರು, ಏಪ್ರಿಲ್ 03: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ನಾಟಕ ಅಕಾಡೆಮಿ ಸಹಕಾರದೊಂದಿಗೆ ರಂಗ ವಸಂತ ವಿಶೇಷ ರಂಗೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆರಂಭಿಸಿದೆ.
ಸೋಮವಾರದಿಂದ ನಾಟಕೋತ್ಸವ ಪ್ರಾರಂಭವಾಗಿದ್ದು, ಏಪ್ರಿಲ್ 10ರವರೆಗೆ ನಡೆಯಲಿದೆ. ಏ.3ರಂದು ಎಚ್.ಎಸ್ ಶಿವಪ್ರಕಾಶ್ ರಚಿತ, ಸುರೇಶ್ ಆನಗಳ್ಳಿ ನಿರ್ದೇಶನದ, ಪ್ರಯೋಗ ರಂಗ ತಂಡ ಅಭಿನಯಿಸುವ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ಪ್ರದರ್ಶನ ನಡೆಯಲಿದೆ.
ಏಪ್ರಿಲ್ 4ರಂದು ಬುಧವಾರ ಗಿರೀಶ್ ಕಾರ್ನಾಡ್ ರಚಿತ, ಬಿ.ವಿ. ಕಾರಂತ್ ನಿರ್ದೇಶನದ, ಬೆನಕ ತಂಡವು ಹಯವದನ ನಾಟಕವನ್ನು ಪ್ರಸ್ತುತಪಡಿಸಲಿದೆ. ಏಪ್ರಿಲ್ 5ರಂದು ಗುರುವಾರ ಡಾ. ಕೆ.ವೈ ನಾರಾಯಣಸ್ವಾಮಿ ರಚಿಸಿರುವ ಪ್ರಕಾಶ್ ಪಿ. ಶೆಟ್ಟಿ ನಿರ್ದೇಶನದ ರಂಗಮಂಟಪ ತಂಡದಿಂದ ಮಲ್ಲಿಗೆ ನಾಟಕ ಪ್ರದರ್ಶನಗೊಳ್ಳಲಿದೆ.

ಏಪ್ರಿಲ್ 6ರಂದು ಬಿ.ಎಂ. ಗಿರಿರಾಜ್ ರಚಿಸಿ ನಿರ್ದೇಶಿಸಿರುವ, ನಿರ್ಗುಣ ತಂಡ ಸುಗಂಧದ ಸೀಮೆಯಾಚೆ ನಾಟಕ ಪ್ರಸ್ತುತಪಡಿಸಲಿದೆ.ಏಪ್ರಿಲ್ 7 ರಂದು ಡಾ. ಚಂದ್ರಶೇಖರ್ ಕಂಬಾರ ರಚಿತ, ರಾಮಕೃಷ್ಣ ಬೆಳ್ತೂರು ನಿರ್ದೇಶನದ, ಜನಪದರು ತಂಡದಿಂದ ಸಾಂಬಶಿವ ಪ್ರಹಸನ ತೆರೆಯ ಮೇಲೆ ಪ್ರದರ್ಶನಗೊಳ್ಳಲಿದೆ.
ಏಪ್ರಿಲ್ 8ರಂದು ಭಾನುವಾರ ಬಲೂರು ರಘುನಂದ್ ರಚಿತ, ದಾಕ್ಷಾಯಿಣಿ ಭಟ್ ನಿರ್ದೇಶನದ, ದೃಶ್ಯ ರಂಗತಂಡ ಅಭಿನಯಿಸುವ ರಕ್ತವರ್ಣ ನಾಟಕ ತೆರೆಕಾಣಲಿದೆ. ಏಪ್ರಿಲ್ 9ರಂದು ಅನಕೃ ರಚಿತ, ಕಬ್ಬಡ್ಡಿ ರಾಮಚಂದ್ರ ನಿರ್ದೇಶನದ, ಕಲಾವಿದರ ಬಳಗ ಸ್ವರ್ಣಮೂರ್ತಿ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಏಪ್ರಿಲ್ 10ರಂದು ಟಿ.ಎಸ್. ಲೋಹಿತಾಶ್ವ ಕನ್ನಡಕ್ಕೆ ಅನುವಾದಿಸಿರುವ, ಡಾ. ಬಿ.ವಿ. ರಾಜಾರಾಂ ನಿರ್ದೇಶನದ, ಕಲಾಗಂಗೋತ್ರಿ ಅಭಿನಯದ ಮುಖ್ಯಮಂತ್ರಿ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿ ದಿನವೂ ಸಂಜೆ 6.30ಕ್ಕೆ ನಾಟಕ ಪ್ರಾರಂಭವಾಗಲಿದೆ.












Click it and Unblock the Notifications