ರಾಮನಗರದಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ
ರಾಮನಗರ, ಡಿ. 23: ದೇಶದ ವಿವಿಧೆಡೆ ಬಾಂಗ್ಲಾದೇಶಿ ಅಕ್ರಮ ವಲಸೆಗಾರರನ್ನು ಬಂಧಿಸಲಾಗುತ್ತಿದೆ. ಈಗ ರಾಜ್ಯ ರಾಜಧಾನಿ ಪಕ್ಕದ ರಾಮನಗರದಲ್ಲಿಯೇ 8 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದೆ ಅಕ್ರಮವಾಗಿ ವಲಸೆ ಬಂದು ರಾಮನಗರದಲ್ಲಿ ಕೂಲಿ ಮಾಡುತ್ತಿದ್ದ 8 ಬಾಂಗ್ಲಾದೇಶಿ ಪ್ರಜೆಗಳನ್ನು ಸೋಮವಾರ ಬಂಧಿಸಲಾಗಿದೆ. ರಾಮನಗರದ ಬಿಳಗುಂಬ ರಸ್ತೆಯಲ್ಲಿರುವ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಐವರು ಹಾಗೂ ಹಾರೋಹಳ್ಳಿಯಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. [ವೈದ್ಯೆಗೆ ಕಿರುಕುಳ ನೀಡಿದ ಉದ್ಯಮಿ ಬಂಧನ]

ಅಬೀಬುಲ್ಲಾ ಇಸ್ಲಾಂ, ಮೊಹಮದ್ ಆರಿಫ್ ಉಲ್ ಇಸ್ಲಾಂ, ಮೊಹಮದ್ ಸೈವಾನ್, ಮೊಹಮದ್ ಹಸನ್, ಮೊಹಮದ್ ರಹ್ಯಾನ್, ಹನೀಫ್ ರೋಹಾನ್, ಮುಷರೀಫ್, ಶೀಮೂಲ್ ಮಂಡೋಲ್ ಬಂಧಿತ ಆರೋಪಿಗಳು. ಇವರೆಲ್ಲರೂ 20ರಿಂದ 22 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ. [ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ಗಸ್ತು]
ಈ ಬಾಂಗ್ಲಾ ಪ್ರಜೆಗಳು ಕೋಲ್ಕತ್ತಕ್ಕೆ ನುಸುಳಿ ಬಂದು, ಅಲ್ಲಿಂದ ಮೂರು ತಿಂಗಳ ಹಿಂದೆ ರೈಲಿನಲ್ಲಿ ರಾಮನಗರಕ್ಕೆ ಬಂದು ಕೂಲಿ ಕೆಲಸ ಮಾಡುತ್ತಿದ್ದರು. ಇವರ ಕುರಿತು ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಐವರನ್ನು ರಾಮನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಗೂ ಹಾರೋಹಳ್ಳಿಯಲ್ಲಿ ಬಂಧಿಸಿದ ಮೂವರನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.












Click it and Unblock the Notifications