• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನನಗೆ ನೋವು, ಬೇಸರ ಇಲ್ಲ': ರಾಜ್ಯಸಭೆ ಟಿಕೆಟ್ ವಂಚಿತ ರಮೇಶ್ ಕತ್ತಿ

|
Google Oneindia Kannada News

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ರಮೇಶ್ ಕತ್ತಿಗೆ ಟಿಕೆಟ್ ಸಿಗೋದು ಬಹುತೇಕ ಖಚಿತ. ರಾಷ್ಟ್ರೀಯ ನಾಯಕರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಅಧಿಕೃತ ಪಟ್ಟಿಯಲ್ಲಿ ರಮೇಶ್ ಕತ್ತಿ ಹೆಸರು ಇರಲಿಲ್ಲ. ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಗೆ ರಾಜ್ಯಸಭೆ ಟಿಕೆಟ್ ಘೋಷಣೆ ಆಯಿತು.

ರಾಜ್ಯಸಭೆಗೆ ಪ್ರವೇಶ ಮಾಡುವ ತವಕದಲ್ಲಿದ್ದ ರಮೇಶ್ ಕತ್ತಿಗೆ ನಿರಾಸೆಯಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮೇಶ್ ಕತ್ತಿ ''ಪಕ್ಷದ ವರಿಷ್ಠರು ಕೆಳಮಟ್ಟದ ಕಾರ್ಯಕರ್ತರಿಗೆ ಟಿಕೇಟ್ ಕೊಟ್ಟಿದ್ದಾರೆ. ಇದರ ಮೂಲಕ ಒಳೆಯ ಸಂದೇಶ ರವಾನಿಸಿದ್ದಾರೆ. ಅವರುಗಳು ಪಕ್ಷಕ್ಕೆ ತುಂಬಾ ಕೆಲಸ ಮಾಡಿದ್ದಾರೆ'' ಎಂದಿದ್ದಾರೆ.

ರಾಜ್ಯಸಭೆ ಚುನಾವಣೆ; ಬಿಜೆಪಿಗೆ 9 ಸ್ಥಾನ, ಬಹುಮತವಿಲ್ಲ! ರಾಜ್ಯಸಭೆ ಚುನಾವಣೆ; ಬಿಜೆಪಿಗೆ 9 ಸ್ಥಾನ, ಬಹುಮತವಿಲ್ಲ!

ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡುವ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ ಕತ್ತಿ ''ಯಡಿಯೂರಪ್ಪ ಅವರು ಮಾತಾಡಿದ್ರು. ನಮಗೆ ಮಾತ್ ಕೊಟ್ಟಿದ್ರು. ಆದರೆ ವರಿಷ್ಠರು ಹೇಳಿದ ಹಾಗೆ ಎಲ್ಲಾ ಕೇಳಬೇಕು. ನಮಗೆ ನೋವು, ಬೇಸರ ಇಲ್ಲ'' ಎಂದು ಹೇಳಿದ್ದಾರೆ.

ರಾಜ್ಯದ ಕೋರ್ ಕಮಿಟಿಯಲ್ಲಿ ಚರ್ಚೆಯಾದ ಹೆಸರುಗಳು ಬೇರೆ. ಆದರೆ, ರಾಷ್ಟ್ರೀಯ ನಾಯಕರು ಘೋಷಿಸಿದ ಹೆಸರುಗಳೇ ಬೇರೆ. ಇದು ಸಹಜವಾಗಿ ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿಗೆ ತಂದಿದೆ. ಈ ಆಯ್ಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಕೈವಾಡ ಇದೆ ಎಂಬ ಮಾತಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಉತ್ತರಿಸಿದ ಕತ್ತಿ ''ಸಂತೋಷ್ ಮತ್ತು ಯಡಿಯೂರಪ್ಪ ಇಬ್ಬರೂ ಹಿರಿಯರು. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ'' ಎಂದಿದ್ದಾರೆ.

'ನಮ್ಮಲ್ಲಿ ಜೀನ್ಸ್ ನಲ್ಲೇ ಇದೆ ಜಮಸೇವೆ ಮಾಡೋದು. ಜನಸೇವೆ ಮಾಡೋಕೆ ಅಧಿಕಾರವೇ ಬೇಕೆಂದಿಲ್ಲ. ನಾನು ಎಂಎಲ್ ಸಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ರಾಜ್ಯಸಭೆ ಟಿಕೆಟ್ ವಂಚಿತ ರಮೇಶ್ ಕತ್ತಿ ತಿಳಿಸಿದ್ದಾರೆ.

English summary
BJP Leader Ramesh Katti Congratulated to Iranna Kadadi and Ashok Gasti for Candidates For Karnataka Rajya Sabha Polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X