ಸಿಡಿ ಪ್ರಕರಣ: ಪತ್ರಕರ್ತನ ಧ್ವನಿ ಮಾದರಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ !
ಬೆಂಗಳೂರು, ಮಾರ್ಚ್ 15 : ರಮೇಶ್ ಜಾರಕಿಹೊಳಿ ಸಿಡಿಯಲ್ಲಿ ಕಾಣಿಸಿಕೊಂಡಿರುವ ಧ್ವನಿ ಪತ್ತೆ ಮಾಡಲು ಮುಂದಾಗಿರುವ ವಿಶೇಷ ತನಿಖಾ ತಂಡ ಚಿಕ್ಕಮಗಳೂರು ಮೂಲದ ಪತ್ರಕರ್ತನ ಧ್ವನಿ ಮಾದರಿಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ. ಮಾ. 2 ರಂದು ಬಿಡುಗಡೆಯಾದ ಸಿಡಿಯಲ್ಲಿ ಜಾರಕಿಹೊಳಿ ಜತೆ ಯುವತಿ ಮಾತನಾಡುವ ವೇಳೆ ಮತ್ತೊಬ್ಬರು ಮಾತನಾಡುವ ಧ್ವನಿ ಕೇಳಿಸಿತ್ತು. ಇದೊಂದು ಷಡ್ಯಂತ್ರವೇ ? ಸಿಡಿಯಲ್ಲಿ ಕೇಳಿಸಿರುವ ಧ್ವನಿ ಯಾರದ್ದು ಎಂಬುದನ್ನು ಪತ್ತೆ ಮಾಡಲು ಎಸ್ಐಟಿ ಮುಂದಾಗಿದೆ.
ಪ್ರಕರಣವನ್ನು ವಿಶೇಷ ತನಿಖಾ ತಂಡ ಕೈಗೆತ್ತಿಕೊಳ್ಳುತ್ತಿದ್ದಂತೆ ಐವರನ್ನು ವಿಚಾರಣೆಗೆ ಒಳಪಡಿಸಿತ್ತು. ಅದರಲ್ಲಿ ಪ್ರಮುಖವಾಗಿ ಚಿಕ್ಕಮಗಳೂರು ಮೂಲದ ಪತ್ರಕರ್ತನ ಧ್ವನಿ ಮಾದರಿ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ. ಧ್ವನಿ ಮಾದರಿಯಲ್ಲಿ ಸಾಮ್ಯತೆ ಕಂಡು ಬಂದರೆ, ಪತ್ರಕರ್ತನನ್ನು ವಿಚಾರಣೆಗೆ ಒಳಪಡಿಸಿ ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನೆರಡು ದಿನದಲ್ಲಿ ಧ್ವನಿ ಪರೀಕ್ಷೆ ವರದಿ ಬರಲಿದೆ. ಇನ್ನು ಸಿಡಿಯಲ್ಲಿರುವ ಧ್ವನಿಗೂ ಹಾಗೂ ಚಿಕ್ಕಮಗಳೂರು ಮೂಲದ ಪತ್ರಕರ್ತನ ಧ್ವನಿಗೂ ಸಾಮ್ಯತೆ ಇರುವುದು ಕಂಡು ಬಂದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿಯೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Recommended Video
ಅಪ್ಲೋಡ್ ಜಾಡು ಪತ್ತೆ : ಇನ್ನು ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಅಪಲೋಡ್ ಮಾಡಲಿಕ್ಕೆ ಬೀದರ್ ಕೇಂದ್ರವನ್ನಾಗಿ ಬಳಿಸಿಕೊಂಡಿದ್ದರೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಸಂತ್ರಸ್ತೆ ಎನ್ನಲಾದ ಯುವತಿಯ ಲವರ್‌ನನ್ನು ಈಗಾಗಲೇ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೀಗ ಸೈಬರ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಯುವಕ ಎಸ್ಐಟಿ ವಶಕ್ಕೆ ಪಡೆಯುತ್ತಿದ್ದಂತೆ ಆತನ ಪೋಷಕರು ಕಣ್ಣೀರು ಹಾಕಿದ್ದಾರೆ. ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬೀದರ್‌ನಲ್ಲಿಯೇ ಈವರೆಗೆ ನಾಲ್ಕು ಮಂದಿಯನ್ನು ಈವರೆಗೆ ವಶಕ್ಕೆ ಪಡೆಯಲಾಗಿದೆ.












Click it and Unblock the Notifications