ಸಿಡಿಲೇಡಿ 2 ನೇ ಆಡಿಯೋದಲ್ಲಿ ಸ್ಫೋಟಕ ಸಂಗತಿ ಬಹಿರಂಗ !

ಬೆಂಗಳೂರು, ಮಾರ್ಚ್ 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮಹತ್ವದ ಬೆಳವಣಿಗೆ ಆಗಿವೆ. ಒಂದಡೆ ಯುವತಿ ಪೋಷಕರೇ ತನ್ನ ಮಗಳನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೆ. ನನ್ನ ಮಗಳನ್ನು ಇಟ್ಟು ಕೊಂಡು ಯಾಕೆ ರಾಜಕಾರಣ ಮಾಡುತ್ತೀರಾ ಎಂದು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದ್ರು. ಇದಾದ ಬಳಿಕವೇ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು. ಡಿ.ಕೆ. ಶಿವಕುಮಾರ್ ಷಡ್ಯಂತ್ರ ನಡೆಸಿರುವ ಬಗ್ಗೆ ರಮೆಶ್ ಜಾರಕಿಹೋಳಿ ನೇರ ಆರೋಪ ಮಾಡಿದರು. ಇದರ ಬೆನ್ನಲ್ಲೇ ಸಿಡಿ ಲೇಡಿಯ 2 ನೇ ಅಡಿಯೋ ಬಹಿರಂಗವಾಗಿದೆ. ಸಿಡಿ ಲೇಡಿ ತನ್ನ ಸಹೋದರ ಜತೆ ಮಾತನಾಡಿರುವ ಆಡಿಯೋದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ. ಮಾತ್ರವಲ್ಲ ಡಿ.ಕೆ. ಶಿವಕುಮಾರ್ ಹಣಕೊಟ್ಟು ಆಕೆಯನ್ನು ಗೋವಾಗೆ ಕಳುಹಿಸುತ್ತಿರುವ ವಿಚಾರವನ್ನು ಕೂಡ ಬಹಿರಂಗ ಪಡಿಸಿದ್ದು, ಈ ಅಡಿಯೋ ಸುಂಟರಗಾಳಿ ಎಬ್ಬಿಸಿದೆ. ಎರಡನೇ ಅಡಿಯೋದಲ್ಲಿರುವ ಸಮಗ್ರ ವಿವರ ಇಲ್ಲಿದೆ ನೋಡಿ.

ರಮೇಶ್ ಜಾರಕಿಜಲಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಎರಡನೇ ವಿಡಿಯೋದಲ್ಲಿ ಕೂಡ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ. ಡಿ.ಕೆ. ಶಿವಕುಮಾರ್ ಹಣ ಕೊಟ್ಟು ಸಿಡಿ ಲೇಡಿಯನ್ನು ಗೋವಾಗೆ ಕಳುಹಿಸುತ್ತಿರುವ ಬಗ್ಗೆ ಯುವತಿ ತನ್ನ ಸಹೋದರ ಜತೆ ಮಾತನಾಡಿದ್ದಾಳೆ. ಗೋವಾಗೆ ಹೋಗುವ ಮುನ್ನ ಆಕೆ ನಡೆಸಿರುವ ಸಂಭಾಷಣೆ ಅಡಿಯೋ ಇದೀಗ ವೈರಲ್ ಆಗಿದೆ. ಸಿಡಿ ಸ್ಫೋಟಗೊಳ್ಳುತ್ತಿದ್ದಂತೆ ಸಹೋದರಿ ಜತೆ ಮಾತನಾಡಿರುವ ಸಹೋದರ ಪ್ರಶ್ನೆ ಮಾಡಿದ್ದಾನೆ. ಒಂದು ನಿಮಿಷದ ಅಡಿಯೋದಲ್ಲಿ ಕೂಡ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪ ಆಗಿರುವುದು ಭಾರೀ ಸಂಚಲನ ಮೂಡಿಸಿದೆ.

ಡಿ.ಕೆ. ಶಿವಕುಮಾರ್ ನಮಗೆ ಹಣ ಕೊಟ್ಟು ಗೋವಾಗೆ ಕಳುಹಿಸಿದ್ದಾರೆ. ಯಾರಾದ್ರೂ ಕೇಳಿದರೆ, ಆರ್‌. ಟಿನ ನಗರ ಪಿಜಿಯಲ್ಲಿ ಇಲ್ಲ ಅಂತ ಹೇಳು. ವಿಜಯನಗರ, ಸಂಜಯನಗರದಲ್ಲಿದ್ದಾಳೆ ಅಂತ ಹೇಳು. ನಾನು ಈಗಲೇ ಸಿಮ್ ಕಾರ್ಡ್ ಬಿಸಾಕ್ತೀನಿ.. ಈ ಕೇಸ್ ಏನೂ ಆಗಲ್ಲ ತಲೆ ಕೆಡಿಸಿಕೊಳ್ಳಬೇಡ ಎಂದು ಯುವತಿ ತನ್ನ ಸಹೋದರಿಗೆ ಹೇಳಿದ್ದಾಳೆ.

Ramesh jarkiholi cd row: CD girl 2nd audio release

ನೀನು ಯಾವಾಗ ಊರಿಗೆ ಬರ್ತೀಯ ಎಂಬ ಪ್ರಶ್ನೆ ಮೂಲಕ ಮಾತು ಆರಂಭವಾಗುತ್ತದೆ. ಆಗಲೇ ಅವರು ಯಾವ ಊರಿಗೆ ಹೋಗಬೇಡ, ನಾನು ಹೇಳಿದಂಗೆ ಮಾಡು ಅಂದಿದ್ದಾರೆ. ಹೀಗಾಗಿ ನಾ ಬರಲ್ಲ. ಅವರು ಹೇಳಿದಂಗೆ ಮಾಡಬೇಕು ಎಂದಿದ್ದಾಳೆ. ಯಾರು ಹೇಳಿದ್ದಾಳೆ ಎಂಬ ಸಹೋದರನ ಪ್ರಶ್ನೆಗೆ, ಡಿಕೆಶಿ ಎಂದಿದ್ದಾಳೆ. ಅವರು ಮಧ್ಯದಲ್ಲಿ ಕೈ ಬಿಡುತ್ತಾರೆ ಎಂದು ಸಹೋದರ ಮರು ಪ್ರಶ್ನೆ ಮಾಡಿದಾಗ, ಅವರು ಬಿಡಲ್ಲ. (ಡಿ.ಕೆ. ಶಿವಕುಮಾರ್ ) ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ದಾರೆ. ನಾನು ಅಕಾಶ್ ಹೋಗುತ್ತಿದ್ದೇವೆ. ಯಾರೇ ಕೇಳಿದರೂ ಬೆಂಗಳೂರಿನಲ್ಲಿದ್ದಾಳೆ ಎಂದು ಹೇಳು ಎಂದು ಸಹೋದರಿಗೆ ಕಿವಿಮಾತು ಹೇಳಿದ್ದಾಳೆ. ಸಿಮ್ ಕಾರ್ಡ್ ತೆಗೆದು ಹಾಕಿದ್ದೇನೆ. ನಮ್ಮನ್ನು ಪುಣೆಗೆ ಕರೆಸಿಕೊಂಡಿದ್ದಾರೆ. ನನ್ನ ಜತೆಗೆ ಏಳೆಂಟು ಜನ ಇದ್ದಾರೆ ಡಿಕೆಶಿ ಮಂದಿ ಎಂದು ಹೇಳಿದ್ದಾಳೆ.

Recommended Video

      DK ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+