'ಮೋದಿ ಮಾತು ಚೀನಾ ಗೂಡ್ಸು, ಎರಡಕ್ಕೂ ಗ್ಯಾರಂಟಿ, ವಾರಂಟಿ ಇಲ್ಲ'
ಬೆಂಗಳೂರು, ಮೇ 5: ಪ್ರಧಾನಿ ಮೋದಿ ಮಾತಿಗೂ ಚೀನಾ ಗೂಡ್ಸು ಎರಡಕ್ಕೂ ಗ್ಯಾರಂಟಿ ಹಾಗೂ ವಾರಂಟಿ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸುಳ್ಳು ಹೇಳಿಕೆಗೆ ಚೀನಾ ಪ್ರೇರಣೆ ಮೋದಿ ಚೀನಾ ದೇಶವನ್ನ ಸುತ್ತಿ ಬಂದಿದ್ದಾರೆ ಮೋದಿಮಾತಿಗೆ ಗ್ಯಾರೆಂಟಿ ಇಲ್ಲ,ವಾರೆಂಟಿಯೂ ಇಲ್ಲ ಯಾಕೆಂದರೆ ಮೋದಿ ಚೀನಾ ಗೂಡ್ಸ್ ಇದ್ದಂತೆ
ಸುಳ್ಳಿನ ಭಾಷಣಕ್ಕೆ ನೊಬೆಲ್ ಬಹುಮಾನ ನೀಡಬೇಕು ಸುಳ್ಳು ಹೇಳುವುದರಲ್ಲೇ ಮೋದಿ ನಿರತರಾಗಿದ್ದಾರೆ ಪ್ರಧಾನಿ ಮೋದಿ ವಿರುದ್ಧ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಕ್ರೈಂ ಸಿಟಿ ಎಂದಿದ್ದಾರೆ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ ಮುಂಚೂಣಿಯಲ್ಲಿದೆ.ಇದೊಂದು ಹಸಿ ಸುಳ್ಳು ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿಯೇ ಕ್ರೈಂ ಹೆಚ್ಚಾಗಿದೆ ನಲಪಾಡ್ ಬಗ್ಗೆ ಮೋದಿ ಮಾತಾಡ್ತಾರೆ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಂಬಂಧಪಟ್ಟವರು ರೇಪ್ ಮಾಡ್ತಾರೆ, ಅವರ ಅಪ್ಪನ್ನ ಜೈಲಿನಲ್ಲಿ ಹತ್ಯೆ ಮಾಡುತ್ತಾರೆ ಅದು ಮೋದಿಯವರಿಗೆ ಕಾಣುವುದಿಲ್ಲವೇ ಎಂದಿದ್ದಾರೆ.

ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕ್ರೈಂ ಅತಿ ಹೆಚ್ಚಿದೆ ಎನ್ ಸಿ ಆರ್ ಬಿ ವರದಿಯೇ ಇದಕ್ಕೆ ಸಾಕ್ಷಿ ಬಿಜೆಪಿ ಸಂಸದರ ಮೇಲೆ ಹೆಚ್ಚು ಮಹಿಳಾ ದೌರ್ಜನ್ಯ ಕೇಸ್ ಇವೆ ರಾಜ್ಯದಲ್ಲೂ ಬಿಜೆಪಿ ಶಾಸಕರ ಮೇಲೆ ಪ್ರಕರಣಗಳಿವೆ ಕನ್ನಡಕ ಹಾಕಿಕೊಂಡು ಮೋದಿ ಇದನ್ನ ನೋಡಲಿ ನಮ್ಮ ಕಾಲಕ್ಕಿಂತ ನಿಮ್ಮ ಕಾಲದಲ್ಲಿ ಕ್ರೈಂ ಹೆಚ್ಚಾಗಿತ್ತು ಎಂದರು.
ಕರ್ನಾಟಕ ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತಿರಾ, ಬಿಜೆಪಿ 10 ವರ್ಷ ಮುಖ್ಯಮಂತ್ರಿ ಆಗಿದ್ದರು, ಲೋಕಾಯುಕ್ತ ನೇಮಿಸಿರಲಿಲ್ಲ, ಭ್ರಷ್ಟಾಚಾರ ಮಾಡಿದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆ ಈಡೇರಿಸಿದ್ದೀರಾ ಅಂತಾ ಕೇಳುತ್ತಾರೆ. ನೀವು ಉದ್ಯೋಗ ನೀಡುತ್ತೇವೆ ಅಂದಿದ್ದಿರಿ ಕೊಟ್ಟಿದ್ದಿರಾ, ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ, ಡಿಸೇಲ್ ಬೆಲೆ ಏನಾಗಿದೆ ಎಂದು ಪ್ರಶ್ನಿಸಿದರು.












Click it and Unblock the Notifications