ಬೆಂಕಿ ಹಚ್ಚುವುದು ಕಾಂಗ್ರೆಸ್ ಕೆಲಸ : ಬೆಂಗಳೂರಿನಲ್ಲಿ ರಾಜನಾಥ್ ಕಿಡಿ

Recommended Video

      ಬೆಂಕಿ ಹಚ್ಚೋದು ಕಾಂಗ್ರೆಸ್ ಕೆಲಸ | Oneindia Kannada

      ಬೆಂಗಳೂರು, ಡಿಸೆಂಬರ್ 17: ಪರಿವರ್ತನಾ ಯಾತ್ರೆಯ ಅಂಗವಾಗಿ ಇಂದು ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ಬಿಜೆಪಿ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು. ಆದರೆ ಸಮಾವೇಶದಲ್ಲಿ ಖಾಲಿ ಕುರ್ಚಿಗಳೇ ರಾರಾಜಿಸುತ್ತಿದ್ದವು. ಇದರಿಂದ ದೆಹಲಿಯಿಂದ ಬಂದಿದ್ದ ರಾಜನಾಥ್ ಸಿಂಗ್ ಮುಜುಗರ ಅನುಭವಿಸಂತಾಯ್ತು.

      ರಾಜನಾಥ್ ಸಿಂಗ್ ಭಾಷಣ ಮಾಡುವಾಗ ಕಲಶ ಹಿಡಿದು ಬಂದಿದ್ದ ಹೆಂಗಳೆಯರು ಮತ್ತು ಒಂದಷ್ಟು ಜನ ಮಾತ್ರ ಪೆಂಡಾಲ್ ಒಳಗಿದ್ದರು. ಇವರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಿದ್ದರಾಮಯ್ಯ ಸರಕಾರದ ವಿರುದ್ಧ ಹರಿಹಾಯ್ದರು.

      ಗೌರಿ ಹಂತಕರ ಬಂಧನ

      ಗೌರಿ ಹಂತಕರ ಬಂಧನ

      ಇತ್ತೀಚೆಗೆ ಪರೇಶ್ ಮೇಸ್ತ ಕೊಲೆಯಾಗಿದ್ದಾರೆ. ಈ ಹತ್ಯೆ ಪ್ರಕರಣಗಳಲ್ಲಿ ಸರಕಾರ ಏನು ಮಾಡುತ್ತಿದೆ? ಗೌರಿ ಲಂಕೇಶ್ ರನ್ನೂ ಕೊಲ್ಲಲಾಯಿತು. ಕರ್ನಾಟಕದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗೌರಿ ಲಂಕೇಶ್ ಹತ್ಯೆಯನ್ನು ಎಲ್ಲಾ ಕೋನಗಳಿಂದ ತನಿಖೆಗೊಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ನಾನು ನೀಡುತ್ತೇನೆ. ನಾವು ಯಾರನ್ನೂ ರಕ್ಷಿಸುವುದಿಲ್ಲ," ಎಂದು ವಾಗ್ದಾನ ನೀಡಿದರು.

      In Pics : ಮುರುಗೇಶ್ ಪಾಳ್ಯದಲ್ಲಿ ಮುಜುಗರ ಅನುಭವಿಸಿದ ರಾಜನಾಥ್ ಸಿಂಗ್

      ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ

      ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ

      ಇದೇ ವೇಳೆ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಎದುರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

      ಒಡೆದು ಆಳುವ ನೀತಿ

      ಒಡೆದು ಆಳುವ ನೀತಿ

      "ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ಸಮುದಾಯಗಳನ್ನು ಒಡೆದು ಆಳುತ್ತಿದೆ. ನಾನು ಪಡೆದುಕೊಂಡಿರುವ ಮಾಹಿತಿಗಳ ಪ್ರಕಾರ ಸಂವಿಧಾನಲ್ಲಿ ಅವಕಾಶವಿಲ್ಲದಿದ್ದರೂ ಇಲ್ಲಿನ ಮುಸ್ಲಿಮರಿಗೆ ಮೀಸಲಾತಿ ನೀಡಿ ವಂಚಿಸಲಾಯಿತು. ನಂತರ ಇದನ್ನು ನ್ಯಾಯಾಲಯ ರದ್ದುಗೊಳಿಸಿತು," ಎಂದು ಅವರು ಹೇಳಿದರು.

      ಬೆಂಕಿ ಹಚ್ಚುವುದು ಕಾಂಗ್ರೆಸ್ ಕೆಲಸ

      ಬೆಂಕಿ ಹಚ್ಚುವುದು ಕಾಂಗ್ರೆಸ್ ಕೆಲಸ

      "ನಾನು ರಾಹುಲ್ ಗಾಂಧಿಯವರನ್ನು ಅಭಿನಂದಿಸುತ್ತೇನೆ. ಆದರೆ ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ. ಬಿಜೆಪಿಯ ಯೋಜನೆಗಳಿಂದ ದೇಶದಲ್ಲಿ ಕೋಮುವಾದ, ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ಹೆಚ್ಚಾಯಿತೇ? ಕಾಶ್ಮೀರದಲ್ಲಿ ಕಿಚ್ಚು ಹಚ್ಚಲು ಬಿಜೆಪಿ ಪಾಲಿಸಿಗಳು ಕಾರಣವೇ? ಬೆಂಕಿ ಹಚ್ಚಲೆಂದೇ ಸರಕಾರ ರಚಿಸುವುದಿದ್ದರೆ ಅದು ಕಾಂಗ್ರೆಸ್ ಮಾತ್ರ. ಬಿಜೆಪಿ ಏನಿದ್ದರೂ ಬೆಂಕಿ ಶಮನ ಮಾಡುತ್ತದೆ," ಎಂದು ಅಭಿಪ್ರಾಯಪಟ್ಟರು.

      ಸಿದ್ದರಾಮಯ್ಯ ಬಚ್ಚಾ

      ಸಿದ್ದರಾಮಯ್ಯ ಬಚ್ಚಾ

      ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ, "ಸಿದ್ದರಾಮಯ್ಯನವರು ಮೋದಿಯವರಿಗೆ ನನ್ನನ್ನು ಕಂಡರೆ ಭಯ ಎನ್ನುತ್ತಾರೆ. ನೀನೊಬ್ಬ ಬಚ್ಚಾ.. ನಿನ್ನನ್ನು ಕಂಡರೆ ಮೋದಿಯವರು ಯಾಕೆ ಭಯವಾಗ್ತದೆ ಸಿದ್ದರಾಮಯ್ಯನವರೆ?," ಎಂದು ಪ್ರಶ್ನಿಸಿದ್ದಾರೆ.

      ಮೋದಿಗೆ ವಿಶ್ವ ಮನ್ನಣೆ

      ಮೋದಿಗೆ ವಿಶ್ವ ಮನ್ನಣೆ

      "ಪ್ರಪಂಚದ ಅನೇಕ ದೇಶಗಳ ಜನರು ಪ್ರಧಾನಿ ನರೇಂದ್ರ ಮೊದಿಯವರನ್ನು ಹೊಗಳುತ್ತಿದ್ದಾರೆ. ಜಗತ್ತೇ ಮೋದಿಯವರನ್ನು ಮೆಚ್ಚುತ್ತಿದೆ," ಎಂದು ಯಡಿಯೂರಪ್ಪ ತಿಳಿಸಿದರು.

      ಬೆಂಗಳೂರಿನಲ್ಲಿ ಎರಡನೇ ರ‍್ಯಾಲಿ

      ಬೆಂಗಳೂರಿನಲ್ಲಿ ಎರಡನೇ ರ‍್ಯಾಲಿ

      ಪರಿವರ್ತನಾ ಯಾತ್ರೆಯ ಭಾಗವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದೆ. ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಕಾಲೇಜು ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

      ಜನರಿಲ್ಲದೆ ಭಣ ಭಣ

      ಜನರಿಲ್ಲದೆ ಭಣ ಭಣ

      ಕಾರ್ಯಕ್ರಮದ ಉಸ್ತುವಾರಿಯನ್ನು ಶಾಸಕ ಅರವಿಂದ ಲಿಂಬಾವಳಿ ಹೊತ್ತಿದ್ದರು. ಕಾರ್ಯಕ್ರಮಕ್ಕೆ 42 ಸಾವಿರ ಜನರನ್ನು ಕರೆತರುವುದಾಗಿ ಪೂರ್ವಭಾವಿ ಸಭೆಯಲ್ಲಿ ವಿವಿಧ ಕ್ಷೇತ್ರದ ನಾಯಕರೂ ತಿಳಿಸಿದ್ದರು. ಆದರೆ ರಾಜನಾಥ್ ಸಿಂಗ್ ಬಂದಾಗ ಹೆಚ್ಚಿನ ಕುರ್ಚಿಗಳು ಖಾಲಿಯೇ ಉಳಿದಿದ್ದವು.

      ಉದ್ಘಾಟನಾ ದಿನದಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಇದೇ ರೀತಿ ಕುರ್ಚಿಗಳು ಖಾಲಿ ಉಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+