ಪ್ರೇಯಸಿಗಾಗಿ ಪ್ಲೈಟ್‌ನಲ್ಲಿ ಬಂದು 33 ಚಿನ್ನದಸರ ಎಗರಿಸಿದ ರಾಜಸ್ಥಾನ ಮೂಲದ ಕಳ್ಳ!
ಬೆಂಗಳೂರು, ಏ. 04: ಅವನು ರಾಜಸ್ಥಾನದವ. ಅಪ್ರಾಪ್ತೆಯನ್ನು ಮದುವೆಯಾಗಿ ಜೈಲಿಗೆ ಹೋಗಿದ್ದ. ಜೈಲಿನಿಂದ ಹೊರ ಬಂದ ಬಳಿಕ ಅಕೆಯ ಜೊತೆಯೇ ಜೀವನ ಸಾಗಿಸಿದ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ರಾಜಸ್ಥಾನದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ದಿನಕ್ಕೆ ಮೂರು ಚಿನ್ನದ ಸರ ಕದ್ದು ಎಸ್ಕೇಪ್ ಅಗುತ್ತಿದ್ದ. ಅಲ್ಲಿ ಪತ್ನಿ ಜೊತೆಗೆ ಐಶರಾಮಿ ಜೀವನ ನಡೆಸುತ್ತಿದ್ದ. ತನ್ನ ಪತ್ನಿಯ ಜತೆ ಜಾಲಿ ರೈಡ್‌ಗಾಗಿ 33 ಕಡೆ ಸರ ಎಗರಿಸಿದ್ದ ಈ ಭೂಪ ಬೆಂಗಳೂರು ಪೊಲೀಸರಿಗೆ ಸಿಕ್ಕಿದ್ದಿದ್ದಾನೆ. ಖತರ್ ನಾಕ್ ಕಳ್ಳನ ಪ್ರೇಮ ಕಹಾನಿ ಮತ್ತು ಸರ ಗಳ್ಳತನ ರೋಚಕ ಸ್ಟೋರಿ ಇಲ್ಲಿದೆ.
ಅವನ ಹೆಸರು ಉಮೇಶ್ ಖತಿಕ್. ಊರು ರಾಜಸ್ಥಾನ. ರಾಜಸ್ಥಾನದಲ್ಲಿ ಒಬ್ಬ ಬಾಲಕಿಯನ್ನು ಪ್ರೀತಿಸಿ ಯಾರಿಗೂ ಗೊತ್ತಾಗದಂತೆ ಮದುವೆಯಾಗಿದ್ದ. ಅರಂಭದಿಂದಲೂ ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದ. ಈತ ಮದುವೆಯಾದ ಹುಡುಗಿ ಅಪ್ರಾಪ್ತೆಯಾಗಿದ್ದರಿಂದ ಪೋಸ್ಕೋ ಕೇಸ್ ಅಡಿಯಲ್ಲಿ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಪುನಃ ಆಕೆಯ ಜೊತೆಗೇ ಜೀವನ ಸಾಗಿಸುತ್ತಿದ್ದ.
ಆಕೆಯ ಜತೆ ಜಾಲಿ ರೇಡ್ ಹೋಗಲಿಕ್ಕೆ ಇವನಿಗೆ ತುಂಬಾ ಇಷ್ಟ. ಇದರ ಜತೆಗೆ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತವಕ. ಅದಾಗಲೇ ರಾಜಸ್ಥಾನದ ಪ್ರಮುಖ ಸಿಟಿಗಳಲ್ಲಿ ದ್ವಿಚಕ್ರ ವಾಹನ ಮತ್ತು ನಡೆದುಕೊಂಡು ಹೋಗುವ ಮಹಿಳೆಯರ ಸರ ಕದ್ದು ಮೈತುಂಬಾ ಕೇಸು ಜಡಿಸಿಕೊಂಡಿದ್ದ. ಅಲ್ಲಿ ಮತ್ತೆ ಕೈಚಳಕ ತೋರಿ ಸಿಕ್ಕಿಬಿದ್ದರೆ ಹೆಂಡತಿ ಬಳಿ ಮರ್ಯಾದೆ ಹೋಗುತ್ತದೆ ಎಂದು ಕಾರ್ಯ ಸ್ಥಾನ ಬದಲಿಸಿಕೊಂಡಿದ್ದಾನೆ.

ಬೆಂಗಳೂರು ಹೈದರಾಬಾದ್ ನಲ್ಲಿ ಕಳ್ಳತನ:
ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ. ದ್ವಿಚಕ್ರ ವಾಹನ ಕದ್ದು ಅದರಿಂದಲೇ ಬೀದಿಗಳಲ್ಲಿ ರೌಂಡ್ಸ್ ಮಾಡುತ್ತಿದ್ದ. ಒಂಟಿ ಮನೆಗಳ ರಸ್ತೆಗಳ ಎದುರು ಓಡಾಡುವ ಮಹಿಳೆಯರ ಸರ ಕದ್ದು ಎಸ್ಕೇಪ್ ಆಗುತ್ತಿದ್ದ. ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದ ಈತ ಚನ್ನಮ್ಮನ ಕೆರೆ ಅಚ್ಚುಕಟ್ಟು, ಪುಟ್ಟೇನಹಳ್ಳಿ, ಮಾರತಹಳ್ಳಿ ಸೇರಿದಂತೆ ಒದೇ ದಿನ ಮೂರು ಕಡೆ ಮಹಿಳೆಯರ ಸರ ಎಗರಿಸಿ ಪರಾರಿಯಾಗಿದ್ದ. ಆ ಬಳಿಕ ಹೈದರಾಬಾದ್ ಗೆ ಹೋಗಿ ಅಲ್ಲಿಯೂ ತನ್ನ ಕೈಚಳಕ ತೋರಿ ರಾಜಸ್ಥಾನಕ್ಕೆ ವಾಪಸು ತೆರಳಿದ್ದ.

ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಕದ್ದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ಆಧರಿಸಿ ಆರೋಪಿಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ರಾಜಸ್ಥಾನದಲ್ಲಿ ತಂಗಿದ್ದ ಉಮೇಶ್ ಖತಿಕ್ ನನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮಾಡಿದಾಗ ಆತನ ಪ್ರೇಮ ಕಹಾನಿಯನ್ನು ತಿಳಿಸಿದ್ದಾನೆ. ನಾನು ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಜೈಲಿಗೆ ಹೋಗಿದ್ದೆ. ಬಿಡುಗಡೆ ಬಳಿಕ ಆಕೆಯನ್ನು ಮದುವೆಯಾದೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಳ್ಳತನ ಮಾಡುತ್ತಿದ್ದೆ. ಹೈದರಾಬಾದ್‌ನಲ್ಲಿ ಎಂಟು ಕಡೆ ಕಳ್ಳತನ ಮಾಡಿದ್ದೇನೆ. ಬೆಂಗಳೂರಿನಲ್ಲಿ ಏಳು ಕಡೆ ಸರ ಎಗರಿಸಿದ್ದೇನೆ. ರಾಜಸ್ಥಾನದಲ್ಲಿ ಒಟ್ಟು ಹದಿನೆಂಟು ಕಡೆ ಸರ ಎಗಿರಿಸಿರುವ ವಿಚಾರ ತಿಳಿಸಿದ್ದಾನೆ. ಆತನ ಸ್ಟೋರಿ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಇದೀಗ ಕದ್ದಿರುವ ಮಾಲನ್ನು ಉಮೇಶ್ ಖತಿಕ್ ನಿಂದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಮ್ಮೆ ಕಳ್ಳತನ ಮಾಡಿ ಹೋದ್ರೆ ಅರು ತಿಂಗಳು ವಾಪಸು ಬರುತ್ತಿರಲಿಲ್ಲ. ಕದ್ದ ಚಿನ್ನ ಮಾರಾಟದಿಂದ ಬಂದ ಹಣದಲ್ಲಿ ಗಂಡ ಹೆಂಡತಿ ಮಜಾ ಮಾಡುತ್ತಿದ್ದೆವು. ಮೊದಲು ಬೈಕ್ ಕದ್ದು ಆದೇ ಬೈಕ್ ನಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರ ಸರ ಕದಿಯುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಚನ್ನಮ್ಮನ ಕೆರೆ ಪೊಲೀಸರು ಈ ಸಂಬಂಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Recommended Video













Click it and Unblock the Notifications