ಅ.7ರಂದು ಬೊಮ್ಮನಹಳ್ಳಿಯಲ್ಲಿ ಬೃಹತ್ ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಘಾಟನೆ
ಬೆಂಗಳೂರು, ಅಕ್ಟೋಬರ್ 06 : ನಗರದ ವಾರ್ಡ್ ನಂ. 175 ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ರಾಜರಾಮ್ ಮೋಹನ್ ರಾಯ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೆ ಸಿದ್ಧವಾಗಿದೆ.
ಶಾಸಕ ಎಂ. ಸತೀಶ್ ರೆಡ್ಡಿ ಅವರ ಕ್ಷೇತ್ರವಾದ ಬೊಮ್ಮನಹಳ್ಳಿಯಲ್ಲಿ ನಿರ್ಮಾಣವಾಗಿರುವ ಸುಸರ್ಜಿತ ರಾಜರಾಮ್ ಮೋಹನ್ ರಾಯ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ನಾಳೆ ಅಂದರೆ ಶನಿವಾರದಂದು ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಉದ್ಘಾಟಿಸಲಿದ್ದಾರೆ.

ರಾಜರಾಮ್ ಮೋಹನ್ ರಾಯ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದ ಜತೆಗೆ ಇದೇ ವೇಳೆ ಓಪನ್ ಹಾಲ್ ಸಹ ಶನಿವಾರ (ಅ.7) ಸಂಜೆ 6ಕ್ಕೆ ಉದ್ಘಾಟನೆಯಾಗಲಿದೆ ಎಂದು ವಾರ್ಡ್ ನಂ. 175ರ ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜು ತಿಳಿಸಿದ್ದಾರೆ.
ಸ್ಥಳ: ರಾಜರಾಮ್ ಮೋಹನ್ ರಾಯ್ ಪಾರ್ಕ್, ಮಂಜುನಾಥ ಲೇಔಟ್, ನೈಟಿಂಗೇಲ್ ಶಾಲೆ ಹತ್ತಿರ, ದೇವರಚಿಕ್ಕನಹಳ್ಳಿ, ಬೆಂಗಳೂರು-560076.












Click it and Unblock the Notifications