ಡ್ರ್ಯಾಗರ್‌ನಿಂದ ಇರಿದ: ಹೆಗಲ ಮೇಲೆ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ

ಬೆಂಗಳುರು, ಏಪ್ರಿಲ್ 21 : ಕರಿಯ ಸಿನಿಮಾವನ್ನು ನೋಡಿರಬಹುದು. ಆ ಸಿನಿಮಾದಲ್ಲಿ ನಾಯಕನ ಎಂಟ್ರಿ ಟೈಂ ನಲ್ಲೇ ವ್ಯಕ್ತಿಯೊಬ್ಬನನ್ನು ಕೊಂದು ಹೆಗಲ ಮೇಲೆ ಹಾಕಿಕೊಂಡು ಹೋಗುತ್ತಾನೆ. ಸಿಲಿಕಾನ್ ಸಿಟಿಯಲ್ಲಿ ಇಂದದ್ದೇ ಘಟನೆಯೊಂದು ನಡೆದಿದೆ. ರಾಜಗೋಪಾಲ ನಗರದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನಿಗೆ ಇರಿದು ಹೆಗಲ ಮೇಲೆ ಹೊತ್ತುಹೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದೆ. ಅದೃಷ್ಟವಶಾತ್ ಇರಿತಕ್ಕೊಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್ ಬಳಿ ಭೀಕರ ಕೃತ್ಯ ನಡೆದಿದೆ. ಏಪ್ರಿಲ್ 19 ರಂದು ಶಂಕರ್ @ಸೂರಿ ಎಂಬಾತ ಹೆಗ್ಗನಹಳ್ಳಿ ಮುಖ್ಯರಸ್ತೆಗೆ ಬಂದಿದ್ದಾನೆ. ಶಂಕರ್ @ಸೂರಿಯ ಚಲನವಲನವನ್ನು ಗಮಸಿದ ಮುನಿ @ ಮುನಿಗಂಗಯ್ಯ ಎಂಬಾತ ಏಕಾಏಕಿ ಸೂರಿಯ ಮೇಲೆರಗಿದ್ದಾನೆ.

ಗುರಾಯಿಸಿದ್ದಕ್ಕೆ ಡ್ರ್ಯಾಗನ್ ನಿಂದ ಇರಿತ :

ಹೆಗ್ಗನಹಳ್ಳಿಯ ಕ್ರಾಸ್ ಬಳಿ ತನ್ನ ಪಾಡಿಗೆ ತಾನೂ ಸೂರಿ ಹೋಗುತ್ತಿದ್ದ. ಇದೇ ವೇಳೆ ಮುನಿಗಂಗಯ್ಯ ಸಹ ರಸ್ತೆಯಲ್ಲಿ ನಿಂತಿದ್ದ. ಈ ವೇೆಳೆ ಶಂಕರ್ @ ಸೂರಿ ಮುನಿ ಗಂಗಯ್ಯ @ ಮುನಿಯನ್ನು ನೋಡಿದ್ದಾನೆ. ಅಷ್ಟೇ ಮುನಿ ತನ್ನನ್ನೇ ಗುರಾಯಿಸುತ್ತೀಯ ಎಂದು ಕಿರಿಕ್ ತೆಗೆದಿದ್ದಾನೆ. ಈ ವೇಳೆ ತನ್ನ ಬಳಿಯಿದ್ದ ಡ್ರ್ಯಾಗನ್‌ನಿಂದ ನಡುರಸ್ತೆಯಲ್ಲೇ ಇರಿದಿದ್ದಾನೆ.

Rajagopalnagara Deadly Attack- Injured Out of Danger- Accused Arrest

ರಕ್ತದ ಮಡುವಿನಲ್ಲಿ ಬಿದ್ದವನನ್ನು ಹೆಗಲ ಮೇಲೆ ಹೊತ್ತೊಯ್ದ ಭೂಪ

ಶಂಕರ್ @ ಸೂರಿಗೆ ನಡುರಸ್ತೆಯಲ್ಲೇ ಚಾಕುವಿನಿಂದ ಮುನಿಗಂಗಯ್ಯ @ ಮುನಿ ಇರಿದು ಅಲ್ಲೇ ನಿಂತಿದ್ದ. ಈ ವೇಳೆ ಸೂರಿ ಪ್ರಜ್ಞಾ ಹೀನ ಸ್ಥಿತಿಗೆ ಹೋಗುತ್ತಿರುವುದನ್ನು ನೋಡಿದ್ದಾನೆ. ತಕ್ಷಣವೇ ಸೂರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸೀದ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದಾನೆ.

Rajagopalnagara Deadly Attack- Injured Out of Danger- Accused Arrest

ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ ವಿಡಿಯೋ:

ಮುನಿಗಂಗಯ್ಯ ಮತ್ತು ಶಂಕರ್ ಅಲಿಯಾಸ್ ಸೂರಿ ಗುರಾಯಿಸಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿದೆ. ಜಗಳವನ್ನು ಬಿಡಿಸುವ ಹೊತ್ತಿಗೆ ಶಂಕರ್ ತನ್ನ ಸ್ನೇಹಿತರಿಗೂ ಕರೆಯನ್ನು ಮಾಡಿದ್ದಾನೆ. ಹೆಗ್ಗನಹಳ್ಳಿಯ ಕ್ರಾಸ್‌ನಲ್ಲೇ ಚಾಕು ಹಿಡಿದುಕೊಂಡು ಓಡಾಡಿದ್ದಾರೆ. ಈ ವೇಳೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ಆದರೆ ಶಂಕರ್ ತಾನೂ ಹುಡುಗರನ್ನು ಕರೆಸುತ್ತೇನೆ ಎಂದು ಹೇಳಿದ ಬಳಿಕ ಮುನಿಗಂಗಯ್ಯ ಡ್ರ್ಯಾಗರ್ ತೆಗೆದು ಇರಿದಿದ್ದಾನೆ. ಈ ವೇಳೆ ಮುನಿಗಂಗಯ್ಯನ ಚಲನವಲನವನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.

ಎರಡು ದಿನದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಶಂಕರ್ ಅಲಿಯಾಸ್ ಸೂರಿ:

ಇನ್ನು ಏಪ್ರಿಲ್ 19 ರಂದು ನಡೆದ ಘಟನೆ ಇದಾಗಿದ್ದು ಡ್ರ್ಯಾಗರ್ ಇರಿತಕ್ಕೆ ಒಳಗಾಗಿದ್ದ ಶಂಕರ್ ಅಲಿಯಾಸ್ ಸೂರಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ. ಶಂಕರ್‌ನ ಸ್ಟೇಟ್ ಮೆಂಟ್ ದಾಖಲಿಕೊಳ್ಳಲು ರಾಜಗೋಪಾಲ್ ನಗರ ಪೊಲೀಸರು ವೈದ್ಯರ ಅನುಮತಿಯನ್ನು ಕೇಳಿದ್ದಾರೆ. ವೈದ್ಯರು ಶಂಕರ್ ಪ್ರಾಣಾಪಾಯವಿಲ್ಲ ಎಂದ ಖಚಿತಪಡಿಸಿ ಸದ್ಯದ ಸ್ಥತಿಯಲ್ಲಿ ಸ್ಟೇಟ್ ಮೆಂಟ್ ಪಡೆಯೋದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಇನ್ನು ಶಂಕರ್ ನೀಡುವ ಮಾಹಿತಿ ಪ್ರಮುಖವಾಗಿದ್ದು ಆತ ಏನು ಮಾಹಿತಿ ನೀಡುತ್ತಾನೋ ಎಂದು ಪೊಲೀಸರು ಕಾಯುತ್ತಿದ್ದಾರೆ.

ಮುನಿಗಂಗಯ್ಯ ಅಲಿಯಾಸ್ ಮುನಿ ಬಂಧನ:

ಶಂಕರ್ ಅಲಿಯಾಸ್ ಸೂರಿಗೆ ಇರಿದಿದ್ದ ಆರೋಪಿ ಮುನಿಗಂಗಯ್ಯನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ರಾಜಗೋಪಾಲನಗರ ಠಾಣಾ ವ್ಯಾಪ್ತಿ ಕ್ರೈಂ ಇತಿಹಾಸವನ್ನು ಕೆಣಕಿದರೆ ಈ ರೀತಿ ಹವಾ ಮೆಂಟೇನ್‌ಗಾಗಿ ಸುಖಾಸುಮ್ಮನೆ ಇರಿಯುವುದು, ಕೊಲೆ ಮಾಡುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಆದರೂ ರಾಜಗೋಪಾಲನಗರ ಪೊಲೀಸರು ಆರೋಪಿಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

Recommended Video

      ಥರ್ಡ್ ಅಂಪೈರ್ ಈ ಮೋಸ ಮಾಡದೇ ಇದ್ದಿದ್ರೆ ಮುಂಬೈ ಗ್ಯಾರೆಂಟಿ ಗೆಲ್ತಿತ್ತು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+