ಬೆಂಗಳೂರಿನಲ್ಲಿ ಇನ್ನು ಮೂರ್ನಾಲ್ಕು ದಿನ ಮಳೆ ಮುಂದುವರಿಕೆ: IMD

ಬೆಂಗಳೂರು, ಏಪ್ರಿಲ್ 20 : ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಇನ್ನು ಕೆಲ ದಿನಗಳ ಕಾಲ ಮಳೆ ಇದೆ ರೀತಿ ಮುಂದುವರೆಯಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಪ್ರದೇಶಗಳಾದ ತಮಿಳುನಾಡು, ತೆಲಂಗಾಣದಲ್ಲಿ ಚಂಡಮಾರುತ ಎದ್ದಿರುವ ಕಾರಣ ಕರ್ನಾಟಕದ ಹಲವು ರಾಜ್ಯಗಳಲ್ಲಿ ಇನ್ನು ಕೆಲ ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ ಅಂತ ಐಎಂಡಿ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಸಂಜೆ ಹೊತ್ತಿಗೆ ಮಳೆ ಆರಂಭವಾಗಿ ಮಧ್ಯರಾತ್ರಿವರೆಗೂ ಸುರಿಯುತ್ತಿತ್ತು. ಇನ್ನು ಈ ಅಕಾಲಿಕ ಮಳೆಯಿಂದಾಗಿ ರಾಜ್ಯದ ಜನರು ಸಹ ಹೈರಾಣಾಗಿ ಹೋಗಿದ್ದು, ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆಯನ್ನು ಸಹಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ ದಕ್ಷಿಣ ಕರ್ನಾಟಕ ಮತ್ತು ಒಳನಾಡು ಭಾಗಗಳಲ್ಲಿ ಹಾಗೂ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ ಸೇರಿ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಕೂಡ ಹಗುರ ಮಳೆಯಾಗಿದೆ.

ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಮಳೆ ಇನ್ನು ಕೆಲ ದಿನಗಳ ಕಾಲ ಮುಂದುವರೆದಿದೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಗುಜರಾತ್‌ನಲ್ಲೂ ಮಳೆಯಾಗಲಿದೆ ಅಂತ ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಳಿದಂತೆ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಏಪ್ರಿಲ್ 21 ಮತ್ತು 22 ರಂದು ಎರಡು ದಿನಗಳು ಮೋಡ ಕವಿದ ವಾತವರಣವಿರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ.

Bengaluru Rains: Heavy rains in Bengaluru to continue for next few days Says IMD

"ಬೆಂಗಳೂರು ನಗರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ 32.8 ಮಿಲಿ ಮೀಟರ್‌ ಮಳೆಯಾಗಿದೆ. ಅದರಲ್ಲೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 39.6 ಮಿಲಿ ಮೀಟರ್ ಮಳೆ ನಿನ್ನೆ ಒಂದೇ ದಿನದಲ್ಲಿ ಆಗಿದೆ," ಅಂತ ಡಾ. ಅಗ್ನಿಹೋತ್ರಿ ಮಾಹಿತಿ ನೀಡಿದ್ದಾರೆ.

Bengaluru Rains: Heavy rains in Bengaluru to continue for next few days Says IMD

Recommended Video

      DK ಸಾಂಸಾರಿಕ ಜೀವನದಲ್ಲಿ ಮುರಳಿ ವಿಜಯ್ ವಿಲನ್ ಆಗಿದ್ದು ಹೇಗೆ? | Oneindia Kannada

      ಸದ್ಯ ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಬಿಸಿಲನ ಬೇಗೆ ನಡುವೆಯೂ ಮಳೆ ತಂಪೆರೆಯುತ್ತಿದೆ. ಆದರೆ ಮಳೆ ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಹಲವು ಜನರಿಗೆ ಸೈಕ್ಲೋನ್ ಮಳೆಯಿಂದಾಗಿ ಕೆಮ್ಮು, ಶೀತದಂತಹ ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಜನರು ಸಹ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+