ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ ಸ್ಟೋರಿ; ಬೆಂಗಳೂರು ಮಳೆ, ಮುಳುಗಿದ ಕೋಟಿ ಬೆಲೆಯ ಕಾರುಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿದೆ. ಮಳೆ ನೀರು, ಕೆರೆ ನೀರು ಒಟ್ಟಾಗಿ ಜನವಸತಿ ಪ್ರದೇಶಗಳಿಗೆ ನುಗ್ಗಿದ್ದು, ಕೋಟ್ಯಾಂತರ ರೂಪಾಯಿಯ ಮನೆಗಳು ಜಲಾವೃತವಾಗಿವೆ.

ಬೆಂಗಳೂರು ಮಳೆ ಜನರಿಗೆ ಹಲವು ಪಾಠಗಳನ್ನು ಕಲಿಸಿದೆ. ಕೋಟ್ಯಾಂತರ ರೂಪಾಯಿ ಕಾರಿನಲ್ಲಿ ಸಂಚಾರ ನಡೆಸುತ್ತಿದ್ದ ಜನರು ಈಗ ಜೀವ ಉಳಿಸಿಕೊಳ್ಳಲು ಟ್ರಾಕ್ಟರ್ ಏರಿ ಸಾಗಬೇಕಾದ ಅನಿವಾರ್ಯವತೆ ಎದುರಾಗಿದೆ.

ಭಾನುವಾರ ತಡರಾತ್ರಿ ಸುರಿದ ಮಳೆ ಅನಾಹುತ ಸೃಷ್ಟಿ ಮಾಡಿದೆ. ಸೋಮವಾರ ಮುಂಜಾನೆ ಹಲವು ಪ್ರದೇಶಗಳ ಬಹುಮಹಡಿ ಕಟ್ಟಡಗಳ ಬೇಸ್ ಮೆಂಟ್‌ ನೀರಿನಿಂದ ಆವೃತವಾಗಿತ್ತು. ಇದರಿಂದಾಗಿ ಬೈಕ್, ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ತೇಲಿದವು.

Breaking; ಬೆಂಗಳೂರು ಮಳೆ, ORR ವಾಹನ ಸವಾರರಿಗೆ ಸೂಚನೆ Breaking; ಬೆಂಗಳೂರು ಮಳೆ, ORR ವಾಹನ ಸವಾರರಿಗೆ ಸೂಚನೆ

Rain In Bengaluru Cars Submerged At Many Areas

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆ ನೀರು ನುಗ್ಗಿರುವ ಪ್ರದೇಶಗಳಲ್ಲಿನ ಜನರನ್ನು ಟ್ರಾಕ್ಟರ್, ಬೋಟ್ ಮೂಲಕ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

Breaking; ಬೆಂಗಳೂರು ಮಳೆ, 62 ಜನರನ್ನು ರಕ್ಷಿಸಿದ ಎನ್‌ಡಿಆರ್‌ಎಫ್ Breaking; ಬೆಂಗಳೂರು ಮಳೆ, 62 ಜನರನ್ನು ರಕ್ಷಿಸಿದ ಎನ್‌ಡಿಆರ್‌ಎಫ್

ಮಳೆಯ ಕೊಳಚೆ ನೀರಿನಲ್ಲಿ ಐಷಾರಾಮಿ ಕಾರುಗಳು ಮುಳುಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕೋಟ್ಯಾಂತರ ರೂಪಾಯಿ ಕಾರಿದ್ದರೂ ಟ್ರಾಕ್ಟರ್‌ನಲ್ಲಿ ಸಂಚಾರ ನಡೆಸಬೇಕಾ ಅನಿವಾರ್ಯತೆ ಜನರದ್ದು.

Rain In Bengaluru Cars Submerged At Many Areas

ಟೊಯೋಟಾ ಇನ್ನೋವಾ, ಜಾಗ್ವಾರ್, ಲ್ಯಾಂಡ್ ಕ್ರ್ಯೂಸರ್ ಸೇರಿದಂತೆ ಐಷಾರಾಮಿ ಕಾರುಗಳು ಮಳೆ ನೀರಿನಿಂದ ಆವೃತವಾಗಿದೆ. ಈ ಕಾರುಗಳು ಮತ್ತೆ ಸ್ಟಾರ್ಟ್‌ ಆಗಲಿವೆಯೇ?, ಆಗುವುದಾದರೆ ಅದರ ರಿಪೇರಿ ಖರ್ಚು ಎಷ್ಟಿರಬಹುದು? ಎಂಬ ಚರ್ಚೆಗಳು ನಡೆಯುತ್ತಿವೆ.

Breaking; ಬೆಂಗಳೂರು ನಗರದಲ್ಲಿ ಮತ್ತೆ ಮಳೆ, ಜನರ ಪರದಾಟBreaking; ಬೆಂಗಳೂರು ನಗರದಲ್ಲಿ ಮತ್ತೆ ಮಳೆ, ಜನರ ಪರದಾಟ

ಕೋಟಿ ಕೋಟಿ ಖರ್ಚು ಮಾಡಿ ಕಾರು ಖರೀದಿ ಮಾಡಿದರೇನು? ಜೀವ ಉಳಿಸಲು ಟ್ರಾಕ್ಟರ್ ಬೇಕಾಯಿತು ಎಂಬ ಟ್ರಾಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ಬ್ಯಾಂಕ್‌ನಿಂದ ಸಾಲ ಮಾಡಿ ಕಾರು ಕೊಂಡವರು ನೆಚ್ಚಿನ ವಾಹನದ ಸ್ಥಿತಿ ನೋಡಿ ಬೇಸರಪಟ್ಟುಕೊಳ್ಳುತ್ತಿದ್ದಾರೆ.

English summary
Rain water entered parking lots and basements of many buildings in Bengaluru city after heavy rain. Cars were submerged and vehicles were partially under water in many areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X