ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮತ್ತೆ ಗಾಳಿ, ಮಳೆ ಆರ್ಭಟ ಶುರು

By Nayana
|
Google Oneindia Kannada News

ಬೆಂಗಳೂರು, ಮೇ.2: ಬೆಂಗಳೂರಲ್ಲಿ ಮತ್ತೆ ಮಳೆಯ ಆರ್ಭಟ ಪ್ರಾರಂಭವಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆ ಸುರಿಯುತ್ತಲೇ ಇದೆ. ಬುಧವಾರ ಕೂಡ ಮಳೆ ಮುಂದುವರೆದಿದೆ.

ವಿಧಾನಸೌಧ, ಕಬ್ಬನ್‌ ಪಾರ್ಕ್, ಎಂಜಿ ರಸ್ತೆ, ರೇಸ್‌ಕೋರ್ಸ್ ರೋಡ್, ಶಿವಾಜಿನಗರ, ಜಯನಗರ, ಮಲ್ಲೇಶ್ವರಂ, ವಿಜಯನಗರ ಬೆಂಗಳೂರು ಹೊರ ವಲಯಗಳಲ್ಲಿ ಗಾಳಿ ಸಹಿತ ಮಳೆ ಆರಂಭವಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾರಾಂತ್ಯವರೆಗೂ ಬೆಂಗಳೂರಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ವಾರಾಂತ್ಯವರೆಗೂ ಬೆಂಗಳೂರಲ್ಲಿ ಮಳೆ ಮುಂದುವರೆಯುವ ಸಾಧ್ಯತೆ

ತಾಪಮಾನ ಏರಿಕೆಯಾಗುತ್ತಿದ್ದಂತೆ, ಮಳೆಯ ಸಿಂಚನವಾಗುತ್ತಿದೆ. ಇತ್ತೀಚೆಗೆ ಹಠಾತ್ತನೆ ಮೋಡ ಮುಸುಕಿ, ಗುಡುಗು, ಮಿಂಚಿನೊಂದಿಗೆ ಬೆಳಗ್ಗೆ ಅಥವಾ ಸಾಯಂಕಾಲ ಮಳೆ ಸುರಿಯುವುದು ನಗರದಲ್ಲಿ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಸಹ ಗುಡುಗು ಸಹಿತ ಆಲಿಕಲ್ಲು ಬಿರುಗಾಳಿ ಮಳೆ ಸುರಿಯುವುದನ್ನು ಎದುರಿಸಲು ಸಜ್ಜಾಗಿರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Rain hits Bengaluru again

ಗುಡುಗು ಆಲಿಕಲ್ಲಿನ ಮಳೆ ಬೆಂಗಳೂರು ನಗರದಲ್ಲಿ ಈ ವರ್ಷ ಕಾಣುತ್ತಿದ್ದು ಬಿಸಿಲಿನ ಬೇಗೆಯಿಂದ ತತ್ತರಿಸಿದವರಿಗೆ ಉಲ್ಲಾಸ ನೀಡುತ್ತದೆ. ಆದರೆ ಪದೇ ಪದೇ ಆಲಿಕಲ್ಲು ಬಿರುಗಾಳಿ ಮಳೆ ಸುರಿಯುವುದರಿಂದ ಹಾನಿ ಸಹ ಉಂಟಾಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗರಿಷ್ಠ 32.8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕೆಐಎಎಲ್‌ನಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.5 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 34.8 ಡಿಗ್ರಿ ಸೆಲ್ಸಿಯಸ್ ,ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಲಬುರಗಿಯಲ್ಲಿ 43.3 ಗರಿಷ್ಠ ಉಷ್ಣಾಂಶ ದಾಖಲಾಗಿದೆ.

English summary
As Indian Meteorological Department was forecasted there will be four days rain in south interior Karnataka, on Tuesday evening rain hit at various parts of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X