ಬೆಂಗಳೂರು ಮಳೆ ನಡುವೆ ಸಹಜ ಸ್ಥಿತಿಗೆ ಮರಳಿದ ವಿಮಾನಗಳ ಹಾರಾಟ

ಬೆಂಗಳೂರು, ಸೆಪ್ಟೆಂಬರ್‌ 07: ಬೆಂಗಳೂರು ನಗರದ ಪೂರ್ವ ಮತ್ತು ಉತ್ತರ ಭಾಗದಲ್ಲಿ ಜಲಾವೃತಗೊಂಡ ರಸ್ತೆಗಳು, ಬುಡಮೇಲಾದ ಮರಗಳು, ಭಾರೀ ಟ್ರಾಫಿಕ್ ಜಾಮ್‌ ಮತ್ತು ನಿರಂತರ ಮಳೆಯಿಂದ ಹಿಡಿತಕ್ಕೆ ಬರುತ್ತಿದ್ದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿಮಾನ ಕಾರ್ಯಾಚರಣೆ ಸೇರಿದಂತೆ ಕೆಲವು ದೈನಂದಿನ ಜೀವನ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿವೆ.

ಬೆಂಗಳೂರು ನಗರದಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಕೆಐಎಯಲ್ಲಿನ ಹಲವಾರು ವಿಮಾನಗಳ ಹಾರಾಟದ ಪರಿಣಾಮ ಬೀರಿದ್ದು, ಕೆಲವನ್ನು ಬೇರೆ ನಗರಗಳಿಗೆ ತಿರುಗಿಸಲಾಗಿದ್ದು, ಕೆಲವು ವಿಳಂಬವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದಾಗ್ಯೂ, ಸೋಮವಾರದಿಂದ ಎಲ್ಲಾ ಕಾರ್ಯಾಚರಣೆಗಳು ಸಂಪೂರ್ಣ ಸಹಜ ಸ್ಥಿತಿಗೆ ಮರಳಿವೆ ಎಂದು ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ.

ಭಾನುವಾರದಿಂದ ಸುರಿದ ನಿರಂತರ ಮಳೆಯು ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಎಲ್ಲಾ ದೈನಂದಿನ ಜೀವನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು. ಐಟಿ ಉದ್ಯೋಗಿಗಳು ಸಂಚಾರಕ್ಕೆ ಸುಮಾರು ಐದು ಗಂಟೆಗಳ ಕಾಲ ತೆಗೆದುಕೊಂಡರು. ಅಲ್ಲದೆ ಕೆಲ ರಸ್ತೆಗಳು ಜಲಾವೃತಗೊಂಡಿದ್ದರಿಂದ ಕೆಲವರು ಟ್ರಾಕ್ಟರ್ ಅನ್ನು ಹತ್ತಿಕೊಂಡು ತಮ್ಮ ಕಚೇರಿಗಳಿಗೆ ತಲುಪಿದರು.

ಸೋಮವಾರ ಬೆಳಗ್ಗೆ ಕಡಿಮೆ ಗೋಚರತೆ ಮತ್ತು ಪ್ರತಿಕೂಲವಾದ ಹವಾಮಾನದ ಪರಿಸ್ಥಿತಿಯಿಂದಾಗಿ ಕೆಐಎನಲ್ಲಿ ಒಂಬತ್ತು ವಿಮಾನಗಳನ್ನು ವಿಳಂಬಗೊಂಡಿದ್ದವು. ಆದರೆ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಪ್ರಕಾರ ಸುಮಾರು ಆರು ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು ಎಂದು ಹೇಳಲಾಗಿದೆ.

 ಈಗಎಲ್ಲವೂ ಸಹಜ ಸ್ಥಿತಿಗೆ

ಈಗಎಲ್ಲವೂ ಸಹಜ ಸ್ಥಿತಿಗೆ

ಈ ಅಡೆತಡೆಗಳು ಮುಂಜಾನೆ 1 ರಿಂದ 3 ರವರೆಗೆ ಮಾತ್ರ ಸಂಭವಿಸಿದವು. ಆದರೆ ಯಾವುದೇ ಇತರೆ ಅಂತರರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಲಿಲ್ಲ ಎನ್ನಲಾಗಿದೆ. ಆದರೆ ನಿನ್ನೆಯಿಂದ ವಿಮಾನ ನಿಲ್ದಾಣದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದ್ದು, ಸೋಮವಾರದಿಂದ ಯಾವುದೇ ಅಡೆತಡೆಗಳು, ವಿಳಂಬಗಳು ಅಥವಾ ತಿರುವುಗಳು ಆಗಿಲ್ಲ ಎಂದು ವಕ್ತಾರರು ಪಿಟಿಐಗೆ ತಿಳಿಸಿದರು.

 ಸಾಫ್ಟ್‌ವೇರ್ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ

ಸಾಫ್ಟ್‌ವೇರ್ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ

ಭಾನುವಾರ ಬೆಳಗ್ಗೆ 11.30 ರಿಂದ ಸಂಜೆ 4ರ ನಡುವೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ 109 ಮಿಮೀ ಮತ್ತು ಸೋಮವಾರ ರಾತ್ರಿ 178.3 ಮಿಮೀ ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ. ಏತನ್ಮಧ್ಯೆ, ನಗರದ ಉಳಿದ ಭಾಗಗಳಲ್ಲಿ ಮಳೆಯ ಅನಾಹುತವನ್ನು ನಿಭಾಯಿಸಲು ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರು ಬುಧವಾರ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಹಲವಾರು ಸಾಫ್ಟ್‌ವೇರ್ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ಕರೆದು ಅವು ಮಳೆಯಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

 ಮಳೆ ಸಮಸ್ಯೆ ಪರಿಹಾರಕ್ಕೆ ಕೆಲಸ

ಮಳೆ ಸಮಸ್ಯೆ ಪರಿಹಾರಕ್ಕೆ ಕೆಲಸ

ಜಲಾವೃತ ಪ್ರದೇಶಗಳಲ್ಲಿ ಕೆಲಸಕ್ಕೆ ತೆರಳುವುದು ಅಸಾಧ್ಯವಾದ ಕಾರಣ ಹಲವು ಉದ್ಯೋಗಿಗಳು ಬುಧವಾರ ಮನೆಯಿಂದ ಕೆಲಸ ಮಾಡಿದರು. ಮಳೆಯಿಂದಾಗಿರುವ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಇನ್ಫೋಸಿಸ್, ವಿಪ್ರೋ, ಎಂಫಸಿಸ್, ನಾಸ್ಕಾಮ್, ಗೋಲ್ಡ್ಮನ್ ಸ್ಯಾಕ್ಸ್, ಇಂಟೆಲ್, ಟಿಸಿಎಸ್, ಫಿಲಿಪ್ಸ್, ಸೋನಾಟಾ ಸಾಫ್ಟ್‌ವೇರ್ ಮುಂತಾದ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

 ಗರಿಷ್ಠ 30 ಮತ್ತು ಕನಿಷ್ಠ 20 ಡಿಗ್ರಿ ಉಷ್ಣಾಂಶ

ಗರಿಷ್ಠ 30 ಮತ್ತು ಕನಿಷ್ಠ 20 ಡಿಗ್ರಿ ಉಷ್ಣಾಂಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರವು ಗುಡುಗು ಸಹಿತ ಭಾರಿ ಮಳೆಯೊಂದಿಗೆ ವ್ಯಾಪಕವಾದ ಸಾಧಾರಣ ಮಳೆಯನ್ನು ಮುನ್ಸೂಚನೆ ನೀಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+