ಬೆಂಗಳೂರಲ್ಲಿ ತರಕಾರಿ ಬೆಲೆ ಭಾರಿ ಇಳಿಕೆ, ಸೊಪ್ಪುಗಳು ದುಬಾರಿ

ಬೆಂಗಳೂರು, ಸೆ.22: ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಮಳೆಯಾಗಿರುವ ಹಿನ್ನೆಲೆಯಲ್ಲಿ ತರಕಾರಿಗಳ ಬೆಳೆ ಉತ್ತಮವಾಗಿದ್ದು, ಮೂರ್ನಾಲ್ಕು ವಾರಗಳಿಂದ ತರಕಾರಿಗಳ ದರದಲ್ಲಿ ಇಳಿಕೆ ಕಂಡಿದೆ.

ತರಕಾರಿ ಬೆಳೆಗಳಿ ಇದೀಗ ಉತ್ತಮ ಫಸಲು ನೀಡಿವೆ, ಮಾರುಕಟ್ಟೆಗೂ ಯಥೇಚ್ಛ ಪ್ರಮಾಣದಲ್ಲಿ ಬರುತ್ತಿರುವುದರಿಂದ ಬೀನ್ಸ್, ಹಾಗಲಕಾಯಿ, ಟೊಮೆಟೊ, ಬೀಟ್‌ರೂಟ್ ಇನ್ನೂ ಹಲವು ತರಕಾರಿಗಳ ಬೆಲೆ ಇಳಿಕೆಯಾಗಿದೆ.

ಆಗಸ್ಟ್ ನಲ್ಲಿ ಹೂಕೋಸು, ಎಲೆಕೋಸು, ಬದನೆಕಾಯಿ, ಸೊಪ್ಪು ಸೇರಿದಂತೆ ವಿವಿಧ ತರಕಾರಿಗಳು 50 ರೂ ದಾಟಿದ್ದವು. ಆಗ ಹೆಚ್ಚಿದ ಮಳೆಯಿಂದಾಗಿ ಈಗಿನ ಬೆಳೆಗಳಿಗೆ ಪೂರಕವಾಗಿದೆ. ಭೂಮಿಯ ವಾತಾವರಣ ತಂಪಾಗಿದೆ.

Rain brings control on Vegetables price in the market

ದಂಟು ಸೊಪ್ಪು 33 ರೂ., ಮೆಂತ್ಯೆ ಸೊಪ್ಪು 63 ರೂ, ಕೊತ್ತಂಬರಿ ಸೊಪ್ಪಿನ ದರವೂ ಏರಿಕೆಯಾಗಿದ್ದು ಕೆಜಿಗೆ 45 ರೂ. ಇದೆ. ಹಾಗಲಕಾಯಿ ಇದೀಗ 60 ರೂ.ನಿಂದ 24 ರೂ.ಗಳಿಗೆ ಇಳಿದಿದೆ. ಮೂಲಂಗಿ 30ರಿಂದ 24 ರೂಗೆ ಇಳಿದಿದೆ. ಒಟ್ಟಿನಲ್ಲಿ ಕೆಲವು ಸೊಪ್ಪುಗಳನ್ನು ಹೊರತುಪಡಿಸಿ ಎಲ್ಲಾ ತರಕಾರಿಗಳು 30 ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ತರಕಾರಿ ದರ ಹಾಪ್‌ಕಾಮ್ಸ್ : ಟೊಮೆಟೋ 13 ರೂ., ಬೀನ್ಸ್ 26ರೂ, ಸೌತೆಕಾಯಿ 17 ರೂ., ಬೀಟ್‌ರೂಟ್ 24 ರೂ, ಕ್ಯಾರೇಟ್ 48 ರೂ, ಆಲೂಗಡ್ಡೆ 32 ರೂಗೆ ದೊರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+