ಬೆಂಗಳೂರಿಗೆ ರೈಲ್ವೆಯ ಕೊಡುಗೆ; ಕೇಂದ್ರ ಸಚಿವರ ಟ್ವೀಟ್
ಬೆಂಗಳೂರು, ಆಗಸ್ಟ್ 18 : ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರು ಶೀಘ್ರದಲ್ಲಿಯೇ ರೈಲಿನಲ್ಲಿ ಸಂಚಾರ ನಡೆಸಬಹುದಾಗಿದೆ. ಇದು ಪ್ರಯಾಣಿಕರಿಗೆ ರೈಲ್ವೆಯ ಕೊಡುಗೆ ಎಂದು ಕೇಂದ್ರ ರೈಲ್ವೆ ಸಚಿವರು ಟ್ವೀಟ್ ಮಾಡಿದ್ದಾರೆ.
Recommended Video
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ರೈಲು ನಿಲ್ದಾಣದ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಆಗಸ್ಟ್ ಅಂತ್ಯದೊಳಗೆ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ಇನ್ನು ರೈಲಿನಲ್ಲಿ ಸಂಚಾರ ನಡೆಸಬಹುದಾಗಿದೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಇದು ರೈಲ್ವೆಯ ಕೊಡುಗೆ ಎಂದು ಹೇಳಿದ್ದಾರೆ. ನಿಲ್ದಾಣ ಕಾಮಗಾರಿಯ ವಿಡಿಯೋ ಸಹ ಟ್ವೀಟ್‌ನಲ್ಲಿದೆ.

"ಜನರ ದಶಕಗಳ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲು ನಿಲ್ದಾಣ ಬರುತ್ತಿದೆ" ಎಂದು ಕೇಂದ್ರ ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
"ಈ ನಿಲ್ದಾಣದಿಂದಾಗಿ ರಸ್ತೆ ಸಂಚಾರ ದಟ್ಟಣೆಯಿಂದಾಗಿ ಪ್ರಯಾಣಿಕರಿಗೆ ಬಿಡುಗಡೆ ಸಿಗಲಿದೆ. ಜನರು ಸುಲಭವಾಗಿ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಬಹುದಾಗಿದೆ" ಎಂದು ಪಿಯೂಷ್ ಘೋಯಲ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಸಚಿವರ ಟ್ವೀಟ್
Railways' Gift to Bengaluru Flyers: Fulfilling decade-old demand of people, a halt Railway Station is coming up near Kempegowda International Airport, Bengaluru
— Piyush Goyal (@PiyushGoyal) August 16, 2020
Providing relief from road traffic, this facility will allow people to comfortably travel to the airport. pic.twitter.com/MlkjiEmgDt












Click it and Unblock the Notifications