ರಾಗೀಗುಡ್ದ ದೇವಾಲಯದಲ್ಲಿ ಅಪರೂಪದ ಯಾಗ

ಬೆಂಗಳೂರಿನ ಶ್ರೀಕ್ಷೇತ್ರ ರಾಗೀಗುಡ್ಡದಲ್ಲಿ ಶ್ರೀಮಹಾಗಣಪತಿ, ಶ್ರೀರಾಜರಾಜೇಶ್ವರಿ ಮತ್ತು ನವಗ್ರಹರ ಪ್ರತಿಷ್ಟಾಪನೆಯ 27ನೇ ವಾರ್ಷಿಕೋತ್ಸವದ ಅಂಗವಾಗಿ ಅಪರೂಪದ ಯಾಗವನ್ನು ದಿನಾಂಕ 04.05.2014ರಂದು ದೇವಾಲಯದ ಭಕ್ತಮಂಡಳಿ ಆಯೋಜಿಸಿದೆ.

ಲೋಕಕಲ್ಯಾಣಕ್ಕಾಗಿ ಅತಿ ಮಹತ್ತರವಾದ, ಉತ್ಕ್ರುಷ್ಠವಾದ ಮತ್ತು ಪವಿತ್ರವಾದ 'ಏಕೋದಶೋತ್ತರ ಸಹಸ್ರನಾಳೀಕೇರ ಅಷ್ಠದ್ರವ್ಯ ಮಹಾಗಣಪತಿಯಾಗ'ವನ್ನು ವೈಶಾಖ ಶುಕ್ಲ ಪಂಚಮಿಯ ದಿನವಾದ ಭಾನುವಾರ (ಮೇ 4) ದಂದು ಸ್ವಾಮಿಯ ಕೃಪಾಕಟಾಕ್ಷದಿಂದ ಹಾಗೂ ಭಕ್ತಾದಿಗಳ ಸಹಕಾರದಿಂದ ನೆರವೇರಿಸಲು ಭಕ್ತಮಂಡಳಿ ನಿರ್ಧರಿಸಿದೆ.

Ragigudda Bhakta Mandali organized Maha Ganapati Yaga on May 4

4 ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳ ವಿವರ ಇಂತಿದೆ:

01.05.2014 (ಗುರುವಾರ, ವೈಶಾಖ ಶುಕ್ಲ ದ್ವಿತೀಯ)
ಶ್ರೀಗಣಪತಿ ಹೋಮ, ಪೂರ್ವಕ ಶ್ರೀರಾಜರಾಜೇಶ್ವರಿ ಹೋಮ, ಮಹಾನೀರಾಜನ, 108 ಕಳಶ ಸ್ಥಾಪನೆ, ತೀರ್ಥ, ರಕ್ಷೆ, ಅನ್ನಸಂತರ್ಪಣೆ.

02.05.2014 (ಶುಕ್ರವಾರ, ವೈಶಾಖ ಶುಕ್ಲ ತೃತೀಯ)
ಶ್ರೀಗಣಪತಿ ಹೋಮ, ಕಲಾವೃದ್ದಿ ಹೋಮ, ಪೂರ್ವಕ ಶ್ರೀರಾಜರಾಜೇಶ್ವರಿ ಹೋಮ, ನವಗ್ರಹರಿಗೆ 108 ಕಳಶದಿಂದ ವಿಶೇಷ ಅಭಿಷೇಕ, ಮಹಾನೀರಾಜನ, ದುರ್ಗಾದೀಪ ನಮಸ್ಕಾರ, ಅನ್ನಸಂತರ್ಪಣೆ.

03.05.2014 (ಶನಿವಾರ, ವೈಶಾಖ ಶುಕ್ಲ ಚತುರ್ಥಿ)
ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ, ಕುಂಡ ಸಂಸ್ಕಾರ, ಉದಕಶಾಂತಿ, ಸಂಸ್ಕಾರಾದಿ ಹೋಮ, ತೀರ್ಥ, ರಕ್ಷೆ, ಅನ್ನಸಂತರ್ಪಣೆ.

04.05.2014 (ಭಾನುವಾರ, ವೈಶಾಖ ಶುಕ್ಲ ಪಂಚಮಿ)
ಏಕೋದಶೋತ್ತರ ಸಹಸ್ರನಾಳೀಕೇರ ಅಷ್ಠದ್ರವ್ಯ ಮಹಾಗಣಪತಿಯಾಗ, ಮಹಾಗಣಪತಿ ಸನ್ನಿಧಿಯಲ್ಲಿ ಅಷ್ಟಾವಧನ ಸೆವೆ, ವಿಶೇಷ ದೀಪಾರಾಧನೆ, ಅನ್ನಸಂತರ್ಪಣೆ (ರಾಗೀಗುಡ್ಡದ ಮಾರುತಿ ಬಯಲು ರಂಗಮಂದಿರ)

ಈ ಅಪರೂಪದ ಯಾಗದಲ್ಲಿ ಭಕ್ತಾದಿಗಳು ಪ್ರತ್ಯಕ್ಷವಾಗಿ ಭಾಗವಹಿಸಿ, ಪೂರ್ಣಾಹುತಿ ನಂತರ ತೀರ್ಥ ರಕ್ಷೆ, ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗಬೇಕಾಗಿ ಭಕ್ತಮಂಡಳಿ ವಿನಂತಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+