ಬೆಂಗಳೂರಿನ 'ಚಿಂದಿ' ಪ್ರೇಮ ಕೊಲೆಯಲ್ಲಿ ಅಂತ್ಯ, ಆಕೆಗ್ಯಾರು ದಿಕ್ಕು?
ಬೆಂಗಳೂರು, ಮೇ 29: ಹೆಂಡತಿಯನ್ನು ಚುಡಾಯಿಸಿದ ದುಷ್ಕರ್ಮಿಯನ್ನು ಪ್ರಶ್ನಿಸಿದ್ದಕ್ಕೆ ಆಕೆಯ ಪತಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ರಾಬಿನ್(33) ಕೊಲೆಯಾದ ದುರ್ದೈವಿ, ಈ ಕೃತ್ಯ ಎಸಗಿದ ಶಾರೂಖ್‌ನನ್ನು ಬಂಧಿಸಿದ್ದಾರೆ.
ಪಟ್ಟೆಗಾರಪಾಳ್ಯದ ಮುಖ್ಯ ರಸ್ತೆ ಬಳಿ ಖಾಲಿ ಕಟ್ಟಡವೊಂದರಲ್ಲಿ ತನ್ನ ಪತ್ನಿ ಜೊತೆ ರಾಬಿನ್ ವಾಸವಾಗಿದ್ದ, ಆ ವೇಳೆ ಅಲ್ಲಿಗೆ ಹೋದ ಶಾರೂಖ್ ಮೀನಾ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ.
ಪತ್ನಿಗೆ ಚುಡಾಯಿಸಿದ್ದಕ್ಕೆ ಕೋಪಗೊಂಡ ರಾಬಿನ್ ಶಾರೂಖ್ ಬಳಿ ಜಗಳಕ್ಕಿಳಿದಿದ್ದ, ಬಳಿಕ ಶಾರೂಖ್ ರಾಬಿನ್‌ಗೆ ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಿದ್ದಾನೆ.

ಚಿಂದಿ ಆಯುತ್ತ ಎಲ್ಲೆಂದರಲ್ಲಿ ಇದ್ದು ಜೀವನ ಸಾಗಿಸುತ್ತಿದ್ದ ರಾಬಿನ್ ಕೆಲ ತಿಂಗಳ ಹಿಂದೆ ಚಿಂದಿ ಆಯುವ ಮೀನಾ ಎಂಬುವವಳನ್ನು ಮದುವೆಯಾಗಿದ್ದ, ವಿವಾಹದ ಬಳಿಕವೂ ದಂಪತಿ ತಮ್ಮ ಕೆಲಸವನ್ನು ಮುಂದುವರೆಸಿದ್ದರು.
ಹಗಲಿನಲ್ಲಿ ಚಿಂದಿ ಆಯ್ದು ರಾತ್ರಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಆದರೆ ಅವರ ಪ್ರೀತಿ ಮೇಲೆ ಶಾರೂಖ್ ಕಣ್ಣು ಬಿದ್ದಿತ್ತು. ಅವರಿರುವಲ್ಲಿಗೆ ಬಂದು ತೊಂದರೆ ಕೊಡುತ್ತಿದ್ದ, ನಮಗೆ ತೊಂದರೆ ಕೊಡಬೇಡ ಎಂದು ಏರು ಧ್ವನಿಯಲ್ಲಿ ಹೇಳಿದ್ದಕ್ಕೆ ಶಾರೂಖ್ ರಾಬಿನ್‌ನನ್ನು ಕೊಲೆ ಮಾಡಿದ್ದಾನೆ.












Click it and Unblock the Notifications