ಬೆಂಗಳೂರು ಹೊರ ವಲಯದಲ್ಲಿ ವಿಕಿರಣಶೀಲ ರೇಡಾನ್ ಪತ್ತೆ, ಐಐಎಸ್‌ಸಿ ಹೇಳೋದೇನು?
ರೇಡಾನ್ ಎಂಬುದು ಒಂದು ರಾಸಾಯನಿಕ ಅಂಶವಾಗಿದ್ದು, ಇದು ವಿಕಿರಣಶೀಲ, ಬಣ್ಣರಹಿತ, ವಾಸನೆಯಿಲ್ಲದ, ರುಚಿಯಿಲ್ಲದ ಅನಿಲವಾಗಿದೆ. ಇದು ವಿಶೇಷವಾಗಿ ಗ್ರಾನೈಟ್ ಗಣಿಗಾರಿಕೆ ಹೆಚ್ಚುತ್ತಿರುವುದರಿಂದ ಇದರ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ.
ಬೆಂಗಳೂರು, ಫೆಬ್ರವರಿ 4: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಸಂಶೋಧಕರು ಬೆಂಗಳೂರಿನ ಹೊರವಲಯದಲ್ಲಿ ಗಾಳಿ ಮತ್ತು ನೀರಿನಲ್ಲಿ ಅಪಾಯಕಾರಿ ವಿಕಿರಣಶೀಲ ರೇಡಾನ್ ಇರುವುದನ್ನು ಪತ್ತೆಹಚ್ಚಿದ್ದಾರೆ.
ರೇಡಾನ್ ಎಂಬುದು ಒಂದು ರಾಸಾಯನಿಕ ಅಂಶವಾಗಿದ್ದು, ಇದು ವಿಕಿರಣಶೀಲ, ಬಣ್ಣರಹಿತ, ವಾಸನೆಯಿಲ್ಲದ, ರುಚಿಯಿಲ್ಲದ ಅನಿಲವಾಗಿದೆ. ಇದು ವಿಶೇಷವಾಗಿ ಗ್ರಾನೈಟ್ ಗಣಿಗಾರಿಕೆ ಹೆಚ್ಚುತ್ತಿರುವುದರಿಂದ ಇದನ್ನು ಸೇವಿಸಿದಾಗ ರೇಡಾನ್ ಕಣಗಳು ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಮತ್ತು ಕಾಲಾನಂತರದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಪ್ರಕಾರ, ರೇಡಾನ್ ನೈಸರ್ಗಿಕವಾಗಿ ಯುರೇನಿಯಂನಿಂದ ವಿಕಿರಣಶೀಲ ರೂಪಾಂತರದ ಮೂಲಕ ಉತ್ಪತ್ತಿಯಾಗುತ್ತದೆ. ಇದು ರಾಸಾಯನಿಕವಾಗಿ ಪ್ರತಿಕ್ರಿಯಾತ್ಮಕ ಪರಮಾಣುವಾಗಿ ರೂಪಾಂತರಗೊಳ್ಳುವ ಮೊದಲು ರೇಡಿಯಂ ರೂಪಾಂತರಕ್ಕೆ ಒಳಗಾಗುತ್ತದೆ.
ಸಂಶೋಧಕರ ಆರಂಭಿಕ ಅಧ್ಯಯನಗಳ ಪ್ರಕಾರ ಬೆಂಗಳೂರಿನ ಕೆಲವು ಭಾಗಗಳಲ್ಲಿ ರೇಡಾನ್ ಪ್ರತಿ ಲೀಟರ್‌ಗೆ 30ರಿಂದ 60 ಗ್ರಾಂಗಳ ಇರುವ ಮಿತಿಗೆ ಬದಲಾಗಿ 1000 ಮೈಕ್ರೋಗ್ರಾಂಗಳಷ್ಟು ಕಂಡುಬಂದಿದೆ. ಈ ಸಂಶೋಧನೆಯು ಈಗ ಬೆಂಗಳೂರಿನಲ್ಲಿ ನೀರಿನಲ್ಲಿ ರೇಡಾನ್‌ನ ಇರುವುದನ್ನು ಪತ್ತೆ ಹಚ್ಚುವ ಅಧ್ಯಯನವನ್ನು ಕೈಗೊಳ್ಳುವಂತೆ ಮಾಡಿದೆ ಎಂದು ಟಿಎನ್‌ಐಇ ವರದಿ ಮಾಡಿದೆ.
ಗಾಳಿ ಮತ್ತು ನೀರಿನಲ್ಲಿ ರೇಡಾನ್ ಇರುವುದರಿಂದ ಜನರಲ್ಲಿ ಶ್ವಾಸಕೋಶದ ಅಂಗಾಂಶಗಳ ಹಾನಿಗೆ ಕಾರಣವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಕೂಡ ಬರಬಹುದು. ವಾತಾವರಣದಲ್ಲಿ ಯುರೇನಿಯಂ ಇರುವುದರಿಂದ ಮೂತ್ರನಾಳದ ಮೇಲೆ ಪರಿಣಾಮ ಬೀರಲಿದ್ದು, ಮೂತ್ರಪಿಂಡದ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ರೇಡಾನ್ ಯುರೇನಿಯಂನಿಂದ ಸ್ವಾಭಾವಿಕವಾಗಿ ಬರುವುದರಿಂದ ಯುರೇನಿಯಂ ಅಂಶವು ಅಧಿಕವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಗಾಳಿ ಮತ್ತು ನೀರಿನಲ್ಲಿ ರೇಡಾನ್ ಇರುವಿಕೆಯು ಶ್ವಾಸಕೋಶದ ಅಂಗಾಂಶಗಳ ಹಾನಿ ಮಾಡುವ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಕಾರಣವಾಗುತ್ತದೆ. ಆದರೆ ಯುರೇನಿಯಂ ಇರುವುದರಿಂದ ಮೂತ್ರನಾಳದ ಮೇಲೆ ಪರಿಣಾಮ ಬೀರಲಿದ್ದು, ಮೂತ್ರಪಿಂಡದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ರೇಡಾನ್ ಯುರೇನಿಯಂನಿಂದ ಸ್ವಾಭಾವಿಕವಾಗಿ ಬರುವುದರಿಂದ, ಯುರೇನಿಯಂ ಅಂಶವು ಅಧಿಕವಾಗಿರಬಹುದು. ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಪಾವಗಡ ಸೇರಿದಂತೆ ಬೆಂಗಳೂರಿನ ಹೊರವಲಯದಲ್ಲಿ ಅಂತರ್ಜಲದಲ್ಲಿ ಯುರೇನಿಯಂ ಅಂಶ ಹೆಚ್ಚಿರುವುದನ್ನು ಪತ್ತೆ ಹಚ್ಚಿದ್ದಾರೆ.
ನಗರದ ಹೊರವಲಯದ ಕೆಲವು ಭಾಗಗಳಲ್ಲಿ ಯುರೇನಿಯಂ ಮಟ್ಟವು ಪ್ರತಿ ಲೀಟರ್‌ಗೆ 60 ಮೈಕ್ರೋಗ್ರಾಂಗಳ ಮಿತಿಯಲ್ಲಿ ಇರಬೇಕಾದ್ದು, ಪ್ರತಿ ಲೀಟರ್‌ಗೆ 8000 ಮೈಕ್ರೋಗ್ರಾಂಗಳಷ್ಟು ಇರುವುದು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿಂತಾಮಣಿಯಲ್ಲಿ ಪ್ರತಿ ಲೀಟರ್‌ಗೆ 5000ರಿಂದ 6000 ಮೈಕ್ರೋಗ್ರಾಂಗಳವರೆಗೆ ಇರುತ್ತದೆ. ರೇಡಾನ್ ಅಳತೆಯನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಶ್ರೀನಿವಾಸನ್ ಹೇಳಿದರು.

ಚಿಕ್ಕಬಳ್ಳಾಪುರದಂತಹ ಕೆಲವು ಸ್ಥಳಗಳಲ್ಲಿ ಅಧಿಕ ಯುರೇನಿಯಂ
ಐಐಎಸ್‌ಸಿಯಲ್ಲಿ ಬದಲಾಗುತ್ತಿರುವ ವಾತಾವರಣದಲ್ಲಿ ಆರೋಗ್ಯ: ಆರೋಗ್ಯ ವೃತ್ತಿಪರರನ್ನು ಸಬಲೀಕರಣಗೊಳಿಸುವುದು' ಎಂಬ ವಿಷಯದ ಕುರಿತು ಆರೋಗ್ಯ ವೃತ್ತಿಪರರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಆಯೋಜಿಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಲಹೆಗಾರ ಮತ್ತು ಡಿಸಿಸಿಸಿಯ ಪ್ರಾಧ್ಯಾಪಕ ಡಾ.ಎಚ್. ಪರಮೇಶ್ ಅವರು, ಆರಂಭಿಕ ಅಧ್ಯಯನಗಳು ಚಿಕ್ಕಬಳ್ಳಾಪುರದಂತಹ ಕೆಲವು ಸ್ಥಳಗಳಲ್ಲಿ ಯುರೇನಿಯಂ 1,000 ರಷ್ಟಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಅಧ್ಯಯನ ಕೈಗೊಂಡಿಲ್ಲ
ಕುತೂಹಲದ ಸಂಗತಿಯೆಂದರೆ, ಈಗ ನಿವೃತ್ತರಾಗಿರುವ ಅಂತರ್ಜಲ ಮಂಡಳಿಯ ಕೆಲವು ಅಧಿಕಾರಿಗಳು ನೀರಿನಲ್ಲಿ ರೇಡಾನ್ ಇರುವಿಕೆಯನ್ನು ಅಧ್ಯಯನ ಮಾಡಿದ್ದರೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಅದರ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಕೈಗೊಂಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಯುರೇನಿಯಂ ಅಂಶ ಹೆಚ್ಚಿರುವ ಸಂಸ್ಕರಿಸಿದ ನೀರನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆಯೂ ಗಮನ ಹರಿಸಲಾಗಿದೆ ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.

ಖನಿಜಗಳಿಂದಲೂ ಯುರೇನಿಯಂ ಪತ್ತೆ
ರಿವರ್ಸ್ ಆಸ್ಮೋಸಿಸ್ (ಆರ್‌ಒ) ನ ನೀರಿನ ಮೇಲಿನ ಅಧ್ಯಯನಗಳು ನೀರಿನಲ್ಲಿ ಯುರೇನಿಯಂನ ಹೆಚ್ಚಿನ ಅಂಶವನ್ನು ಹೊಂದಿರುವುದನ್ನು ಕಂಡುಹಿಡಿದಿದ್ದು, ಇದು ಕಳವಳಕಾರಿ ವಿಷಯವಾಗಿದೆ. ಇದಲ್ಲದೆ ಯುರೇನಿಯಂ ಎಂಬುದು ಬಿಟುಮೆನ್ ಮತ್ತು ಜಿರ್ಕಾನ್, ಮೊನಾಜೈಟ್ ಮುಂತಾದ ಖನಿಜಗಳಿಂದ ಬರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಮೂತ್ರಪಿಂಡದ ಕ್ಯಾನ್ಸರ್‌ಗೆ ಕಾರಣ
ಗಾಳಿ ಮತ್ತು ನೀರಿನಲ್ಲಿ ರೇಡಾನ್ ಇರುವಿಕೆಯು ಶ್ವಾಸಕೋಶದ ಅಂಗಾಂಶಗಳ ಹಾನಿಗೆ ಕಾರಣವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದರೆ ಯುರೇನಿಯಂ ಮೂತ್ರನಾಳದ ಮೇಲೆ ಪರಿಣಾಮ ಬೀರಲಿದ್ದು, ಮೂತ್ರಪಿಂಡದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಐಐಎಸ್‌ಸಿ ಸಂಶೋಧಕರು ತಿಳಿಸಿದ್ದಾರೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Bengaluru Water: ಬೆಂಗಳೂರು ಕೆಸಿ, ಎಚ್ ಎನ್ ವ್ಯಾಲಿ ನೀರಿನಿಂದ ಅಪಾಯವಿಲ್ಲ: ಸಚಿವ ಭೋಸರಾಜು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications