Get Updates
Get notified of breaking news, exclusive insights, and must-see stories!

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್: ಆರ್‌. ಅಶೋಕನ್ ಹೊಸ ಆಡಳಿತಾಧಿಕಾರಿಯಾಗಿ ನೇಮಕ

ಬೆಂಗಳೂರು, ನವೆಂಬರ್ 20: ಬೆಂಗಳೂರಿನ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಹೊಸ ಆಡಳಿತಾಧಿಕಾರಿಯಾಗಿ ಆರ್‌. ಅಶೋಕನ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ಅವ್ಯವಹಾರದ ಆರೋಪ ಹೊಂದಿರುವ ಶ್ರೀ ಗುರುರಾಘವೇಂದ್ರ ಬ್ಯಾಂಕ್‌ಗೆ, ಬ್ಯಾಂಕಿಂಗ್ ತಜ್ಞರನ್ನು ನೇಮಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನಿವೃತ್ತ ಜನರಲ್ ಮ್ಯಾನೇಜರ್ ಆರ್‌. ಅಶೋಕನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಸಾವಿರಾರು ಗ್ರಾಹಕರ ಠೇವಣಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಕೊಂಡ, ಭಾರೀ ಅವ್ಯವಹಾರ ನಡೆಸಿದ ಆರೋಪಕ್ಕೊಳಗಾಗಿರುವ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಬೆಂಗಳೂರು ನಗರದಲ್ಲಿಯೇ 12 ಶಾಖೆಗಳನ್ನು ಹೊಂದಿದೆ.

R Ashokan New administrative officer of Sri Guru Raghavendra Sahakara Bank

Recommended Video

      26 /11 ಅದೇ ದಿನ ಮತ್ತೊಂದು ದಾಳಿ ಸಾಧ್ಯತೆ | Oneindia Kannada

      ನೂತನ ಆಡಳಿತಾಧಿಕಾರಿ ನೇಮಕಗೊಂಡ ಬಳಿಕ, ಹಿಂದಿನ ಆಡಳಿತಾಧಿಕಾರಿ ಅವಧಿಯಲ್ಲಿನ ಸಾಲದ ಖಾತೆಗಳ ಮುಕ್ತಾಯ ಬಗ್ಗೆ ವಿಚಾರಣೆ ನಡೆಯಬೇಕು. ಸಾಲ ವಸೂಲಾತಿ ಮಾಡಲಾಗಿದೆಯೇ ಪರಿಶೀಲಿಸಬೇಕು. ಜೊತೆಗೆ ಅನುತ್ಪಾದಕ ಸಾಲದ ಕುರಿತಾಗಿ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಬೇಕು ಎಂದು ನೂತನ ಆಡಳಿತಾಧಿಕಾರಿಗೆ ಹೈಕೋರ್ಟ್ ಸೂಚಿಸಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+