ದೇಗುಲ ತನಕ ಬಂದು ನಳೀನ್ ಗೆ ವಿಶ್ ಮಾಡಿದ ಅಶೋಕ್, ಸಮಾರಂಭಕ್ಕೆ ಗೈರು
ಬೆಂಗಳೂರು, ಆಗಸ್ಟ್ 27: ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ನಳೀನ್ ಆಯ್ಕೆ ಬಗ್ಗೆ ಬಿಜೆಪಿಯಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು. ಮಿಕ್ಕಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ನೂತನ ಡಿಸಿಎಂ ಡಾ. ಅಶ್ವಥನಾರಾಯಣ, ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರ ಪದಗ್ರಹಣ ವೇದಿಕೆಗೆ ಬಂದು ನಳೀನ್ ಕುಮಾರ್ ಗೆ ಶುಭ ಕೋರಿದ ಮಾಜಿ ಸಿಎಂ, ಹಾಲಿ ಸಚಿವ ಜಗದೀಶ್ ಶೆಟ್ಟರ್ ನಂತರ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಪದಗ್ರಹಣ: ಗೈರಾದ ಪ್ರಮುಖ ನಾಯಕರು
ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಳಿನ್ ಕುಮಾರ್ ಕಟೀಲು ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರ ಹಸ್ತಾಂತರಿಸಿದರು. ಸಾವಿರಕ್ಕೂ ಅಧಿಕ ಗಣ್ಯಾತಿಗಣ್ಯರು ಉಪಸ್ಥಿತರಿದ್ದ ಈ ಸಮಾರಂಭದಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಡಿಸಿಎಂ ಸ್ಥಾನದ ಆಕಾಂಕ್ಷಿ ಹಾಲಿ ಸಚಿವ ಬಿ. ಶ್ರೀರಾಮುಲು ಗೈರಾಗಿದ್ದರು.
"ನೂತನ ರಾಜ್ಯಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಮ್ಮ ಪಕ್ಷದ ಹಿರಿಯ ಮುಖಂಡರು, ದಕ್ಷಿಣ ಕನ್ನಡ ಕ್ಷೇತ್ರದ ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪಕ್ಷವನ್ನು ಮತ್ತಷ್ಟು ಬಲಶಾಲಿಯಾಗಿಸಲು ನಿಮ್ಮೊಂದಿಗೆ ನಾವಿದ್ದೇವೆ. ನಾವೆಲ್ಲ ಒಂದಾಗಿ ಇನ್ನಷ್ಟು ಶ್ರಮಿಸಿ ಪಕ್ಷ ಕಟ್ಟೋಣ..." ಎಂದು ಆರ್ ಅಶೋಕ್ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ದೇಗುಲದಲ್ಲಿ ವಿ ಸೋಮಣ್ಣ ಹಾಗೂ ಅಶೋಕ್ ಅವರು ನಳೀನ್ ಜೊತೆ ಸಂತಸದಿಂದ ಫೋಟೋಗೆ ಪೋಸ್ ನೀಡಿ ಶುಭಹಾರೈಸಿದ್ದಾರೆ. ಆದರೆ, ಅಶೋಕ್ ಬೇರೆ ಕಾರ್ಯ ನಿಮಿತ್ತ ಅಲ್ಲಿಂದ ತೆರಳಿದ್ದು, ಅಧಿಕಾರ ಹಸ್ತಾಂತರ ಕಾರ್ಯಕ್ರಮ್ದಿಂದ ಹೊರಗುಳಿದಿದ್ದಾರೆ.
ಇಂದು ನಮ್ಮ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಮ್ಮ ಪಕ್ಷದ ಹಿರಿಯ ಮುಖಂಡರು, ದಕ್ಷಿಣ ಕನ್ನಡ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀ @nalinkateelರವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪಕ್ಷವನ್ನು ಮತ್ತಷ್ಟು ಬಲಶಾಲಿಯಾಗಿಸಲು ನಿಮ್ಮೊಂದಿಗೆ ನಾವಿದ್ದೇವೆ. ನಾವೆಲ್ಲ ಒಂದಾಗಿ ಇನ್ನಷ್ಟು ಶ್ರಮಿಸಿ ಪಕ್ಷ ಕಟ್ಟೋಣ. pic.twitter.com/EZx4DPcmdV
— R Ashoka (@RAshokaBJP) August 27, 2019
ವೇದಿಕೆಯಲ್ಲಿ 3 ಡಿಸಿಎಂಗಳಿದ್ದರೂ ಒಬ್ಬರ ಹೆಸರು ಮಾತ್ರ ಉಲ್ಲೇಖಿಸಿದ ಸಿಎಂ
ಸಿ.ಟಿ ರವಿ, ರಾಜುಗೌಡ ಅವರು ಹೋಟೆಲ್ ವೊಂದರಲ್ಲಿ ಬಂಡಾಯಯೆದ್ದಿರುವ ಬೆಂಗಳೂರಿನ ಒಕ್ಕಲಿಗ ಮುಖಂಡರನ್ನು ಒಟ್ಟುಗೂಡಿಸಿ ಸಭೆ ನಡೆಸಲು ಮುಂದಾಗಿದ್ದು, ಆರ್ ಅಶೋಕ್ ಕೂಡಾ ಉಪಸ್ಥಿತರಿರಲಿದ್ದಾರೆ ಎಂಬ ಮಾಹಿತಿಯಿದೆ.