Karnataka Caste Survey: ಜಾತಿ ಗಣತಿ ವರದಿಯಲ್ಲಿ ಎಡವಟ್ಟುಗಳು: ಪಟ್ಟಿ ಕೊಟ್ಟ ನಾಯಕ

ಬೆಂಗಳೂರು, ಏಪ್ರಿಲ್ 17: ಸರ್ಕಾರದ ಯೋಜನೆಗಳಲ್ಲಿ ಹುಳುಕು ಸಾಮಾನ್ಯ. ಆದರೆ ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಜಾತಿ ಗಣತಿ ವರಿಯಲ್ಲಿಯೇ ಅನೇಕ ತಪ್ಪುಗಳು ನಡೆದು ಹೋಗಿವೆ. ಕಾಟಾಚಾರಕ್ಕೆ ನಡೆಸಿದ ಜಾತಿ ಜನಗಣತಿ ಸಮೀಕ್ಷೆ ಸಾಲು ಸಾಲು ಎಡವಟ್ಟುಗಳಿಂದ ಕೂಡಿವೆ. ಇದೊಂದು ಅವ್ಯವಸ್ಥೆಯ ಗೂಡಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ದೂರಿದ್ದಾರೆ. ಸರ್ಕಾರ ಈ ಗಣತಿಯಲ್ಲಿ ಮಾಡಿದ ತಪ್ಪುಗಳ ಪಟ್ಟಿಗಳನ್ನು ಅವರು ನೀಡಿದ್ದಾರೆ. ಈ ಮೂಲಕ ಗಣತಿಗೆ ತಮ್ಮ ವಿರೋಧ ನಡೆ ಸರಿಯಿದೆ ಎಂದು ಪ್ರತಿಪಾದಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಕಾಟಾಚಾರಕ್ಕೆ ನಡೆಸಿದೆ. ಜಾತಿ ಜನಗಣತಿ ಸಮೀಕ್ಷೆಗಳಲ್ಲಿ ಎಡವಟ್ಟುಗಳಿವೆ. ಗಣತಿದಾರರು ಉತ್ಸಾಹ ಕಳೆದುಕೊಂಡಿದ್ದಾರೆ. ಸಿಎಂ ಸ್ಥಾನಕ್ಕಾಗಿ ನೀವು ಜಾತಿ ಜನಗಣತಿ ಹೆಸರಿನಲ್ಲಿ ಸಮಾಜದಲ್ಲಿ ಯಾಕೆ ವಿಷಬೀಜ ಯಾಕೆ ಬಿತ್ತುತ್ತೀರಿ?. ಆದ ಎಡವಟ್ಟುಗಳಿಗೆ ಗಣತಿ ಕುರಿತು ಪ್ರಕಟಗೊಮಡ ಮಾಧ್ಯಮ ವರದಿಗಳೇ ಸಾಕ್ಷಿ ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಅವರು ಆಕ್ರೋಶ ಹೊರ ಹಾಕಿದರು.

R Ashok Lists The Shortcomings in Karnataka Caste Census report CM Siddaramaiah

* ಜಾತಿ ಜನಗಣತಿಗಾಗಿ ನಿಯೋಜನೆ ಮಾಡಲಾಗಿದ್ದ ಸಿಬ್ಬಂದಿಗಳಿಗೆ ಗಣತಿ ಅರ್ಜಿ ತುಂಬುವ ಬಗ್ಗೆ ತರಬೇತಿಯನ್ನೇ ನೀಡಿರಲಿಲ್ಲ.

* ಗಣತಿ ಅರ್ಜಿಯಲ್ಲಿದ್ದ 56 ಕಾಲಂಗಳಲ್ಲಿ ಸಮೀಕ್ಷೆದಾರರು ಪ್ರಾಮಾಣಿಕವಾಗಿ ತುಂಬುತಿದ್ದುದು ಕೇವಲ 8-10 ಕಾಲಂ ಮಾತ್ರ. ಉಳಿದ ಕಾಲಂಗಳ ಭರ್ತಿಗೆ ಮಾನದಂಡ "ಅಂದಾಜು", "ಅಕ್ಕ-ಪಕ್ಕದ ಮನೆಯವರ ಹೆಸರು".

* ಉಪಜಾತಿ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಗೊಂದಲದಿಂದ ಕಾಲಂ ಖಾಲಿ.

* ಬಿಸಿಲು, ಮಳೆಯ ನೆಪವೊಡ್ಡಿ ಸಮೀಕ್ಷೆದಾರರು ಮನೆಮನೆಗೂ ತೆರಳಿ ಸಮೀಕ್ಷೆ ನಡೆಸಲು ಹಿಂದೇಟು ಹಾಕಿರುವುದು.

* ಹಲವೆಡೆ 2011ರ ಜನಗತಿಯ ನಕಲು ಪ್ರತಿಗಳನ್ನು ಆಧಾರವನ್ನಾಗಿಟ್ಟುಕೊಂಡು ಮಕ್ಕಳ ಕೈಯಲ್ಲಿ ಜಾತಿ ಗಣತಿ ಅರ್ಜಿ ಭರ್ತಿ ಮಾಡಿಸಲಾಗಿದೆ.

* ಪುಟಕ್ಕೆ 5-10 ರೂಪಾಯಿ ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ ಮಾಡಿಸಿರುವುದು.

* ಸಮೀಕ್ಷೆಗೆ ಒಳಪಟ್ಟವರ ಸಹಿಯನ್ನೂ ಮಕ್ಕಳೇ ಹಾಕುತ್ತಾರೆ. ಅಗತ್ಯವಿದ್ದಲ್ಲಿ ಹೆಬ್ಬೆಟ್ಟನ್ನು ಸಹ ಮಕ್ಕಳೇ ಒತ್ತುತ್ತಾರೆ ಎಂದಿರುವ ಅವರು ಸಮೀಕ್ಷೆಯಲ್ಲಿ ಇವೆಲ್ಲ ಎಡವಟ್ಟು ಆಗಿವೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇವೆಲ್ಲಾ ನಾವು ಮಾಡುತ್ತಿರುವ ಆರೋಪಗಳಲ್ಲ. ಅಂದಿನ ಸುದ್ದಿ ಮಾದ್ಯಮಗಳಲ್ಲಿ ವರದಿ ಪ್ರಕಟವಾಗಿವೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ ಇಷ್ಟೆಲ್ಲಾ ಎಡವಟ್ಟುಗಳಿರುವ ಜಾತಿ ಜನಗಣತಿ ವರದಿಯನ್ನು ಸಂಪುಟದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಏನಿದೆ?. ನಿಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅಲುಗಾಡುತ್ತಿರುವ ಮುಖ್ಯಮಂತ್ರಿ ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಜನಗಣತಿ ಹೆಸರಿನಲ್ಲಿ ಸಮಾಜದಲ್ಲಿ ವಿಷ ಬೀಜ ಯಾಕೆ ಬಿತ್ತುತ್ತೀರಿ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Take a Poll

ಇಂದು ಮಹತ್ವದ ಸಚಿವ ಸಂಪುಟ ಸಭೆ

ಮುಖ್ಯಮಂತ್ರಿಗಳು ಜಾತಿ ಗಣತಿ ವರದಿ ಬಿಡುಗಡೆ ಸಿದ್ಧತೆ ನಡೆಸಿ ಸಂಪುಟ ಸಭೆ ನಡೆಸಿದ್ದರು. ಈ ವೇಳೆ ಎಲ್ಲ ಸಚಿವರಿಗೆ ವರದಿ ಅಧ್ಯಯನ್ನಕ್ಕೆ ನೀಡಿದ್ದಾರೆ. ಒಂದು ವಾರ ಕಳೆದಿದೆ. ಇಂದು ಗುರುವಾರ (ಏಪ್ರಿಲ್ 17) ಸಂಜೆ ಮತ್ತೆ ಸಂಪುಟ ಸಭೆ ನಡೆಯಲಿದೆ. ಅಲ್ಲಿ ಜಾತಿ ಗಣತಿ ವರದಿ ಕುರಿತು ಮಹತ್ವದ ನಿರ್ಧಾರ ಪ್ರಕಟಿಸುಬಹುದು ಎಂದು ಊಹಿಸಲಾಗಿದೆ. ಇದಲ್ಲದೇ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಗಣತಿ ವರಿಗೆ ಸಾಕಷ್ಟು ವಿರೋಧ ಕೇಳಿ ಬರುತ್ತಿವೆ. ಇದನ್ನು ಮನಗಂಡು ಸರ್ಕಾರ ಇಂದು ಸಂಪುಟ ಉಪ ಸಮಿತಿ ರಚಿಸಿ, ಮತ್ತೊಮ್ಮೆ ವರದಿ ಕೂಲಂಕರಿಸಬಹುದು ಅಂತಲೂ ಹೇಳಲಾಗುತ್ತಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+