ಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಆರ್. ಅಶೋಕ್ ಮುಕ್ತ, ಸ್ಥಾನ ತೆರವಿಗೆ ಸಿಎಂ ಪತ್ರ ಬರೆದಿದ್ದು ಯಾರು?

ಮುಂಬರುವ ವಿಧಾನಸಭೆ ಚುನಾವಣೆ ವೇಳೆ ರಣಕಣವಾಗಿ ಬದಲಾಗುತ್ತದೆ ಎನ್ನಲಾಗುತ್ತಿರುವ ಮಂಡ್ಯದಲ್ಲಿ ದಿಢೀರ್ ರಾಜ್ಯಕೀಯ ಬದಲಾವಣೆ ಆಗಿದೆ. ಇದಕ್ಕೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ ಕಾರಣ ಎನ್ನಲಾಗಿದೆ.

ಬೆಂಗಳೂರು, ಜನವರಿ 10: ಮುಂಬರುವ ವಿಧಾನಸಭೆ ಚುನಾವಣೆ ವೇಳೆ ರಣಕಣವಾಗಿ ಬದಲಾಗುತ್ತದೆ ಎನ್ನಲಾಗುವ ಮಂಡ್ಯದಲ್ಲಿ ದಿಢೀರ್ ರಾಜ್ಯಕೀಯ ಬದಲಾವಣೆ ಆಗಿದೆ. ಇದಕ್ಕೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ ಕಾರಣ ಎನ್ನಲಾಗಿದೆ.

ತಮಗೆ ಪತ್ರ ಸಲ್ಲಿಕೆಯಾಗಿದ್ದ ಪತ್ರದ ಮೇರೆಗೆ ಇತ್ತೀಚೆಗಷ್ಟೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಆ ಸ್ಥಾನದಿಂದ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ವಿಧಾನಸೌಧದಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಸ್ಥಾನದಿಂದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮುಕ್ತಗೊಳಿಸಲಾಗಿದೆ. ಅವರಿಗೆ ಗ್ರಾಮ ವಾಸ್ತವ್ಯ ಮಾಡಲು ಸೂಚಿಸಲಾಗಿದೆ. ಈ ಕಾರಣದಿಂದ ಅವರನ್ನು ಉಸ್ತುವಾರಿ ಸಚಿವ ಸ್ಥಾನದಿಂದ ತೆಗೆಯಲಾಗಿದ್ದು, ಪುನಃ ಯಾರನ್ನೂ ಆ ಸ್ಥಾನಕ್ಕೆ ನೇಮಕ ಮಾಡಿಲ್ಲ. ಅಲ್ಲದೇ ತಮ್ಮನ್ನು ಸ್ಥಾನದಿಂದ ಮುಕ್ತ ಮಾಡಲು ಸ್ವತಃ ಆಶೋಕ್ ನಮಗೆ ಪತ್ರ ಬರೆದಿದ್ದರು ಎಂದು ಬೊಮ್ಮಾಯಿ ತಿಳಿಸಿದರು.

R.Ashok Has Left Post Of Mandya District In-Charge Minister Says CM Basavaraj Bommai

ತಪ್ಪಿದ ಸಂಭವನೀಯ ವ್ಯತಿರಿಕ್ತ ಪರಿಣಾಮ

ಇತ್ತೀಚೆಗಷ್ಟೆ ಅಂದರೆ ಕಳೆದ ತಿಂಗಳು ಜನವರಿ 24ರಂದು ಬಿಜೆಪಿ ನಾಯಕ, ಸಚಿವ ಕೆ.ಗೋಪಾಲಯ್ಯ ಅವರ ಬದಲಿಗೆ ಆರ್‌.ಅಶೋಕ್ ಮಂಡ್ಯ ಉಸ್ತುವಾರಿಯಾಗಿ ನೇಮಿಸಲಾಯಿತು. ಆದರೆ ಇದಕ್ಕೆ ವ್ಯಾಪಕ ಆಕ್ರೋಶ ಸ್ವಪಕ್ಷೀಯರಿಂದ ಕೇಳಿ ಬಂತು. ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ಅಭಿಯಾನ ನಡೆದಿತ್ತು. ಹೀಗಾಗಿ ಬಿಜೆಪಿ ಸರ್ಕಾರ ಕೂಡಲೇ ಎಚ್ಚತ್ತುಕೊಂಡು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಸಂಭವನೀಯ ವ್ಯತಿರಿಕ್ತ ಪರಿಣಾಮ ತಪ್ಪಿಸಿದೆ.

ಹಾಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಬೆಂಗಳೂರು ನಗರ ಮೂಲದವರಾಗಿದ್ದಾರೆ. ಅವರದ್ದು ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ. ಶಾಸಕರಾದ ಅವರನ್ನು ಇತ್ತೀಚೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ನೀಡಿದ ಮೇಲೆ ಕೇವಲ ಎರಡು ಭಾರಿ ಮಾತ್ರ ಅವರು ಮಂಡ್ಯ ಹೋಗಿದ್ದರು ಎನ್ನಲಾಗಿದೆ. ತದನಂತರ ಅವರಿಗೆ ಅತ್ತ ಮಂಡ್ಯಕ್ಕೂ ಹೋಗದೆ, ಇತ್ತ ಪದ್ಮನಾಭ ನಗರ ಕ್ಷೇತ್ರಕ್ಕೂ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಮಾತುಗಳು ಕೇಳಿ ಬಂದಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+