ಎಚ್ಡಿಕೆ ದಂಗೆ ಮಾತು ನಕ್ಸಲರ ಹೇಳಿಕೆಯಂತಿದೆ: ಅಶೋಕ್ ವಾಗ್ದಾಳಿ

ಬೆಂಗಳೂರು, ಸೆ.21: ಕುಮಾರಸ್ವಾಮಿ ದುರಹಂಕಾರದಿಂದ ಸರ್ಕಾರ ಬೀಳಲಿದೆ, ಅವರು ರಾಜ್ಯವನ್ನು ಕಾಪಾಡುವ ಹುದ್ದೆಯಲ್ಲಿದ್ದು ದಂಗೆ ಪದ ಪ್ರಯೋಗ ಮಾಡಿ ನಕ್ಸಲರಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಬಿಜೆಪಿ ವಿರುದ್ಧ ದಂಗೆ ಏಳಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಮೈಸೂರು ಬ್ಯಾಂಕ್ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.

ಸರ್ಕಾರ ಇರುತ್ತೋ ಹೋಗುತ್ತೋ ಎನ್ನುವುದು ಸ್ವತಃ ಕುಮಾರಸ್ವಾಮಿಗೆ ಗೊತ್ತಿಲ್ಲ, ಸರ್ಕಾರದ ಮಂತ್ರಿಗಳು ಭಿನ್ನಮತ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಂತ್ರಿ ಮಾಡದೆ ಇದ್ದರೆ ಶಾಸಕರು ಸರ್ಕಾರವನ್ನು ಕೆಡವುದಾಗಿ ಎಚ್ಚರಿಕೆ ನೀಡಿದ್ದಾರೆ, ಎಚ್ಡಿಕೆಗೆ ತಾಕತ್ತಿದ್ದರೆ ಭಿನ್ನಮತ ಸಚಿವರು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ.

R.Ashok criticises HDKs Dange statement like naxal

ಸರ್ಕಾರ ನೂರು ದಿನ ಪೂರೈಸಿದರೂ ಅಭಿವೃದ್ಧಿ ಕಾಣುತ್ತಿಲ್ಲ, ಸರ್ಕಾರ ಇದ್ದರೂ ಅಷ್ಟೆ ಬಿಟ್ಟರೂ ಅಷ್ಟೆ ಅಂತ ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ, ದಂಗೆ ಪದದ ಅರ್ಥ ಸಿಎಂ ಗೆ ಗೊತ್ತಿದ್ದಂತೆ ಕಾಣುತ್ತಿಲ್ಲ, ಇದಕ್ಕೆ ಪದಕೋಶ ತೆಗೆದು ನೋಡಲಿ ಎಂದು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+