ದಾಸರಹಳ್ಳಿ ಕ್ಷೇತ್ರದಲ್ಲಿ ಪಂಜಾಬ್ ಸಿಎಂ ಜೊತೆ ಪೊರಕೆ ಹಿಡಿದು ಬಂದ ಸಾವಿರಾರು ಮಹಿಳೆಯರು! ಯಾಕೆ ಗೊತ್ತಾ?

ಬೆಂಗಳೂರು: ಚುನಾವಣೆ ಅಖಾಡ ರಂಗೇರಿದ್ದು ಗೆಲುವಿಗಾಗಿ ದಿಲ್ಲಿಯಿಂದ ನಾಯಕರು ಬೆಂಗಳೂರಿಗೆ ಓಡಿ ಬಂದಿದ್ದಾರೆ. ಇದು ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ, ಪ್ರತಿ ರಾಜಕೀಯ ಪಕ್ಷವೂ ಗೆಲುವಿಗಾಗಿ ವರಿಷ್ಠ ಪಡೆಯನ್ನೇ ಕರೆಸಿಕೊಂಡಿದೆ. ಆಮ್ ಆದ್ಮಿ ಪಕ್ಷ ಕೂಡ ವರಿಷ್ಠರ ನೆರಳಲ್ಲಿ ಪ್ರಚಾರ ಶುರು ಮಾಡಿದ್ದು, ದಾಸರಹಳ್ಳಿಯಲ್ಲಿ ಪಂಜಾಬ್ ಸಿಎಂ ಜೊತೆ ಮಹಿಳೆಯರು 'ಪೊರಕೆ' ಹಿಡಿದು ಎಂಟ್ರಿ ಕೊಟ್ಟಿದ್ದರು.

ಬೆಂಗಳೂರಿನಲ್ಲಿ ಈ ಬಾರಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳ ಪೈಕಿ ದಾಸರಹಳ್ಳಿ ಕೂಡ ಒಂದು. ಇಲ್ಲಿ 2018 ರಲ್ಲಿ ಜೆಡಿಎಸ್‌ನ ಮಂಜುನಾಥ್ ಗೆಲುವು ಸಾಧಿಸಿದ್ದರು. ಬಿಜೆಪಿಯ ಎಸ್. ಮುನಿರಾಜು 10675 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಮತ್ತೊಂದು ಕಡೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೀಗ ಇದೇ ಕ್ಷೇತ್ರದಲ್ಲಿ ಗೆದ್ದು ಬೀಗಲು ಮೂರೂ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಾ, ಅಖಾಡದಲ್ಲಿ ತೊಡೆ ತಟ್ಟಿವೆ. ಈ ಹೊತ್ತಲ್ಲೇ ಆಮ್ ಆದ್ಮಿ ಪಕ್ಷ ಗೆಲುವಿಗಾಗಿ ಭರ್ಜರಿ ಪ್ರಯತ್ನ ಶುರುಮಾಡಿದೆ.

Punjab CM Bhagwant Mann did a road show for Dasarahalli constituency AAP contestant

ದಾಸರಹಳ್ಳಿ ಅಖಾಡದಲ್ಲಿ ಪಂಜಾಬ್ ಸಿಎಂ!

ಹೌದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರ ದಿಲ್ಲಿಯಿಂದ ಬಂದಿರುವ ವರಿಷ್ಠರು ಸ್ಟಾರ್ ಕ್ಯಾಂಪೇನರ್ ಆಗಿ ಪ್ರಚಾರ ನಡೆಸುತ್ತಿದ್ದಾರೆ. ಇದೇ ರೀತಿ ಆಮ್ ಆದ್ಮಿ ಪಕ್ಷ ಕೂಡ ಕೆಲ ಸ್ಟಾರ್ ಕ್ಯಾಂಪೇನರ್‌ಗಳನ್ನ ಗುರುತಿಸಿ, ಕರ್ನಾಟಕ ವಿಧಾನಸಭೆಯಲ್ಲಿ ಪ್ರಚಾರ ನಡೆಸಲು ಕಳುಹಿಸಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇಂದು ಎಎಪಿ ಅಭ್ಯರ್ಥಿ ಕೀರ್ತನ್ ಕುಮಾರ್ ಪರವಾಗಿ ರೋಡ್ ಶೋ ನಡೆಸಿದ ಭಗವಂತ್ ಮಾನ್ ಜೊತೆ ಕೈಯಲ್ಲಿ ಪೊರಕೆ ಹಿಡಿದು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಬಂದರು.

ಆಪ್ ಗುರುತು, ಪೊರಕೆ ಮೆರವಣಿಗೆ!

ಅಷ್ಟಕ್ಕೂ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಚಾರ ನಡೆಸುತ್ತಿದ್ದಾರೆ. ಇದೇ ರೀತಿ ಇಂದು ಬೆಂಗಳೂರಿನ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಕೀರ್ತನ್ ಕುಮಾರ್ ಪರ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಸಾವಿರಾರು ಕಾರ್ಯಕರ್ತರ ಜೊತೆ ದಾಸರಹಳ್ಳಿ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸಿದರು. ಇದೇ ವೇಳೆ ಆಪ್‌ನ ಮಹಿಳಾ ಕಾರ್ಯಕರ್ತೆಯರ ಪೊರಕೆ ಮೆರವಣಿಗೆ ಗಮನ ಸೆಳೆಯಿತು.

Punjab CM Bhagwant Mann did a road show for Dasarahalli constituency AAP contestant

ದಾಸರಹಳ್ಳಿ ಬಳಿಯ ಹೆಗ್ಗೇನಹಳ್ಳಿಯ ಇಂದಿರಾ ಕ್ಯಾಂಟೀನ್ ಸ್ಥಳದಿಂದ ಶುರುವಾದ ಆಮ್ ಆದ್ಮಿ ಪಕ್ಷದ ಈ ರೋಡ್ ಶೋ, ಪೀಣ್ಯ 2ನೇ ಹಂತದ ಬಸ್ ನಿಲ್ದಾಣ, ರಾಜಗೋಪಾಲ ನಗರ ಪೊಲೀಸ್ ಠಾಣೆ ಮಾರ್ಗವಾಗಿ ಸಾಗಿತು. ಎಎಪಿಯ ರಾಜ್ಯ ಮುಖಂಡರು ಕೂಡ ದಾಸರಹಳ್ಳಿಯ ರೋಡ್ ಶೋಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಇದೇ ವೇಳೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಾಗ್ದಾಳಿ ನಡೆಸಿದರು.

ಪಂಜಾಬ್ ಸಿಎಂ '40 ಪರ್ಸೆಂಟ್' ವಾಗ್ದಾಳಿ

'ಕರ್ನಾಟಕದಲ್ಲಿ 40 ಪರ್ಸೆಂಟ್‌ ಕಮಿಷನ್‌ ಡಬಲ್ ಇಂಜಿನ್ ಸರ್ಕಾರವಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕಿಂತ ಭ್ರಷ್ಟಾಚಾರ ಡಬಲ್‌ ಆಗಿದೆ. ಕಾಂಗ್ರೆಸ್‌, ಬಿಜೆಪಿ ಮಧ್ಯೆ ಹೊಂದಾಣಿಕೆ ರಾಜಕಾರಣವಿದೆ. ಕರ್ನಾಟಕಕ್ಕೆ ಡಬಲ್‌ ಇಂಜಿನ್‌ ಸರ್ಕಾರ ಅಗತ್ಯ ಇಲ್ಲ ಹೊಸ ಇಂಜಿನ್‌ 'ಕೇಜ್ರಿವಾಲ್‌ ಮಾದರಿ' ಸರ್ಕಾರ ಬೇಕಾಗಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ರಾಜಕೀಯ ಸ್ವಚ್ಛತೆ ಮಾಡಲಾಗಿದ್ದು, ಇದೀಗ ಕರ್ನಾಟಕದಲ್ಲಿ ಸ್ವಚ್ಛತೆ ಮಾಡಬೇಕು' ಎಂದು ಭಗವಂತ್ ಮಾನ್ ಅಭಿಪ್ರಾಯಪಟ್ಟರು. ಹಾಗೇ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಒಟ್ನಲ್ಲಿ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ನಾನಾ ಅಸ್ತ್ರ ಪ್ರಯೋಗಿಸುತ್ತಿವೆ. ಅದರಲ್ಲೂ ದಾಸರಹಳ್ಳಿ ಕ್ಷೇತ್ರದಲ್ಲಿ ಇಷ್ಟುದಿನ ತ್ರಿಕೋನ ಸ್ಪರ್ಧೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಇದೀಗ 4 ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟವನ್ನ ನಿರೀಕ್ಷಿಸುತ್ತಿದ್ದಾರೆ ಸ್ಥಳೀಯರು. ಅದೇನೆ ಇರಲಿ ರಾಜಕೀಯ ಪಕ್ಷಗಳ ಎಲ್ಲಾ ಪ್ರಯತ್ನಗಳೂ ಅದೆಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ತಿಳಿಯಲು ಇನ್ನು ಕೆಲವೇ ದಿನ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+