ಕಸ ವಿಂಗಡನೆ ಮಾಡುವಂತೆ ಪ್ರಚಾರ ಮಾಡ್ತಾರೆ ಪುನೀತ್
ಬೆಂಗಳೂರು, ಫೆಬ್ರವರಿ 06 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸ ವಿಂಗಡನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಆಂದೋಲನ ಕೈಗೊಳ್ಳಲಿದೆ. ನಟ ಪುನೀತ್ ರಾಜ್‌ಕುಮಾರ್ ಅವರು ಈ ಆಂದೋಲನದ ರಾಯಭಾರಿಯಾಗಿದ್ದಾರೆ.
ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಮೂಲದಲ್ಲಿಯೇ ಕಸವನ್ನು ವಿಂಗಡೆನೆ ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸಲು ಪಾಲಿಕೆ ಪ್ರಚಾರ ಆಂದೋಲನ ನಡೆಸಲಿದೆ. ಪುನೀತ್ ರಾಜ್‌ಕುಮಾರ್ ಅವರು ಇದರ ರಾಯಭಾರಿಯಾಗಿದ್ದು, ಹಲವು ನಟ-ನಟಿಯರು ಈ ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಮಂಜುನಾಥ ರೆಡ್ಡಿ ಹೇಳಿದರು. [ಬೆಂಗಳೂರು : ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ]

ಪಾಲಿಕೆಯ ಆರೋಗ್ಯ ವಿಭಾಗದ ಡಾ.ಯತೀಶ್ ಕುಮಾರ್ ಅವರು ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಪುನೀತ್ ರಾಜ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದು, ಕಸ ವಿಂಗಡೆನೆ ಕುರಿತ ಜಾಹೀರಾತು ಮತ್ತು ಅಭಿಯಾನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. [ಬೆಂಗಳೂರಿಗರೇ ದಾರಿಯಲ್ಲಿ ಕಸ ಕಂಡ್ರೆ ಸೆಲ್ಫಿ ತಗೊಳ್ಳಿ!]
ಪುನೀತ್ ರಾಜ್‌ಕುಮಾರ್ ಅವರು ಈ ಆಂದೋಲನದ ರಾಯಭಾರಿಯಾಗಿದ್ದು, ಹಿರಿಯ ನಟಿ ಮತ್ತು ವಿಧಾನಪರಿಷತ್ ಸದಸ್ಯೆ ಜಯಮಾಲಾ, ತಾರಾ ಮುಂತಾದ ಸಿನಿಮಾ ಮತ್ತು ಕಿರುತೆರೆ ನಟ-ನಟಿಯರು ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ. [ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]
ಕರ್ನಾಟಕ ಹೈಕೋರ್ಟ್ ಆದೇಶದಂತೆ ಬೆಂಗಳೂರು ನಗರದಲ್ಲಿ 2016ರ ಜನವರಿ 1ರಿಂದಲೇ ಕಸ ವಿಂಗಡಣೆಯನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ. ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಹೇಳಿದೆ.












Click it and Unblock the Notifications