ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ಐ ನೇಮಕಾತಿ ಹಗರಣ: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ- ಉಗ್ರ ಸಂಘಟನೆ ಸೇರುವ ಬೆದರಿಕೆ

|
Google Oneindia Kannada News

ಬೆಂಗಳೂರು, ಮೇ 16: ಪಿಎಸ್ಐ ಹುದ್ದೆ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದಾಗ ಅದೆಷ್ಟೋ ಅಭ್ಯರ್ಥಿಗಳು ನೂರಾರು ಕನಸನ್ನು ಕಂಡು ನೆಮ್ಮದಿಯಾಗಿ ನಿದ್ದೆಯನ್ನು ಮಾಡದೇ ಕಷ್ಟಪಟ್ಟು ಓದಿದ್ರು. ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಂಡು ಸಿಹಿ ಹಂಚಿ ಸಂಭ್ರಮಿಸಿದ್ದರು. ಪರೀಕ್ಷೆಯ ಅಕ್ರಮ ಬಯಲಾಗುತ್ತಿದ್ದಂತೆ ಸರ್ಕಾರ ಪರೀಕ್ಷೆಯನ್ನೇ ರದ್ದು ಮಾಡಿತ್ತು. ಅಕ್ರಮ ಎಸಗಿದವರಿಗೆ ಶಿಕ್ಷೆಯನ್ನು ಕೊಡಬೇಕಿತ್ತು ಆದರೆ ಪರೀಕ್ಷೆಯನ್ನೇ ರದ್ದು ಮಾಡಿ ನಿಯತ್ತಿನಿಂದ ಪರೀಕ್ಷೆಯನ್ನು ಬರೆದಿದ್ದ ಅಭ್ಯರ್ಥಿಗಳಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಪರೀಕ್ಷೆಯನ್ನು ರದ್ದು ಮಾಡಿದ್ದರಿಂದ ಮನನೊಂದಿರುವ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರವನ್ನು ಬರೆದಿದ್ದಾರೆ.

ಪಿಎಸ್ ಪರೀಕ್ಷೆಯನ್ನು ರದ್ದು ಮಾಡಿ ಮರು ಪರೀಕ್ಷೆಗೆ ಸರ್ಕಾರ ಆದೇಶ ಮಾಡಿದೆ. ಕಷ್ಟಪಟ್ಟು ಓದಿ ನೇಮಕಾತಿ ಪಟ್ಟಿಯಲ್ಲಿ ಹೆಸರು ಬಂದಿತ್ತು. ಇದೀಗ ಮತ್ತೊಮ್ಮೆ ಪರೀಕ್ಷೆಯನ್ನು ಬರೆದರೆ ಮೊದಲಿನಷ್ಟು ಅಂಕ ಬರುತ್ತೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಇದರಿಂದಾಗಿ ಮನನೊಂದಿರುವ ಅಭ್ಯರ್ಥಿಗಳು ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡು ಪುಟದಲ್ಲಿ ಪತ್ರ ಬರೆದು ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಇದೀಗ ಮೋದಿಗೆ ರಕ್ತದಲ್ಲಿ ಬರೆದಿರುವ ಪತ್ರ ಸಾಮಾಜಿಕ ಜಾಲದಾಣಗಳಲ್ಲಿ ವೈರಲ್ ಆಗಿದೆ.

ಪ್ರಧಾನಿ ಮೋದಿಯವರಿಗೆ ರಕ್ತದಲ್ಲಿ ಬರೆದ ಪತ್ತದಲ್ಲೇನಿದೆ..?

ಪಿಎಸ್ಐ ಪರೀಕ್ಷೆಯ ಆಯ್ಕೆಯಲ್ಲಿ ಮೋದ ಹೋದವರಿಗೆೆ ನ್ಯಾಯವನ್ನು ಒದಗಿಸಬೇಕು. ಅನ್ಯಾಯ, ಅಕ್ರಮವನ್ನು ಎಸಗಿದವರನ್ನು ಜೈಲಿಗೆ ಹಾಕಬೇಕು. ಆದರೆ ನಿಯತ್ತಿನಿಂದ ಪ್ರಾಮಾಣಿಕವಾಗಿ ಬರೆದು ಪಾಸಾದವರಿಗೆ ಮೋಸವಾಗಬಾರದು. ಎಫ್ ಡಿಎ ಪರೀಕ್ಷೆ 2021ರಲ್ಲಿ ಅಕ್ರಮ ಎಸಗಲಾಗಿದೆ. ಅದ್ನು ತನಿಖೆ ಮಾಡಿ ನ್ಯಾಯವನ್ನು ಒದಗಿಸಬೇಕು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅಪಾರಗೌರವವಿದೆ, ಅವರ ಸೂಕ್ತ ತನಿಖೆಗೆ ಆದೇಶ ಮಾಡಿ ನಮಗೆ ನ್ಯಾಯ ವದಗಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಪಿಎಸ್ಐ ಪರೀಕ್ಷೆಯನ್ನು ರದ್ದು ಮಾಡಿದ್ದರಿಂದ ಮನ ನೊಂದಿರುವ ಅಭ್ಯರ್ಥಿಗಳು ರಕ್ತ ಪತ್ರದ ಮುಖೇನ ತಮ್ಮ ನೋವನ್ನು ಹೊರಹಾಕಿ ಮೋದಿಯವರಲ್ಲಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ.

PSI Recruitment Scam: Candidates wrote Letter to PM Modi in Blood, Threaten to Join Terror Group

ಉಗ್ರ ಸಂಘಟನೆ ಸೇರುವ ಬೆದರಿಕೆ ಹಾಕಿರುವ ಪಿಎಸ್‌ಐ ಅಭ್ಯರ್ಥಿಗಳು

ಪ್ರಧಾನಿ ಮೋದಿಯವರಿಗೆ ರಕ್ತದಲ್ಲಿ ಎರಡು ಪುಟಗಳಲ್ಲಿ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಮೋದಿಯವರಲ್ಲಿ ಮನವಿಯನ್ನು ಮಾತ್ರ ಮಾಡಲಾಗಿಲ್ಲ ಬೆದರಿಕೆ ರೂಪದಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ. ಪತ್ರದಲ್ಲಿ 'ನಮಗೆ ನ್ಯಾಯವನನ್ನು ಕೊಡಿಸದಿದ್ದರೆ ನಾವು ಮುಂದೆ ಉಗ್ರ ಸಂಘಟನೆಯ ಜೊತೆ ಕೈ ಜೋಡಿಸುತ್ತೇವೆ ಹಾಗೂ ಉಗ್ರ ಸಂಘಟನೆಯನ್ನು ಸೇರುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹದ್ದೆಗಳು ಹಣ ಇದ್ದವರಿಗೆ ಎನ್ನುವ ವ್ಯವಸ್ಥೆ ಬಂದಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತುಹೋಗಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಿ ಹುದ್ದೆ ಪರೀಕ್ಷೆಗಳನ್ನ ಬರೆಯುವುದಿಲ್ಲ. ಬದಲಾಗಿ ಟೆರೆರಿಸ್ಟ್ ಗಳ ಜೊತೆ ನಕ್ಸಲೈಟ್ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಬಳಿ ಹಣ ಪಡೆದ ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮನನೊಂದು ಪತ್ರ ಬರೆದವರು ಯಾರು..?

ಪಿಎಸ್ಐ ಹಗರಣದಿಂದ ಅದೆಷ್ಟೋ ಅಭ್ಯರ್ಥಿಗಳಿಗೆ ಅನ್ಯಾಯವಾಗಿರೋದು ಸತ್ಯ ಎಂದು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೆ ಪರೀಕ್ಷೆಯನ್ನು ರದ್ದು ಮಾಡಿ ತಿರ್ಮಾನವನ್ನು ಕೈಕೊಂಡಿದ್ದಾರೆ. ಇದರಿಂದ ನೊಂದ ಅಭ್ಯರ್ಥಿಗಳು ರಕ್ತದಲ್ಲಿ ಪತ್ರವನ್ನು ಬರೆದಿದ್ದಾರೆ. ಆದರೆ ಈ ಪತ್ರವನ್ನು ಬರೆದಲರು ಯಾರು ಅನ್ನೋದು ಮಾತ್ರ ತಿಳಿದಿಲ್ಲ, ಪತ್ರದಲ್ಲಿ ನಾವು ಎಂಟು ಜನ ಸೇರಿಕೊಂಡು ಪತ್ರವನ್ನು ಬರೆಯುತ್ತಿದ್ದೇವೆ ಎಂದು ಉಲ್ಲೇಖವನ್ನು ಮಾಡಿದ್ದಾರೆ. ಆದರೆ ಆ ಅಭ್ಯರ್ಥಿಗಳು ಯಾರು ಎಲ್ಲಿಂದ ಬರೆದ ಪತ್ರ ಅನ್ನೋದು ಮಾತ್ರ ನಿಗೂಢವಾಗಿದೆ.

PSI Recruitment Scam: Candidates wrote Letter to PM Modi in Blood, Threaten to Join Terror Group

ಪಿಎಸ್‌ಐ ಹುದ್ದೆಯ ಕನಸಿನಲ್ಲಿದ್ದ ಅಭ್ಯರ್ಥಿಗಳು ಪರೀಕ್ಷೆಯನ್ನು ರದ್ದು ಮಾಡಿದ್ದ ವಿಚಾರವನ್ನು ನ್ಯಾಯಾಲದ ಅಂಗಳಕ್ಕೆ ತೆೆಗೆದುಕೊಂಡು ಹೋಗಿ್ದಾರೆ. ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟಗಳು ನಡೆಯುತ್ತಿವೆ ಆದರೂ ಕೆಲ ಅಭ್ಯರ್ಥಿಗಳು ಪ್ರಧಾನಿ ಮೋದಿಯವರ ಗಮನವನ್ನು ಸೆಳೆಯಲು ರಕ್ತದಲ್ಲಿ ಪತ್ರವನ್ನು ಬರೆದಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

ಜನತೆ ಜೊತೆ ಕಾಂಗ್ರೆಸ್ ಕೊಂಡಿ ಕಳಚಿದೆ ಎಂದು ಒಪ್ಪಿಕೊಂಡ ರಾಹುಲ್ ಗಾಂಧಿ | Oneindia Kannada

English summary
PSI Recruitment scam : Candidates wrote Letter to PM Modi in Blood, Threaten to Join Terror Group. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X