ನ್ಯಾ.ಸದಾಶಿವ ವರದಿ ಅನುಷ್ಠಾನ ವಿರೋಧಿಸಿ ಪ್ರತಿಭಟನೆ

ಬೆಂಗಳೂರು, ಡಿಸೆಂಬರ್ 29: ನ್ಯಾ.ಎ.ಜೆ.ಸದಾಶಿವ ವರದಿ ಜಾರಿ ವಿರೋಧಿಸಿ ವಿವಿಧ ತಳ ಸಮುದಾಯಕ್ಕೆ ಸೇರಿದ ಜನರು ಇಂದು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿರುವ ಪ್ರತಿಭಟನಾಕಾರರು, ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರದಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ರ್ಯಾಲಿ ನಡೆಸುತ್ತಿದ್ದಾರೆ.

Protest rally against Sadashiva Report

ಪ್ರತಿಭಟನೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಭಾಗಿಯಾಗಿದ್ದು, ಸಿಟಿ ರೈಲ್ವೆ ಸ್ಟೇಷನ್‌ನಿಂದ ಫ್ರೀಡಂ ಪಾರ್ಕ್‌ ವರೆಗೆ ಪ್ರತಿಭಟನೆ ನಡೆಯಲಿದೆ.

ಬೋವಿ, ಲಂಬಾಣಿ, ವಡ್ಡರು ಇನ್ನಿತರೆ ತಳ ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡುವಂತೆ ಸದಾಶಿವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಹಾಗಾಗಿ ಈ ವರದಿಯನ್ನು ಅನುಷ್ಠಾನಕ್ಕೆ ತರಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ನಾಳೆ (ಡಿಸೆಂಬರ್ 30ರಂದು) ಸದಾಶಿವ ವರದಿ ಜಾರಿ ಕುರಿತಂತೆ ರಾಜ್ಯದ ದಲಿತ ನಾಯಕರು, ಸಂಘಟನೆಗಳ ಮುಖಂಡರ ಸಭೆಯನ್ನು ಮುಖ್ಯಮಂತ್ರಿಗಳು ಕರೆದಿರುವ ಕಾರಣ ಇಂದು ಆ ಸಭೆಗೆ ಪ್ರತಿರೋಧವಾಗಿ ವರದಿ ಜಾರಿ ವಿರೋಧಿ ಪ್ರತಿಭಟನೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+