ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತ್ಯೇಕ ಫಾರ್ಮಾ, ಮೆಡಿಕಲ್ ಡಿವೈಸ್ ಖಾತೆಗೆ ಪ್ರಸ್ತಾವನೆ: ಅನಂತ್ ಕುಮಾರ್

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಪ್ರತ್ಯೇಕ ಫಾರ್ಮಾ ಮತ್ತು ಮೆಡಿಕಲ್ ಡಿವೈಸ್ ಖಾತೆ ತೆರೆಯಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಫಾರ್ಮಾಸೆಟಿಕಲ್ ಹಾಗೂ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಇಂಟರ್ನ್ಯಾಷನಲ್ ಎಗ್ಸಿಬಿಷನ್ ಸೆಂಟರ್ ನಲ್ಲಿ ನಡೆಯುತ್ತಿರುವ 3ನೇ ಆವೃತ್ತಿಯ "ಇಂಡಿಯಾ ಫಾರ್ಮಾ 2018 ಮತ್ತು ಇಂಡಿಯಾ ಮೆಡಿಕಲ್ ಡಿವೈಸ್ 2018" ಅನ್ನು ಇಂದು (ಫೆ.15) ಉದ್ಘಾಟಿಸಿ ಅವರು ಮಾತನಾಡಿದರು.

ಇಂಡಿಯಾ ಫಾರ್ಮಾ 2018 ಉದ್ಘಾಟಿಸಿದ ಅನಂತ ಕುಮಾರ್ಇಂಡಿಯಾ ಫಾರ್ಮಾ 2018 ಉದ್ಘಾಟಿಸಿದ ಅನಂತ ಕುಮಾರ್

ನರೇಂದ್ರ ಮೋದಿ ಸರಕಾರ 'ಆಯುಷ್ಮಾನ್ ಭಾರತ' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಬೇಕಾಗಿದ್ದು ಇದರಲ್ಲಿ ಫಾರ್ಮಾ ಮತ್ತು ಮೆಡಿಕಲ್ ಡಿವೈಸ್ ಉದ್ಯಮಿಗಳ ಪಾತ್ರ ಪ್ರಮುಖವಾದುದು ಎಂದು ಅಭಿಪ್ರಾಯಪಟ್ಟರು.

2 ತಿಂಗಳಲ್ಲಿ ಅನುಷ್ಠಾನ

2 ತಿಂಗಳಲ್ಲಿ ಅನುಷ್ಠಾನ

ಆಯುಷ್ಮಾನ್ ಭಾರತದಂಥ ಬೃಹತ್ ಆರೋಗ್ಯ ಯೋಜನೆ ಜಗತ್ತಲ್ಲೇ ಇಲ್ಲ. ಈ ಯೋಜನೆ ಅನ್ವಯ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ನೀಡಲಾಗುತ್ತದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸವಾಲನ್ನು ನಾವು ಸ್ವೀಕರಿಸಿದ್ದೇವೆ. ಇನ್ನು ಎರಡು ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಿದ್ದೇವೆ ಎಂದು ಅನಂತ್ ಕುಮಾರ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಪರಿಣಾಮಕಾರಿ ಬದಲಾವಣೆ

ಪರಿಣಾಮಕಾರಿ ಬದಲಾವಣೆ

ಭಾರತದಲ್ಲಿ 3ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆಯಾದರೂ ಸಾಲುತ್ತಿರಲಿಲ್ಲ. ಇದನ್ನು ಪೇಯಿಂಟ್ ತಯಾರಿಯಿಂದ ಹಿಡಿದು ಹಾಲಿಗೂ ಮಿಕ್ಸ್ ಮಾಡುತ್ತಿದ್ದರು. ಇದನ್ನು ಹೋಗಲಾಡಿಸಲು ನೀಮ್ ಕೋಟಿಂಗ್ ಆರಂಭಿಸಿದೆವು. ಈಗ ಎಲ್ಲಾ ಯೂರಿಯಾ ಉತ್ಪಾದನೆ ರೈತರನ್ನೇ ತಲುಪುತ್ತಿದೆ. ಈ ರೀತಿಯ ಪರಿಣಾಮಕಾರಿ ಬದಲಾವಣೆಗಳನ್ನು ನಮ್ಮ ಸರಕಾರ ಜಾರಿಗೆ ತಂದಿದೆ ಎಂದು ಅವರು ವಿವರಿಸಿದರು.

70 ವರ್ಷ ಮಾಡದ ಸಾಧನೆ

70 ವರ್ಷ ಮಾಡದ ಸಾಧನೆ

ಕಳೆದ 70 ವರ್ಷಗಳಲ್ಲಿ ಮಾಡದ ಸಾಧನೆ ನಾವು ಮಾಡಿದ್ದೇವೆ ಎಂದು ಅನಂತ್ ಕುಮಾರ್ ಹೇಳಿದರು. ನಾವು ಬರುವಾಗ 2014ರಲ್ಲಿ ಕೇವಲ 6 ಕೋಟಿ ಅಡುಗೆ ಅನಿಲ ಸಂಪರ್ಕಗಳಿದ್ದವು. ಉಜ್ವಲ ಯೋಜನೆಯಡಿ ಕಳೆದ 3.5 ವರ್ಷಗಳಲ್ಲಿ 5 ಕೋಟಿ ಹೊಸ ಸಂಪರ್ಕ ನೀಡಿದ್ದೇವೆ. ಇನ್ನೂ 3 ಕೋಟಿ ಹೊಸ ಸಂಪರ್ಕ ನೀಡಲಿದ್ದೇವೆ.

ಇದೇ ರೀತಿ 2014ರಲ್ಲಿ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಉಜಾಲ ಯೋಜನೆ ಜಾರಿಗೆ ತಂದ ಮೇಲೆ ಈಗ ಕೇವಲ 2,500 ಹಳ್ಳಿಗಳಿಗೆ ಮಾತ್ರ ವಿದ್ಯುತ್ ಇಲ್ಲ. ಇದೇ ಮಾದರಿಯಲ್ಲಿ ಮುದ್ರಾ ಯೋಜನೆಯಲ್ಲಿ 10 ಕೋಟಿ ಯುವಜನರಿಗೆ ಸ್ವ ಉದ್ಯೋಗಕ್ಕಾಗಿ 3 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ. ಇನ್ನೂ 1 ಲಕ್ಷ ಕೋಟಿ ರೂ. ಈ ಬಾರಿ ನೀಡಲಿದ್ದೇವೆ. ಇದು ಜಗತ್ತಿನ ಅತೀ ದೊಡ್ಡ ಉದ್ಯೋಗ ಸೃಷ್ಟಿ ಯೋಜನೆಯಾಗಿದೆ ಎಂದು ಅವರು ತಿಳಿಸಿದರು. ಇದೇ ಮಾದರಿಯಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನೂ ತುರ್ತಾಗಿ ಜಾರಿಗೆ ತರಲಾಗುತ್ತದೆ ಎಂದು ಅನಂತ್ ಕುಮಾರ್ ಭರವಸೆ ನೀಡಿದರು.

3150 ಜನೌಷಧಿ ಕೇಂದ್ರ

3150 ಜನೌಷಧಿ ಕೇಂದ್ರ

2008ರಲ್ಲಿ ದೇಶದಲ್ಲಿ ಜನೌಷಧಿ ಯೋಜನೆಯನ್ನು ಕೇಂದ್ರಗಳನ್ನು ತೆರಯಲು ಆರಂಭಿಸಲಾಯಿತು. ಆದರೆ 2014ರ ಹೊತ್ತಿಗೆ ದೇಶದಲ್ಲಿ ತೆರೆದ ಒಟ್ಟು ಜನೌಷಧಿ ಕೇಂದ್ರಗಳ ಸಂಖ್ಯೆ ಕೇವಲ 99. ಇದೀಗ 4 ವರ್ಷಗಳ ನಂತರ ಒಟ್ಟು 3150 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದ್ದು 555 ಜಿಲ್ಲೆಗಳಲ್ಲಿ ಈ ಕೇಂದ್ರಗಳಿವೆ ಎಂದು ವಿವರಿಸಿದರು.

ಫಾರ್ಮಾ ಉತ್ಪಾದನೆಯಲ್ಲಿ ನಂ. 1

ಫಾರ್ಮಾ ಉತ್ಪಾದನೆಯಲ್ಲಿ ನಂ. 1

ಸದ್ಯ ದೇಶ ಫಾರ್ಮಾ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತ ಫಾರ್ಮಾ ಉತ್ಪಾದನೆಯಲ್ಲಿ ಜಗತ್ತಿನ ನಂಬರ್ ವನ್ ರಾಷ್ಟ್ರವಾಗಲಿದೆ ಎಂದು ಅನಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ನೀತಿ

ಪ್ರತ್ಯೇಕ ನೀತಿ

ಫಾರ್ಮಾ ಮತ್ತು ಮೆಡಿಕಲ್ ಡಿವೈಸ್ ಗೆ ಸಂಬಂಧಪಟ್ಟ ವಿಭಾಗಗಳು ಬೇರೆ ಬೇರೆ ಇಲಾಖೆಗಳಲ್ಲಿ ಹರಿದು ಹಂಚಿಹೋಗಿದ್ದು ಬದಲಾವಣೆ ನಿಧಾನಗತಿಯಲ್ಲಾಗುತ್ತಿದೆ. ಔಷಧ ಕ್ಷೇತ್ರದ ಪರಿಣಾಮಕಾರಿ ಬದಲಾವಣೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಅಗತ್ಯವಿದೆ. ಇದಕ್ಕಾಗಿ ಪ್ರತ್ಯೇಕ ಫಾರ್ಮಾ ಮತ್ತು ಮೆಡಿಕಲ್ ಪಾಲಿಸಿ ಬೇಕಾಗಿದೆ ಎಂದು ಅನಂತ್ ಕುಮಾರ್ ಪ್ರತಿಪಾದಿಸಿದರು.

ಔಷಧ ಉದ್ಯಮದಲ್ಲಿ ತೀವ್ರ ಅಭಿವೃದ್ಧಿ

ಔಷಧ ಉದ್ಯಮದಲ್ಲಿ ತೀವ್ರ ಅಭಿವೃದ್ಧಿ

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಫಾರ್ಮಾಸೆಟಿಕಲ್ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯದರ್ಜೆ ಸಚಿವ ಮನ್ಸುಖ್ ಎಲ್ ಮಾಂಡವಿಯಾ "ಭಾರತದ ಔಷಧ ಉದ್ಯಮ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. 2017ರ ಅಂತ್ಯಕ್ಕೆ ಭಾರತದ ಔಷಧ ಉದ್ಯಮ ಮಾರುಕಟ್ಟೆ 2 ಲಕ್ಷ ಕೋಟಿಯಾಗಿದ್ದು 2020ರ ವೇಳೆಗೆ 3.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಜಾಗತಿಕ ಔಷಧ ಮಾರುಕಟ್ಟೆ ಶೇಕಡಾ 5ರ ದರದಲ್ಲಿ ಬೆಳವಣಿಗೆ ಕಾಣುತ್ತಿದ್ದರೆ ದೇಶದ ಉದ್ಯಮವು ಶೇಕಡಾ 15ರ ದರದಲ್ಲಿ ಬೆಳವಣಿಗೆ ಹೊಂದುತ್ತಿದೆ," ಎಂದು ಮಾಹಿತಿ ನೀಡಿದರು.

2025ರ ವೇಳೆ ಕೇವಲ ಮೆಡಿಕಲ್ ಡಿವೈಸ್ ಉದ್ಯಮ ಭಾರತದಲ್ಲಿ 2.9 ಲಕ್ಷ ಕೋಟಿ ರೂ ತಲುಪಬಹುದು ಎಂದು ಅನಂತ್ ಕುಮಾರ್ ಅಂದಾಜಿಸಿದ್ದಾರೆ.

ಆಂಧ್ರ ಪ್ರದೇಶ ಮೆಡಿಟೆಕ್ ಝೋನ್

ಆಂಧ್ರ ಪ್ರದೇಶ ಮೆಡಿಟೆಕ್ ಝೋನ್

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಂಧ್ರ ಪ್ರದೇಶದ ಅಧಿಕಾರಿಯೊಬ್ಬರು, ಜಗತ್ತಿನಲ್ಲೇ ಮೊದಲ ಮೆಡಿ ಟೆಕ ಝೋನ್ ನ್ನು ಆಂಧ್ರ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಇದು ಪೂರ್ತಿಯಾಗಿ ಮೆಡಿಕಲ್ ಡಿವೈಸ್ ಗೆ ಸಂಬಂಧಪಟ್ಟಿದ್ದು ಇದರಿಂದ ಮೆಡಿಕಲ್ ಡಿವೈಸ್ ಗಳ ಉತ್ಪಾದನಾ ವೆಚ್ಚ ಶೇ. 30 ರಿಂದ 50ಕ್ಕೆ ಇಳಿಕೆಯಾಗಬಹುದು ಎಂದು ಅಂದಾಜಿಸಿದ್ದಾರೆ.

ಪ್ರತ್ಯೇಕ ಸಚಿವಾಲಯಕ್ಕೆ ಉದ್ಯಮಿಗಳ ಬೇಡಿಕೆ

ಪ್ರತ್ಯೇಕ ಸಚಿವಾಲಯಕ್ಕೆ ಉದ್ಯಮಿಗಳ ಬೇಡಿಕೆ

ಉದ್ಘಾಟನಾ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿ ನಡೆಸಿದ ಫಿಕ್ಕಿ ಸಂಸ್ಥೆಯ ಮೆಡಿಕಲ್ ಫೋರಮ್ ಅಧ್ಯಕ್ಷ ಪ್ರಬೀರ್ ದಾಸ್ ಮತ್ತು ಇತರ ಹಲವು ಸಂಸ್ಥೆಗಳ ಮುಖ್ಯಸ್ಥರು ಪ್ರತ್ಯೇಕ ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ. ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮತ್ತು ಮೆಡಿಕಲ್ ಡಿವೈಸ್ ಆಕ್ಟ್ ಜಾರಿಗೆ ಬಂದರೆ ಉದ್ಯಮಕ್ಕೆ ಅನುಕೂಲವಾಗುತ್ತದೆ ಎಂದಿದ್ದಾರೆ.

ಇನ್ನು ಭಾರತದ ಉತ್ಪನ್ನಗಳ ಐಎಸ್ಒ, ಐಇಸಿಯಂತ ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಮತ್ತು ಮೆಡಿಕಲ್ ಡಿವೈಸ್ ಎನ್ನುವುದು ಜಾಗತಿಕ ಉತ್ಪನ್ನ. ಒಂದು ದೇಶಕ್ಕೆ ಸೀಮಿತವಾಗಲು ಸಾಧ್ಯವಿಲ್ಲ. ಮೇಕ್ ಇನ್ ಇಂಡಿಯಾ ಔಷಧ ಉದ್ಯಮಕ್ಕೆ ವರದಾನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮಗ್ರ ಸುಧಾರಣೆ ಅಗತ್ಯ

ಸಮಗ್ರ ಸುಧಾರಣೆ ಅಗತ್ಯ

ಪಸ್ತುತ ಸರಕಾರ ವೈದ್ಯಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ತಾಳಿರುವುದು ಉತ್ತಮ ವಿಚಾರ ಎಂದು ಉದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು ವೈದ್ಯಕೀಯ ಇನ್ಸೂರೆನ್ಸ್ ಪಾಲಿಸಿಗಳಲ್ಲಿ ಸುಧಾರಣೆಯಾಗಬೇಕು. ಜತೆಗೆ ವೈದ್ಯಕೀಯ ಯೋಜನೆಗಳ ವಿನ್ಯಾಸ ಬದಲಾವಣೆಯಾದಾಗ ಮಾತ್ರ ಆರೋಗ್ಯ ಕ್ಷೇತ್ರದ ಸಮಗ್ರ ಸುಧಾರಣೆ ಸಾಧ್ಯ ಎಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿದೇಶಗಳಿಂದ 50 ಪ್ರತಿನಿಧಿಗಳು, 10,000 ಕ್ಕೂ ಹೆಚ್ಚು ಔಷಧ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿನಿಧಿಗಳು ಭಾಗವಹಿಸಿದ್ದು300 ಕ್ಕೂ ಹೆಚ್ಚು ಕಂಪನಿಗಳು, 50ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.

English summary
India Pharma 2018 India Medical Device 2018 : Minister for Chemical and Fertilizer, Pharmaceutical and Parliamentary Affairs Anant Kumar said that Prime Minister Narendra Modi has been asked to open a separate pharmaceutical and medical device account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X