31,000 ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿ ಶಾಕ್: 4,068 ಆಸ್ತಿ ಮಾಲೀಕರಿಂದ ವಿರೋಧ!
ಬೆಂಗಳೂರಿನಲ್ಲಿ ಆಸ್ತಿ ಮಾಲೀಕರಿಗೆ ಶಾಕ್ ಕೊಡುವುದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಂದುವರಿಸಿದೆ. ಬೆಂಗಳೂರಿನಲ್ಲಿ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ 31,000 ಸಾವಿರಕ್ಕೂ ಹೆಚ್ಚು ಆಸ್ತಿದಾರರಿಗೆ ಶಾಕ್ ನೀಡಲಾಗಿದೆ.
ಬೆಂಗಳೂರಿನಲ್ಲಿ ಕಡಿಮೆ ಆಸ್ತಿ ತೆರಿಗೆ ಘೋಷಿಸಿಕೊಂಡಿರುವವರಿಗೆ ಶಾಕ್ ನೀಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರು ತಪ್ಪಾಗಿ ಆಸ್ತಿ ಘೋಷಣೆ ಮಾಡಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಆಸ್ತಿ ತೆರಿಗೆಯನ್ನು ಕಡಿಮೆ ಘೋಷಿಸಿದ್ದಾರೆ ಎಂಬ ಆರೋಪದ ಮೇಲೆ ಇದೀಗ ಬಿಬಿಎಂಪಿಯು ಬೆಂಗಳೂರಿನ 31,000 ಸಾವಿರ ಜನರಿಗೆ ನೋಟಿಸ್ ಜಾರಿ ಮಾಡಿತ್ತು. ಇದೀಗ ಈ ರೀತಿ ನೋಟಿಸ್ ಬಂದ ಬೆನ್ನಲ್ಲೇ ಬೆಂಗಳೂರಿನ ಸಾವಿರಾರು ಆಸ್ತಿದಾರರು ಬಿಬಿಎಂಪಿಯ ವಿರುದ್ಧ ತಿರುಗಿ ಬಿದಿದ್ದಾರೆ. ಬಿಬಿಎಂಪಿಯು ಹೊರಡಿಸಿದ ಶೋಕಾಸ್ ನೋಟಿಸ್‌ಗಳಲ್ಲಿ ಅಂದಾಜು 4,068 ಆಸ್ತಿ ಮಾಲೀಕರು ಪ್ರಶ್ನೆ ಮಾಡಿದ್ದಾರೆ.

ಇದೇ ತಿಂಗಳು ಜುಲೈ ಅಂತ್ಯ ಹಾಗೂ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ತಪ್ಪಾಗಿ ಆಸ್ತಿ ಘೋಷಿಸಿಕೊಂಡ 31,000 ಸಾವಿರ ಆಸ್ತಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅಲ್ಲದೇ ಕೇವಲ 13% ರಷ್ಟಿದ್ದರೂ ಬಿಬಿಎಂಪಿ ಇತ್ತೀಚೆಗೆ ತನ್ನ ತೆರಿಗೆ ವೆಬ್‌ಸೈಟ್‌ನಲ್ಲಿನ ದೋಷಗಳನ್ನು ಸರಿಪಡಿಸಿದ್ದರಿಂದ ಈ ಸಂಖ್ಯೆ ಹೆಚ್ಚಳವಾಗಿದೆ. ಇದರಲ್ಲಿ ಮೊದಲು ಲಿಖಿತ ಆಕ್ಷೇಪಣೆಗಳಿಗೆ ಯಾವುದೇ ಆಯ್ಕೆಯನ್ನು ನೀಡಲಿಲ್ಲ ಎಂದು ಹೇಳಲಾಗಿದೆ.
ನಾಗರಿಕ ಸಂಸ್ಥೆಯು ಮಾರಾಟ ಪತ್ರಗಳಲ್ಲಿನ ಆಸ್ತಿ ಗಾತ್ರ ಮತ್ತು ವಾರ್ಷಿಕ ತೆರಿಗೆ ರಶೀದಿಗಳಲ್ಲಿ ಘೋಷಿಸಲಾದ ಆಸ್ತಿ ಗಾತ್ರಗಳ ನಡುವೆ ಹೊಂದಾಣಿಕೆಯಾಗದಿರುವುದನ್ನು ಕಂಡುಕೊಂಡ ನಂತರ ಹೆಚ್ಚಿನ ನೋಟಿಸ್‌ಗಳು ಫ್ಲಾಟ್ ಮಾಲೀಕರನ್ನು ಗುರಿಯಾಗಿಸಿಕೊಂಡಿವೆ. ಇ-ಖಾತಾ ನೋಂದಣಿಗಾಗಿ ಸಲ್ಲಿಸಿದ ದಾಖಲೆಗಳನ್ನು ಬಳಸಿಕೊಂಡು ಡೇಟಾವನ್ನು ಪರಿಶೀಲಿಸಲಾಗಿದೆ.
ಇ - ಖಾತಾದಿಂದ ಬಯಲಾದ ಸತ್ಯ: ಇನ್ನು ಬೆಂಗಳೂರಿನಲ್ಲಿ ತಪ್ಪಾಗಿ ಆಸ್ತಿ ಘೋಷಿಸಿಕೊಂಡಿರುವವರು ಇ ಖಾತಾ ಪಡೆದುಕೊಂಡ ಮೇಲೆ ಇ ಖಾತಾದ ಮೂಲಕ ಈ ಸತ್ಯಾಂಶ ಬಯಲಿಗೆ ಬಂದಿತ್ತು. ಇದಾದ ಮೇಲೆ ಆಸ್ತಿದಾರರಿಗೆ ನೋಟಿಸ್ ಕೊಡುವುದಕ್ಕೆ ಬಿಬಿಎಂಪಿ ಮುಂದಾಗಿತ್ತು. ಬಿಬಿಎಂಪಿಯ ದತ್ತಾಂಶದ ಪ್ರಕಾರ ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಪೂರ್ವ ವಲಯದಿಂದ ಹೆಚ್ಚು ಆಸ್ತಿದಾರರು ಈ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ದಕ್ಷಿಣ, ಯಲಹಂಕ ಹಾಗೂ ರಾಜರಾಜೇಶ್ವರಿ ನಗರ ವಲಯಗಳ ಆಸ್ತಿದಾರರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿದೆ.
ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಬಿಬಿಎಂಪಿಯ ಹೊಸದಾಗಿ ಅಭಿವೃದ್ಧಿಪಡಿಸಲಾದ ಇ-ನ್ಯಾಯ ವೆಬ್ ಪೋರ್ಟಲ್‌ನಲ್ಲಿ ಎಲ್ಲಾ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆಕ್ಷೇಪಣೆಗಳು ಕೇಳಿ ಬರುತ್ತಿವೆ.
ಈ ವಿಚಾರವಾಗಿ ಆಸ್ತಿದಾರರಿಂದ ಬಂದಿರುವ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಲಾಗುವುದು ನ್ಯಾಯಯುತವಾದ ಆಕ್ಷೇಪಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications