Bengaluru Property: ಬೆಂಗಳೂರಿನ 2 ಲಕ್ಷ ಆಸ್ತಿದಾರರಿಗೆ ಬಿಬಿಎಂಪಿ ಲಾಸ್ಟ್ ವಾರ್ನಿಂಗ್!
Bengaluru Property: ಬೆಂಗಳೂರಿನ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒಂದಿಲ್ಲೊಂದು ಶಾಕ್ ಕೊಡುವುದನ್ನು ಮುಂದುವರಿಸಿದೆ. ಹೌದು ಬೆಂಗಳೂರಿನ ಆಸ್ತಿದಾರರಿಂದ ಹೇಗಾದರೂ ಮಾಡಿ ಆಸ್ತಿ ತೆರಿಗೆ ಸಂಗ್ರಹ ಮಾಡಿಯೇ ಸಿದ್ಧ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಸಿದ್ಧರಿದ್ದು. ಬೆಂಗಳೂರಿನ 2 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಅಂತಿಮ ವಾರ್ನಿಂಗ್ ಕೊಟ್ಟಿದ್ದಾರೆ.
ಈ ವಾರ್ನಿಂಗ್ ಅನ್ನು ಬೆಂಗಳೂರಿನ ಆಸ್ತಿದಾರರು ನಿರ್ಲಕ್ಷ್ಯ ಮಾಡಿದರೆ ಆಸ್ತಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಸಹ ಬಿಬಿಎಂಪಿ ಕೊಟ್ಟಿದೆ. ಈ ಮೂಲಕ ಆಸ್ತಿ ತೆರಿಗೆ ವಂಚಕರಿಗೆ ಪಾಠ ಕಲಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿಯು ಕೊಟ್ಟಿರುವ ಸೂಚನೆ ಏನು, ಈ ಸೂಚನೆ ಕಡೆಗಣಿಸಿದರೆ ಏನಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಬಿಬಿಎಂಪಿಯು ಕಳೆದ ಆರು ತಿಂಗಳಿನಿಂದಲೂ ಒಂದಿಲ್ಲೊಂದು ಶಾಕ್ ಕೊಡುತ್ತಲ್ಲೇ ಇದೆ. ಅಲ್ಲದೆ ಇದೀಗ ಬೆಂಗಳೂರಿನಲ್ಲಿ ಎಲ್ಲಾ ಆಸ್ತಿಗಳಿಗೂ ಕಡ್ಡಾಯವಾಗಿ ಇ - ಖಾತಾ ಮಾಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಈಗಾಗಲೇ ಇ - ಖಾತಾ ಮೇಳವನ್ನೂ ಸಹ ಬಿಬಿಎಂಪಿಯು ಆಯೋಜಿಸುತ್ತಿದೆ. ಆದರೆ, ಬೆಂಗಳೂರಿನಲ್ಲಿ ಬರೋಬ್ಬರಿ 2 ಲಕ್ಷಕ್ಕಿಂತ ಹೆಚ್ಚು ಆಸ್ತಿ ಮಾಲೀಕರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಆಸ್ತಿದಾರರಿಗೆ ದೊಡ್ಡ ಶಾಕ್ ಕೊಡಲಾಗಿದೆ. ಬಿಬಿಎಂಪಿ ಬೆಂಗಳೂರಿನ ಆಸ್ತಿದಾರರಿಗೆ ಕೊಟ್ಟಿರುವ ಶಾಕ್ ಏನು ಎನ್ನುವ ವಿವರ ಮುಂದಿದೆ.
ಬೆಂಗಳೂರಿನಲ್ಲಿ ಬರೋಬ್ಬರಿ 24 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಈ ಎಲ್ಲಾ ಆಸ್ತಿಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ. ಬಿಬಿಎಂಪಿಗೆ ಬರುವ ಪ್ರಮುಖ ಹಾಗೂ ಮುಖ್ಯ ಆದಾಯಗಳಲ್ಲಿ ಆಸ್ತಿ ತೆರಿಗೆಯೇ ಮೊದಲನೆಯದಾಗಿದೆ.

ಬಿಬಿಎಂಪಿಗೆ ಕೇವಲ ಆಸ್ತಿ ತೆರಿಗೆ ಸಂಗ್ರಹದಿಂದಲೇ ಕೋಟ್ಯಾಂತರ ರೂಪಾಯಿ ಸಂಗ್ರಹವಾಗುತ್ತದೆ. ಆದರೆ ಬೆಂಗಳೂರಿನಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡಿಲ್ಲ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದ್ದು. ಈ ರೀತಿ ಲಕ್ಷ ಲಕ್ಷ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರಿಗೆ ಬಿಬಿಎಂಪಿ ದೊಡ್ಡ ಶಾಕ್ ಕೊಟ್ಟಿದೆ. ಅದೇನು ಎನ್ನುವ ವಿವರ ನೋಡೋಣ.
ಬೆಂಗಳೂರಿನ 2 ಲಕ್ಷ ಆಸ್ತಿಗಳಿಗೆ ಎಚ್ಚರಿಕೆ: ಇನ್ನು ಬಿಬಿಎಂಪಿಯು ಬೆಂಗಳೂರಿನ 2 ಲಕ್ಷಕಿಂತಲೂ ಹೆಚ್ಚು ಆಸ್ತಿ ಮಾಲೀಕರಿಗೆ ಕೊನೆಯ ಎಚ್ಚರಿಕೆಯನ್ನು ಕೊಟ್ಟಿದೆ. ಈ ಆಸ್ತಿಗಳ ಮಾಲೀಕರು ಕೂಡಲೇ ತಮ್ಮ ಆಸ್ತಿಗೆ ತೆರಿಗೆ ಪಾವತಿ ಮಾಡಬೇಕು ಎಂದು ಹೇಳಿದೆ. ಇಲ್ಲದೆ ಇದ್ದರೆ ಮುಂದಿನ ದಿನಗಳಲ್ಲಿ ಈ ಆಸ್ತಿಗಳ ಹರಾಜಿಗೆ ಮುಂದಾಗಬೇಕಾಗುತ್ತದೆ ಎಂದು ಬಿಬಿಎಂಪಿ ಬೆಂಗಳೂರಿನ ಆಸ್ತಿದಾರರಿಗೆ ಶಾಕ್ ಕೊಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಹಾಗೂ ಬಿಬಿಎಂಪಿಗೆ ಅಂದಾಜು ಬರೋಬ್ಬರಿ 390 ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿರುವವರಿಗೆ ಲಾಸ್ಟ್ ವಾರ್ನಿಂಗ್ ಕೊಟ್ಟಿದೆ. ಈ ರೀತಿಯ ಆಸ್ತಿ ಹರಾಜಿನಂತಹ ಬಲವಂತದ ವಸೂಲಾತಿ ಕ್ರಮವನ್ನು ನೀವು ತಪ್ಪಿಸಬೇಕು ಅಂತ ಅಂದುಕೊಂಡಿದ್ದರೆ, ಎಲ್ಲಾ ಆಸ್ತಿ ತೆರಿಗೆದಾರರು ತಕ್ಷಣವೇ ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿ ಮಾಡಿ ಅಂತ ಬಿಬಿಎಂಪಿಯು ಎಚ್ಚರಿಕೆ ಕೊಟ್ಟಿದೆ.
ವಲಯವಾರು ಆಸ್ತಿ ಹರಾಜುಗಳ ವಿವರ: ಇನ್ನು ಬೆಂಗಳೂರಿನಲ್ಲಿ ಈಗಾಗಲೇ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಆಸ್ತಿ ಹರಾಜಿಗೆ ಬಿಬಿಎಂಪಿ ಮುಂದಾಗಿದೆ. ವಲಯವಾರು ಪಟ್ಟಿ ಸಹ ಮಾಡಿಕೊಂಡಿದೆ. 600ಕ್ಕೂ ಹೆಚ್ಚು ಆಸ್ತಿಗಳನ್ನು ಈಗಾಗಲೇ ಹರಾಜು ಮಾಡುವುದಾಗಿ ಬಿಬಿಎಂಪಿ ಹೇಳಿದ್ದು. ಅದಕ್ಕೆ ಡೇಟ್ ಸಹ ಫಿಕ್ಸ್ ಮಾಡಿದೆ.
ವಲಯ - ಹರಾಜು ಆಸ್ತಿಗಳ ಸಂಖ್ಯೆ
1. ಪೂರ್ವ ವಲಯ - 118
2. ಪಶ್ಚಿಮ ವಲಯ - 120
3. ದಕ್ಷಿಣ ವಲಯ - 109
4. ಮಹದೇವಪುರ ವಲಯ - 60
5. ಬೊಮ್ಮನಹಳ್ಳಿ ವಲಯ - 70
6. ಯಲಹಂಕ ವಲಯ - 40
7. ಆರ್.ಆರ್ ನಗರ ವಲಯ - 50
8. ದಾಸರಹಳ್ಳಿ ವಲಯ - 41












Click it and Unblock the Notifications