Ejipura Flyover: ಈಜಿಪುರ ಮೇಲ್ಸೇತುವೆ ನಿರ್ಮಾಣ ವಿಳಂಬಕ್ಕೆ ಮುಕ್ತಿ! ಕೊನೆಗೂ ಗುಡ್ ನ್ಯೂಸ್..
ಬೆಂಗಳೂರು, ಮಾರ್ಚ್ 05: ಬೆಂಗಳೂರಿನ ಪಾಲಿಗೆ ವರ್ಷಗಳಿಂದಲೂ ತೆವಳುತ್ತಾ ಸಾಗಿದ್ದ ಕೋರಮಂಗಲ ಭಾಗದಲ್ಲಿರುವ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸಾಕಷ್ಟು ಗಡುವು ಪಡೆದಿತ್ತು. ಆದರೆ ಮೇಲ್ಸೇತುವೆ ನಿರ್ಮಾಣವಾಗಿಲ್ಲ. ವಿಳಂಬಕ್ಕೆ ಕಾರಣವಾಗಿದ್ದ ಸಮಸ್ಯೆಗಳು, ತೊಡಕುಗಳು ನಿವಾರಣೆ ಆಗಿವೆ. ಶೀಘ್ರವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಫ್ಲೈಓವರ್ ನಿರ್ಮಿಸಿ ಸಂಚಾರಕ್ಕೆ ನೀಡಲು ಸಿದ್ಧವಾಗಿದೆ.
ಬಹುಕಾಳದಿಂದ ಕುಂಟುತ್ತ ಸಾಗಿದ್ದ 2.5 ಕೀ.ಮೀ. ಉದ್ದದ ಈಜಿಪುರ ಫ್ಲೈಓವರ್ ಯೋಜನೆಗೆ ವೇಗ ಸಿಕ್ಕಿದೆ. ಕೋರಮಂಗಲದ ಕೇಂದ್ರೀಯ ಸದನದಿಂದ ಈಜಿಪುರಕ್ಕೆ ಸಂಪರ್ಕಿಸುವ ಇನ್ನರ್ ರಿಂಗ್ ರಸ್ತೆಯಲ್ಲಿರುವ ನಿರ್ಮಾನವಾಗುತ್ತಿದೆ. ವಿಳಂಬದಿಂದಾಗಿ ಹೈರಾಣಾಗಿದ್ದ ಈ ಮಾರ್ಗದ ಜನರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ..

ಮೇಲ್ಸೇತುವೆ ಯೋಜನೆಗೆ ಅಗತ್ಯವಾಗಿದ್ದ ಭೂಮಿ ನೀಡಲು ಆಸ್ತಿ ಮಾಲೀಕರು ಒಪ್ಪಿಗೆ ನೀಡಿದ್ದಾರೆ. ಎರಡು ಕೇಂದ್ರ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಆಸ್ಪತ್ರೆ ಭೂಮಿ ನೀಡಲು ಒಪ್ಪಿವೆ. ಈ ಕುರಿತು ಬಿಬಿಎಂಪಿ ತಾತ್ವಿಕ ಒಪ್ಪಿಗೆ ನೀಡಿವೆ. ಇದರಿಂದ ಆಮೆಗತಿಯಲ್ಲಿ ಸಾಗಿದ್ದ ಈಜಿಪುರ ಮೇಲ್ಸೆತುವೆ ನಿರ್ಮಾಣ ಕೆಲಸಕ್ಕೆ ವೇಗ ಸಿಕ್ಕಿದೆ. ಇದೇ ವರ್ಷವೇ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದೆ.
ಕೋರಮಂಗಲದ ಕೇಂದ್ರೀಯ ಸದನದಿಂದ ಈಜಿಪುರ ಮಾರ್ಗವಾಗಿ ನಿತ್ಯ ಲಕ್ಷಾಂತರ ಮಂದಿ ಓಡಾಡುತ್ತಾರೆ. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಲು ಬಿಎಸ್‌ಸಿಪಿಎಲ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಜವಾಬ್ದಾರಿ ವಹಿಸಿಕೊಂಡಿದೆ. ವರ್ಷಗಳ ವಿಳಂಬ ಬಳಿಕ ಇದೇ 2025ರ ಫೆಬ್ರವರಿಗೆ ಪೂರ್ಣಗೊಳ್ಳಬೇಕಿದ್ದ ಯೋಜನೆ ಡಿಸೆಂಬರ್ 2025ರ ಹೊಸ ಗುಡುವು ಪಡೆದಿದೆ. ಸ್ಥಗಿತಗೊಂಡಿರುವ ಕಾಮಗಾರಿ ಅರಂಭಕ್ಕೆ ಎಲ್ಲ ಸಿದ್ದತೆ ನಡೆದಿವೆ.

ಈಜಿಪುರ ಹೊಸೂರು ರಸ್ತೆಗೆ ಸಂಪರ್ಕಿಸುವ ಮಧ್ಯೆ ಇರುವ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಮತ್ತು ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗಳು ಭೂಮಿ ನೀಡಲು ಒಪ್ಪಿಗೆ. ತಿಂಗಳ ಹಿಂದಷ್ಟೇ ನಡೆದ ಸಭೆಯಲ್ಲಿ ಅಧಿಕೃತ ಮಾಹಿತಿ ನೀಡಿವೆ. ಈ ಸಂಸ್ಥೆಗಳಿಂದ ಒಟ್ಟು 1.5 ಎಕರೆ ಭೂಮಿ ಯೋಜನೆಗೆ ದೊರೆಯಬೇಕಿದೆ. ಇವರೊಂದಿಗೆ ಸಣ್ಣಪುಟ್ಟ 30 ಆಸ್ತಿಗಳ ಮಾಲೀಕರು ಭೂಸ್ವಾಧೀನಕ್ಕೆ ನಮ್ಮ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಕಾಮಗಾರಿಗೆ ವೇಗ ನೀಡಲಿದೆ.
ಭೂಮಿ ಸಮಸ್ಯೆಗೆ ಅಂತಿಮವಾಗುವ ವಿಶ್ವಾಸ
ಶೀಘ್ರವೇ ಬಿಬಿಎಂಪಿಯು ಈ ಉದ್ದೇಶಿತ ಭೂಮಿ ಸ್ವಾಧೀನಕ್ಕಾಗಿ ಸರ್ಕಾರಿ ಸಂಸ್ಥೆಗಳಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡಲಿದೆ. ಈ ಮಧ್ಯೆ ಸೇಂಟ್ ಜಾನ್ಸ್ ಆಸ್ಪತ್ರೆ ಭೂಮಿ ಒಪ್ಪಂದಕ್ಕೇನು ಒಪ್ಪಿದೆ ಆದರೆ ಆಸ್ಪತ್ರೆ ಆಡಳಿತ ಮಂಡಳಿಯು ಟಿಡಿಆರ್ ಗೆ ಆಗ್ರಹಿಸಿದೆ. ಅಂದರೆ 100 ಅಡಿ ರಸ್ತೆಗೆ ಜಾಗ ನೀಡಲು ಒಪ್ಪಿಗೆ ಇದಕ್ಕೆ ಬದಲಿ ಪರಿಹಾರವನ್ನು ಅಪೇಕ್ಷಿಸುತ್ತಿದೆ. ಆದರೆ ಬಿಬಿಎಂಪಿ ಟಿಡಿಆರ್ ಇಲ್ಲದೇ ಭೂಮಿ ಸ್ವಾಧೀನ ವಿಶ್ವಾಸದಲ್ಲಿದೆ. ಸಾರ್ವಜನಿಕ ಒಳಿತಿಗಾಗಿ ಆಸ್ಪತ್ರೆ ಅಂತಿಮ ಒಪ್ಪಿಗೆ ಸೂಚಿಸುವ ನಿರೀಕ್ಷೆಗಳು ಇವೆ ಎನ್ನಲಾಗಿದೆ.












Click it and Unblock the Notifications