ಸಿದ್ದು ಸರಕಾರ ಈಡೇರಿಸದ ಭರವಸೆಗಳು, ಬಿಜೆಪಿಯಿಂದ ಪಟ್ಟಿ
Recommended Video

ಬೆಂಗಳೂರು, ಏಪ್ರಿಲ್ 27 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದ ಕೆಲವೇ ಗಂಟೆಯೊಳಗೆ ಸಿದ್ದರಾಮಯ್ಯ ಸರಕಾರ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಬಿಜೆಪಿಯಿಂದ ಸಾಲು ಸಾಲು ಟ್ವೀಟ್ ಮಾಡಲಾಗಿದೆ.
ಮಂಗಳೂರಿನಲ್ಲಿ ಕಾಂಗ್ರೆಸ್ ನ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ, ಇದು ಕನ್ನಡಿಗರ ಮನ್ ಕೀ ಬಾತ್ ಎಂದರು. ಕಳೆದ ಬಾರಿ ನೀಡಿದ್ದ ಭರವಸೆಗಳನ್ನು ಹೇಗೆ ಕಾಂಗ್ರೆಸ್ ಪೂರೈಸಿತೋ ಅದೇ ರೀತಿ ಈ ಸಲವೂ ಕೊಟ್ಟ ಮಾತನ್ನು ನೆರವೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಕಳೆದ ಬಾರಿ ನೀಡಿದ್ದ ಶೇ 95ರಷ್ಟು ಭರವಸೆಗಳನ್ನು ಕಾಂಗ್ರೆಸ್ ಪೂರೈಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಕಾಂಗ್ರೆಸ್ ನೀಡಿದ್ದ ಭರವಸೆಗಳ ಪೈಕಿ ಯಾವುದನ್ನು ಪೂರೈಸಿಲ್ಲ ಎಂದು ಕರ್ನಾಟಕ ಬಿಜೆಪಿಯು ಟ್ವಿಟ್ಟರ್ ಮೂಲಕ ಪಟ್ಟಿ ಮಾಡಿದ್ದು, ಅದರ ವಿವರ ಇಂತಿದೆ.

* ಪ್ರತಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಭರವಸೆ ಈಡೇರಿಸಿಲ್ಲ
* ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಭರವದೆ ಪೂರೈಸಿಲ್ಲ
* ಪ್ರತಿ ಪಂಚಾಯತ್ ನಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಆರಂಭಿಸುವ ಭರವಸೆ ಈಡೇರಿಲ್ಲ
* ಪ್ರತಿ ರೈತರಿಗೆ ಎಪ್ಪತ್ತೈದರಷ್ಟು ಸಬ್ಸಿಡಿಯೊಂದಿಗೆ ಸೋಲಾರ್ ಪಂಪ್ ನೀಡುವ ಮಾತು ಏನಾಯಿತು?
* ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಮೂಲಕ ಎಲ್ಲ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಏನಾಯಿತು?
* ಎಲ್ಲ ಮಾರುಕಟ್ಟೆ ಸ್ಥಳದಲ್ಲಿ ಶೀತಲೀಕರಣ ಗೃಹ ಆರಂಭಿಸುವ ಭರವಸೆ ಈಡೇರಿಸಿಲ್ಲ
* ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ಗಳ ಮೂಲಸೌಕರ್ಯ ಹಾಗೂ ನಿರ್ವಹಣೆ ಉನ್ನತೀಕರಣ ಮಾಡುವ ಭರವಸೆ ಈಡೇರಿಲ್ಲ
* ರೈತರ ಜಮೀನಿಗಳಿಗೆ ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಪೂರೈಸುವ ಭರವಸೆ ಈಡೇರಿಸಿಲ್ಲ
* ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಭರವಸೆ ಈಡೇರಿಲ್ಲ
* ಎಲ್ಲ ಹಳ್ಳಿ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸುವ ಭರವಸೆ ಈಡೇರಿಲ್ಲ
* ರಾಜ್ಯದ ಎಲ್ಲ ಕುಟುಂಬಗಳಿಗೆ ಸೂರು ಒದಗಿಸುವ ಮಾತು ಕೊಟ್ಟಂತೆ ನಡೆದುಕೊಂಡಿಲ್ಲ
* ಕೃಷ್ಣಾ ನೀರಾವರಿ ಯೋಜನೆಗೆ ಐವತ್ತು ಸಾವಿರ ಕೋಟಿ ರುಪಾಯಿ ನೀಡುವ ಮಾತಿನಂತೆ ನಡೆದುಕೊಂಡಿಲ್ಲ












Click it and Unblock the Notifications