ನಾಳೆಯಿಂದ ಡಿ.5 ರವರೆಗೆ ನಗರದಲ್ಲಿ ನಿಷೇಧಾಜ್ಞೆ: ಭಾಸ್ಕರ್ ರಾವ್

ಬೆಂಗಳೂರು, ಡಿಸೆಂಬರ್ 02: ಬೆಂಗಳೂರು ನಗರದ ೪ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವ ಕಾರಣದಿಂದ ಭದ್ರತೆಯನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದ್ದು, ಡಿಸೆಂಬರ್ 03 ರ ಸಂಜೆ 6 ರಿಂದ ಡಿಸೆಂಬರ್ 05 ರ ಸಂಜೆ 06 ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಬೆಂಗಳೂರು ನಗರದ ಕೆ.ಆರ್.ಪುರಂ, ಯಶವಂತಪುರ, ಶಿವಾಜಿನಗರ, ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಸಂಬಂಧ ಭಾರೀ ಪೊಲೀಸ್ ಬಂದೋಬಸ್ತ್ ವ್ಯೆವಸ್ಥೆ ಕೈಗೊಳ್ಳಲಾಗಿದೆ. ಉಪ ಚುನಾವಣೆಯು ಡಿಸೆಂಬರ್ 05 ರಂದು ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ನಗರದ 28 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ನಾಲ್ಕೂ ಕ್ಷೇತ್ರಗಳಲ್ಲಿಯೂ ಸುಗಮ ಮತ್ತು ಶಾಂತಿಯುತ ಮತದಾನಕ್ಕೆ ಸರ್ವ ವ್ಯೆವಸ್ಥೆ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

Prohibition on city till December5, From tomorrow: Bhaskar Rao

ಉಪ ಚುನಾವಣಾ ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 7 ಜನ ಡಿಸಿಪಿಗಳು, 14 ಜನ ಎಸಿಪಿಗಳು, 30 ಪೊಲೀಸ್ ಇನ್ಸಪೆಕ್ಟರ್ ಗಳು, 68 ಪಿಎಸ್ಐ ಗಳು, 160 ಎಎಸ್ಐ ಗಳು, 1666 ಮುಖ್ಯ ಪೇದೆ ಮತ್ತು ಪೇದೆಗಳನ್ನನು ನಿಯೋಜಿಸಲಾಗಿದೆ. ಇವರ ಜೊತೆಗೆ 951 ಗೃಹ ರಕ್ಷಕ ದಳ ಸಿಬ್ಬಂದಿಯನ್ನು ಭದ್ರತೆ ಒದಗಿಸಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+