ಬೆಂಗಳೂರು: ಮಂಜುನಾಥನಗರ ಮೇಲುಸೇತುವೆಯಲ್ಲಿ ಸಮಸ್ಯೆ, ಐಐಎಸ್ಸಿಗೆ ಪತ್ರ ಬರೆದ ಬಿಬಿಎಂಪಿ
ಬೆಂಗಳೂರು, ಏಪ್ರಿಲ್ 06: ನಗರದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುವ ಪ್ರತಿಷ್ಠಿತ ಮೇಲ್ಸೇತುವೆಯೊಂದರಲ್ಲಿ ಉಬ್ಬುವಿಕೆ (ಬಲ್ಜಿಂಗ್) ಮತ್ತು ಬಿರುಕು ಬಿಟ್ಟಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಅಗತ್ಯ ಕ್ರಮಕ್ಕೆ ಸಿದ್ಧ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಿಳಿಸಿದೆ.
ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥನಗರ ಮೇಲ್ಸೇತುವೆಯಲ್ಲಿ ಆರ್.ಇ ಪ್ಯಾನೆಲ್‌ಗಳಲ್ಲಿ ಉಬ್ಬುಗಳು ಕಂಡು ಬಂದಿದೆ. ಅಲ್ಲದೇ ಮಲ್ಸೇತುವೆಯಲ್ಲಿ ಕಟ್ಟಡದಲ್ಲಿ ಬಿರುಕು ಕಾಣಸಿಕೊಂಡಿದೆ ಅಂತಲೂ ವರದಿ ಆಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಬಿಎಂಪಿ ಕೂಲಂಕುಶವಾಗಿ ಪರಿಶೀಲನೆಗೆ ಒಳಪಡಿಸಲು ನಿರ್ಧರಿಸಿದೆ.

ಮೇಲ್ಸೇತುವೆಯಲ್ಲಿ ಬಲ್ಜ್ಂಗ್ ಕಂಡು ಬಂದಿದ್ದರಿಂದ, ಸದರಿ ಕಾಮಗಾರಿಯ ಯೋಜನಾ ಸಮಾಲೋಚಕರ ತಾಂತ್ರಿಕ ವರದಿ ಅನ್ವಯ ಬಲ್ಜಿಂಗ್ ಅನ್ನು ತಡೆಗಟ್ಟಲು 52 ಆರ್.ಇ ಪ್ಯಾನೆಲ್‌ಗಳಿಗೆ ನೈಲಿಂಗ್ ಅಳವಡಿಸಲಾಗಿದೆ. ಈ ಮಧ್ಯೆ ಮೇಲುಸೇತುವೆಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.
ಐಐಎಸ್‌ಸಿಗೆ ಬಿಬಿಎಂಪಿ ಪತ್ರ
ಈ ಹಿಂದೆ ಮೇಲ್ಸೇತುವೆ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ವರದಿ ನೀಡಿದ್ದರು. ಅದಾದ ಬಳಿಕವು ಕೆಲವು ಆರೋಪಗಳ ಬಂದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಮೇಲ್ಸೇತುವೆ ಸುರಕ್ಷತಾ ಆಡಿಟ್ ಮಾಡಿ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆಯವರಿಂದ ಮತ್ತೊಂದು ಅಭಿಪ್ರಾಯವನ್ನು ಪಡೆಯಲು ಬಿಬಿಎಂಪಿ ಪತ್ರ ಬರೆದಿದೆ. ಸದರಿ ಅವರು ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಈ ಹಿಂದೆ ಬಿಬಿಎಂಪಿ ಮೇಲ್ಸೇತುವೆ ಸದರಿ ಕಾಮಗಾರಿಯ ಸುರಕ್ಷತಾ ಆಡಿಟ್ ಮಾಡಿ ವರದಿ ನೀಡುವಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ಬಿಬಿಎಂಪಿ ಮನವಿ ಮಾಡಿತ್ತು. ಈ ಕುರಿತಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ತಪಾಸಣೆಯನ್ನು ಕೈಗೊಂಡು ಕೂಲಂಕುಷವಾಗಿ ಪರಿಶೀಲಸಿ ವರದಿ ನೀಡಿದ್ದಾರೆ.

ಹಳೆಯ ವರದಿಯಲ್ಲಿ ಏನಿದೆ
ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ವರದಿಯಲ್ಲಿ ಮೇಲ್ಸೇತುವೆಯ ಆರ್.ಇ ಪ್ಯಾನಲ್‌ಗಳು ಸ್ವಲ್ಪ ಉಬ್ಬಿದಂತೆ ಕಂಡು ಬಂದಿರುವ ಬಗ್ಗೆ ಹೇಳಲಾಗಿತ್ತು. ಈ ಪ್ಯಾನಲ್‌ಗಳು ಇನ್ನಷ್ಟು ಬಲ್ಜಿಂಗ್ ಆಗುವ ಬಗ್ಗೆ ಪರಿಶೀಲಿಸಿ ಎಡಭಾಗದ ಆರ್.ಇ ಪ್ಯಾನೆಲ್‌ಗಳ ಪಕ್ಕದಲ್ಲಿ 10.00 ಮೀಟರ್‌ಗಳ ಅಂತರದಲ್ಲಿ 12 ಅಡಿಯ ಕಬ್ಬಿಣದ ಸರಳುಗಳನ್ನು ಬಿಬಿಎಂಪಿ ಅಳವಡಿಸಿತು. ಹೀಗಿದ್ದರೂ ಮತ್ತೆ ಸಮಸ್ಯೆಯಾಗಿದೆ. ಇದು ಜನರ ಪ್ರಾಣಕ್ಕೆ ಸಂಚಕಾರ ತರಬಹುದು ಎಂಬ ಮಾತುಗಳು ಕೇಳಿ ಬಂದಿವೆ.
ಬಿಬಿಎಂಪಿ ನೀಡಿದ ಭರವಸೆ
ಈಗಾಗಲೇ ಸದರಿ ಮೇಲುಸೇತುವೆಯನ್ನು ನುರಿತ ತಜ್ಞರು ಮೂರು-ನಾಲ್ಕು ಬಾರಿ ತಪಾಸಣೆ ಕಾರ್ಯ ಮಾಡಿದ್ದಾರೆ. ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ತರಹದ ತೊಂದರೆ ಇಲ್ಲ. ಹಾಗಾಗಿ ಸಾರ್ವಜನಿಕರು ವಾಹನಗಳಲ್ಲಿ ಮೇಲುಸೇತುವೆಯ ಮೇಲೆ ಸಂಚರಿಸಬಹುದು ಎಂದು ಯೋಜನಾ ವಿಭಾಗದ ಮುಖ್ಯ ಅಭಿಯಂತರ ವಿನಾಯಕ ಸುಗೂರ್ ಭರವಸೆ ನೀಡಿದ್ದಾರೆ.
2018 ರಲ್ಲಿ ಉದ್ಘಾಟನೆಗೊಂಡಿದ್ದ ಮೇಲ್ಸೇತುವೆ
ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥ ನಗರ ಮೇಲುಸೇತುವೆಯ ಕಾಮಗಾರಿಯನ್ನು ಬಿಬಿಎಂಪಿ ಕರೆದಿದ್ದ ಟೆಂಡರ್ ಅಡಿಯಲ್ಲಿ ಮೆ:ಎಂ. ವೆಂಕಟರಾವ್ ಇನ್‌ಫ್ರಾ ಪ್ರೊಜೆಟ್ಸ್ ಪ್ರೈ.ಲಿ ಪಡೆದಿತ್ತು. ಅದರಂತೆ ಮೇಲ್ಸೇತುವೆಯ ಕಾಮಗಾರಿಯು 2016ರ ಮಾರ್ಚ್ 14ರಂದು ಆರಂಭವಾಗಿತ್ತು. ನಿಗದಿಯಂತೆ 2018 ಆಗಸ್ಟ್ 27ರಂದು ಕಾಮಗಾರಿ ಪೂರ್ಣಗೊಂಡಿತ್ತು. ಬಳಿಕ ಬಿಬಿಎಂಪಿ ಮತ್ತು ಸರ್ಕಾರದಿಂದ ಅಧಿಕೃತವಾಗಿ ಉದ್ಘಾಟನೆಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.
ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಮೇಲ್ಸೇತುವೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಂಡು ಬರುತ್ತಿರುವುದು ನೋಡಿದರೆ ಬಿಬಿಎಂಪಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಬೆಂಗಳೂರು ಉತ್ತರ: ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ, ರಸ್ತೆ ಅಗಲೀಕರಣ, ಟಿ.ಡಿ.ಆರ್ ಬಗ್ಗೆ ಮಹತ್ವದ ಚರ್ಚೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD











Click it and Unblock the Notifications