ಮಲಯಾಳಂ ಕಡ್ಡಾಯ ವಿರೋಧಿಸಿ ಇಂದು ಟೌನ್ ಹಾಲ್ ಮುಂದೆ ಪ್ರತಿಭಟನೆ
ಬೆಂಗಳೂರು, ಮೇ 31: ಶಾಲೆಗಳಲ್ಲಿ 10ನೇ ತರಗತಿ ವರೆಗೆ ಮಲಯಾಳಂ ಭಾಷೆ ಕಡ್ಡಾಯ ಗೊಳಿಸಿ ಕೇರಳ ಸರಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆ ವಿರೋಧಿಸಿ 'ಕಾಸರಗೋಡು ಕನ್ನಡಿಗರ ಒಕ್ಕೂಟ-ಬೆಂಗಳೂರು' ಇಂದು ಸಂಜೆ 6 ಗಂಟೆಗೆ ನಗರದ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದೆ.
ಮಲಯಾಳಂ ಭಾಷೆ ಕಡ್ಡಾಯದಿಂದ ಕನ್ನಡ ನೆಲ, ಗಡಿನಾಡ ಜಿಲ್ಲೆ, ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಗಂಡಾಂತರ ಬರಲಿದೆ. ಇದರಿಂದ ಮಲಯಾಳಂ ಕಡ್ಡಾಯಗೊಳಿಸುವ ಕೇರಳ ಸರಕಾರದ ಕನ್ನಡ ವಿರೋಧಿ ನೀತಿಯನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇನ್ನು ಕಳೆದ ಮೇ 23ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ನವ ನಿರ್ಮಾಣ ಸೇನೆ ಪ್ರತಿಭಟನೆ ನಡೆಸಿತ್ತು. ಆದರೆ ಇದರಿಂದ ಕೇರಳ ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ.












Click it and Unblock the Notifications