2ಜಿ ಹಗರಣದ ರಹಸ್ಯ ಹೇಳಲಿದ್ದಾರೆ ಪ್ರಶಾಂತ್ ಭೂಷಣ್
ಬೆಂಗಳೂರು, ನ.27 : ಕೇಂದ್ರದಲ್ಲಿ ಅಧಿಕಾರ ನಡೆಸಿದ ಯುಪಿಎ ಸರ್ಕಾರದ ಬಹುದೊಡ್ಡ ಹಗರಣ 2 ಜಿ ಸ್ಪೆಕ್ಟ್ರಂ ಕುರಿತು ಹೆಚ್ಚು ತಿಳಿದುಕೊಳ್ಳಬೇಕೆ?, ಶನಿವಾರ ಬಿಡುವು ಮಾಡಿಕೊಂಡರೆ ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಈ ಬಗ್ಗೆ ಹೆಚ್ಚು ಮಾಹಿತಿ ನೀಡಲಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ನ.29ರ ಶನಿವಾರ 2ಜಿ ಹಗರಣ ಮತ್ತು ಸಿಬಿಐ ತನಿಖೆಯ ಬಗ್ಗೆ ಬೆಂಗಳೂರಿನ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ನಡೆಯಲಿದೆ.

ರೂ. 1.74 ಲಕ್ಷ ಬೃಹತ್ ಮೊತ್ತದ 2ಜಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎ. ರಾಜಾ ರಾಜೀನಾಮೆಯನ್ನು ನೀಡಿದ್ದರು.
ಕಾರ್ಯಕ್ರಮದ ವಿವರ
* ದಿನಾಂಕ : ನವೆಂಬರ್ 29, ಶನಿವಾರ
* ಸಮಯ : ಮಧ್ಯಾಹ್ನ 1.30 ರಿಂದ 2.30
* ಸ್ಥಳ : ಆಮ್ ಆದ್ಮಿ ಪಕ್ಷದ ಕಚೇರಿ
* ವಿಳಾಸ : #32, 2ನೇ ಮಹಡಿ ಕ್ಯಾಸ್ಟಲ್ ಸ್ಟ್ರೀಟ್
( ಬ್ರಿಗೇಡ್ ರಸ್ತೆಯ ಹತ್ತಿರ ), ಅಶೋಕ ನಗರ
ಬೆಂಗಳೂರು -560025












Click it and Unblock the Notifications