Bengaluru Power Cut: ಬೆಂಗಳೂರಿನಲ್ಲಿ ಸೆಪ್ಟೆಂಬರ್ 20ರ ಶನಿವಾರ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ಹಾಗೂ ಭಾರೀ ಮಳೆಯಾದಂತಹ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಹಾಗೆಯೇ ಇದೀಗ ಸೆಪ್ಟೆಂಬರ್ 20ರ ಶನಿವಾರ ನಗರದ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಾದ್ರೆ, ಎಲ್ಲೆಲ್ಲಿ? ಕಾರಣ ಏನು ಹಾಗೂ ಸಮಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಸೆಪ್ಟೆಂಬರ್ 20ರ ಶನಿವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಎಷ್ಟು ಗಂಟೆಯವರೆಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಕಣ್ಣಾಡಿಸಿ.

ಶನಿವಾರ ಎಲ್ಲೆಲ್ಲಿ ಕರೆಂಟ್ ಕಟ್?: ಪದ್ಮನಾಭನಗರ ಉಪಕೇಂದ್ರದಿಂದ ತಿರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿದೆ. ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಸೆಪ್ಟೆಂಬರ್ 20ರ ಶನಿವಾರ ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಶೊಭಾ ಸಿಟಿ, ಚೊಕ್ಕನಹಳ್ಳಿ, ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್, ನೂರ್ ನಗರ, ಎಕ್ಸ್ ಸರ್ವಿಸ್ಮೆನ್ ಲೇಔಟ್, ಪೊಲೀಸ್ ಕ್ವಾಟ್ರಸ್, ಆರ್‌ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ಎಸ್ತರ್ ಹರ್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬರ್ಡ್ ಮತ್ತು ಬೆಂಚ್ ರಾಯಲ್‌ವುಡ್, ಅರ್ಕಾವತಿ ಲೇಔಟ್ ಥಣಿಸಂದ್ರ.
ಆರ್‌ಕೆ ಹೆಗಡೆ ನಗರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ಕರ್ನಾಟಕ ಕಾಲೇಜು, ಭಾರತೀಯ ಸಿ.ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸೆಪ್ಟೆಂಬರ್ 19ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ: ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡ ಹಿನ್ನೆಲೆ ನಗರದ ಈ ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬನಗಿರಿನಗರ, ಪಾಪಯ್ಯ ಗಾರ್ಡನ್, ಬಾಲಾಜಿ ಕಲ್ಯಾಣ ಮಂಟಪ ಸುತ್ತಮುತ್ತ, ಸಿದ್ದಮ್ಮ ಮತ್ತು ಸಿದ್ದಯ್ಯ ರೆಡ್ಡಿ ಏರಿಯಾ, 9ನೇ ಉಪ ವಿಭಾಗ ಕಚೇರಿ, ಜಯನಗರ ವಿಭಾಗ ಕಚೇರಿ, 30ನೇ ಮೇನ್, 30ನೇ ಕ್ರಾಸ್, ಬಿ.ಎನ್.ಎಂ. ಕಾಲೇಜ್, ಬಿ.ಡಿ.ಎ. ಕಾಂಪ್ಲೆಕ್ಸ್, ದೇವಗಿರಿ ದೇವಸ್ಥಾನ, ಬಿ.ಎಸ್.ಎನ್.ಎಲ್. ಕಚೇರಿ, ಬನಶಂಕರಿ 2ನೇ ಹಂತ, ಎಸ್.ಎಲ್.ವಿ ಹೋಟೆಲ್‌ನಿಂದ 24ನೇ ಕ್ರಾಸ್, ಉಪಹಾರ ಹೋಟೆಲ್, ಮಂಜುನಾಥ ಕಾಲೋನಿ, ಬಿ.ಎಂ.ಟಿ.ಸಿ. ಡಿಪೋ, ರಾಜೀವ್ ನಗರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಪದ್ಮನಾಭನಗರ.
ರಾಘವೇಂದ್ರ ಲೇಔಟ್, 18ನೇ ಮೇನ್ ಟೆಲಿಫೋನ್ ಎಕ್ಸ್‌ಚೇಂಜ್ ಬಡಾವಣೆ, ಕಿಡ್ನಿ ಪೌಂಡೇಶನ್, ಮಹಾರಾಜ ಆಸ್ಪತ್ರೆ, ಲಕ್ಷೀಕಾಂತ ಕಲ್ಯಾಣ ಮಂಟಪ, ಪುಟ್ಟಲಿಂಗಯ್ಯ ರಸ್ತೆ, ಪದ್ಮನಾಭನಗರ, ಲಕ್ಷೀಕಾಂತ ಕಲ್ಯಾಣ ಮಂಟಪ, ಶ್ರವಂತಿ ಅಪಾರ್ಟ್‌ಮೆಂಟ್, ಆರ್.ಕೆ.ಲೇಔಟ್, ಕದಿರೇನಹಳ್ಳಿ, ಮೋನೋ ಟೈಪ್, ಟೀಚರ್ಸ್ ಕಾಲೋನಿ, ಕಾವೇರಿ ನಗರ, ಡಾ. ಅಂಬೇಡ್ಕರ್ ನಗರ, ಎಂ.ಎಂ.ಇಂಡಸ್ಟಿಯಲ್ ಪ್ರದೇಶ, ಪೋಸ್ಟ್ ಆಫೀಸ್, ಎಂಎಂಐ, ಇಂಡೋ ಅಮೆರಿಕನ್, ಉಮಾ ಮಹೇಶ್ವರಿ ದೇವಸ್ಥಾನ 15ರಿಂದ 17ನೇ ಡಿ ಕ್ರಾಸ್‌ವರೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಅಲ್ಲದೆ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಮೊಬೈಲ್, ಲ್ಯಾಪ್‌ಟ್ಯಾಪ್, ಬ್ಯಾಟರಿ ಸೇರಿದಂತೆ ಇನ್ನಿತರೆ ವಿದ್ಯುತ್‌ಗೆ ಸಂಬಂಧಿಸಿದ ಉಪಕರಣಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳಿ ಎಂದು ಸೂಚನೆ ನೀಡಿದೆ.












Click it and Unblock the Notifications