Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇಂದು (ಜೂನ್ 27) ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇಂದು ಎಲ್ಲೆಲ್ಲಿ ಪವರ್ ಕಟ್?: ಜೂನ್ 27ರ ಶುಕ್ರವಾರ ಯಲಹಂಕ ನ್ಯೂ ಟೌನ್, ಬಳ್ಳಾರಿ ರಸ್ತೆ ಬಳಿಯ ವಡೇರಹಳ್ಳಿ, ವೈ-ಮ್ಯಾಕ್ ಸರ್ಕಲ್, ನಿಸರ್ಗ ಲೇಔಟ್, ಐವಿಆರ್‌ಐ, ಶ್ರೀಕ್ ಅಪಾರ್ಟ್‌ಮೆಂಟ್, ಬಿಎಂಎಸ್ ಹಾಸ್ಟೆಲ್, ಕಾಶಿರಾಮ್ ನಗರ, ಎಚ್‌ವಿವಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಅನಂತಪುರ, ಪುಟ್ಟೇನಹಳ್ಳಿ, ಇಸ್ರೋ ಲೇಔಟ್, ಎಲ್‌ಬಿಎಸ್ ನಗರ, ರಾಜನಕುಂಟೆ, ನೆಲಕುಂಟೆ, ಮಾರಸಂದ್ರ, ಸಿಲ್ವರ್ ಓಕ್ ಭಾಗಗಳು ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕಾರಣ ಬೆಸ್ಕಾಂ, ಸಾರ್ವಜನಿಕರಿಗೆ ತೊಂದರೆಯಾಗಂದತೆ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಂಳ್ಳುವುದಾಗಿ ತಿಳಿಸಿದೆ. ಅಲ್ಲದೆ, ಗ್ರಾಹಕರು ಹೆಚ್ಚಿನ ಮಾಹಿತಿಯನ್ನು ಸಹಾಯವಾಣಿ ಮೂಲಕ ತಿಳಿದುಕೊಳ್ಳಬಹುದು ಎಂದು ತಿಳಿಸಿದೆ.
ಜೂನ್ 26ರಂದು ಎಲ್ಲೆಲ್ಲಿ ಪವರ್ ಕಟ್: ಕೆಪಿಟಿಸಿಎಲ್ ವ್ಯಾಪ್ತಿಯಲ್ಲಿ ಬರುವ 66/11 ಕೆವಿ ಉಪಕೇಂದ್ರಗಳಲ್ಲಿ ತುರ್ತುಕಾರ್ಯ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಹಿನ್ನೆಲೆ ಈ ಕೆಳಗಿನ ಪ್ರದೇಶಗಳಲ್ಲಿ ಗುರುವಾರ ಜೂನ್ 26ರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿತ್ತು.
ಕೋರಮಂಗಲ ವಿಭಾಗದ ಆರ್‌ಎಮ್ ಝೇಡ್ ಎಕೋವರ್ಲ್ಡ್, ಮ್ಯಾರಿಯಟ್ ಹೋಟೆಲ್, ಗೇರ್ ಸ್ಕೂಲ್ ರೋಡ್, ಬನರುಘಟ್ಟ ರಸ್ತೆಯ ಜೆ.ವಿ.ಹೋಟೆಲ್, ಇಂಟೆಲ್, ಎನ್‌ಎಎಲ್ ರಸ್ತೆ, ಕೋರಮಂಗಲ ಡೆಲ್ ಕಚೇರಿ, ಅಮರ ಜ್ಯೋತಿ ಲೇಔಟ್ ಹಾಗೂ ವಿವೇಕಾನಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲು ವ್ಯತ್ಯ ಉಂಟಾಗಲಿದೆ ಎಂದು ತಿಳಿಸಿತ್ತು.
ಜಯನಗರದ ಭಾಗಗಳಲ್ಲಿ ತಾತ್ಕಾಲಿಕ ಕರೆಂಟ್ ಆಗಲಿದೆ. ಕೋಣನಕುಂಟೆ, ತಲಘಟ್ಟಪುರ, ದೊಡ್ಡಕಲ್ಲಸಂದ್ರ, ಬಿಟಿಎಸ್ ರಸ್ತೆ, ಜೆಸಿ ರಸ್ತೆ, ರಿಚ್‌ಮಂಡ್ ವೃತ್ತ, ಲಾಲ್‌ಬಾಗ್ ರಸ್ತೆ, ಶಾಂತಿನಗರ, ಸುಧಾಮನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿತ್ತು.
ಬೆಳಗ್ಗೆ 10 ರಿಂದ ಮಧ್ಯಾಹ್ನ 2-3ರ ಕರೆಂಟ್ ದೇವರಬೀಸನಹಳ್ಳಿ, ಸಾಯಿ ಸೃಷ್ಟಿ, ಮಾರತಹಳ್ಳಿ, ಬೈಯಪ್ಪನಹಳ್ಳಿ, ವೀವರ್ಸ್ ಕಾಲೋನಿ, ಗೊಟ್ಟಿಗೆರೆ, ರಾಗಿಹಳ್ಳಿ, ಕಾಸರಗುಪ್ಪೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿತ್ತು.












Click it and Unblock the Notifications