Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಡಿಸೆಂಬರ್ 10ರ ಬುಧವಾರ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಡಿಸೆಂಬರ್ 10ರ ಬುಧವಾರ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎಂದು ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಡಿಸೆಂಬರ್ 10ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

220/66/11 ಕೆವಿ ಸೋಮನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಬುಧವಾರ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಕರೆಂಟ್ ಕಟ್?: ಐಬೆಕ್ಸ್ ಫ್ಯಾಕ್ಟರಿ, ರಾವು ಗೋಡ್ಲು, ನೆಟ್ಟಿಗೆರೆ, ಗುಂಡಾಂಜನೇಯ ದೇವಸ್ಥಾನ, ಗಿರಿ ಗೌಡನ ದೊಡ್ಡಿ, ಮುತ್ತು ರಾಯನಪುರ, ಗೊಟ್ಟಿಗೆಹಳ್ಳಿ, ಇನೋರ ದೊಡ್ಡಿ, ಸೋನಾರೆ ದೊಡ್ಡಿ, ಗಾಂಧಿ ನಗರ, ಪಟ್ಟರೆಡ್ಡಿ ಪಾಳ್ಯ, ನೌಕಲ್ ಪಾಳ್ಯ, ಗುಡಿಪಾಳ್ಯ, ನಾಗನವಕನ ಹಳ್ಳಿ, ಮಲ್ಲಿ ಪಾಳ್ಯ, ತಾಸುದೇವರ ಪಾಳ್ಯ, ವಾಸುದೇವರ ಪಾಳ್ಯ, ಗೊಲ್ಲರ ಪಾಳ್ಯ, ನಲ್ಲಕನ ದೊಡ್ಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಅಕ್ಲದೆ, ಸಿಆರ್‌ಪಿಎಫ್ ಕ್ಯಾಂಪ್ ಗೇಟ್ 1 & 82, ಎಡಿಫೈ ಸ್ಕೂಲ್ ಸೋಮನಹಳ್ಳಿ, ಕೆರೆಚೂದರನ ಹಳ್ಳಿ, ಸಾಧನ ಪಾಳ್ಯ, ಹೊಸ ದೊಡ್ಡಿ, ನೆಲಗುಳಿ, ವೀರಸಾಂದ್ರ, ಜಟ್ಟಿಪಾಳ್ಯ, ಗೊಲ್ಲರಪಾಳ್ಯ, ತಿಟ್ಟಹಳ್ಳಿ, ಗಂಗಕ್ಕನ ಗೊಡ್ಡಿ, ಬೋಕಿಪುರ, ತೋಕತಿಮ್ಮನ ದೊಡ್ಡಿ, ಏಡುಮಾಡು, ಅವಸರಲ ಫ್ಯಾಕ್ಟರ್, ರಾವರ ದೊಡ್ಡಿ, ತಾತಗುಪ್ಪೆ, ಗಡಿಪಾಳ್ಯ, ಕಗ್ಗಲೀಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದೆ.
ಯಾವೆಲ್ಲಾ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಮುಂಚಿತವಾಗಿ ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್, ಬ್ಯಾಟರಿ ಸೇರಿದಂತೆ ಚಾರ್ಜಿಂಗ್ ಸಂಬಂಧಪಟ್ಟ ಸಾಧನಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದೆ. ಅಲ್ಲದೆ, ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಅಂತಲೂ ತಿಳಿಸಿದೆ. ಇಂತಹ ಸಲಹೆಯನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೋ ಯಾವಗೆಲ್ಲಾ ಕರೆಂಟ್ ಕಟ್ ಆಗಿದೆಯೋ ಇದರ ಒಂದು ದಿನ ಮುಂಚಿತವಾಗಿ ಸಲಹೆ ನೀಡುತ್ತಲೇ ಬಂದಿದೆ.












Click it and Unblock the Notifications