Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜುಲೈ 17, 18, 19, 20, 21, 22, 23, 24ರಂದು ಕರೆಂಟ್ ಕಟ್

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜುಲೈ 17ರಿಂದ 24ರ ವರೆಗೆ 8 ದಿನ ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಜುಲೈ 17ರಿಂದ 24ರ ವರೆಗೆ ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ.

Power Cut in Bengaluru s These Areas From July 17 to 24 Know details

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) 220 ಕೆವಿ ದೊಡ್ಡಬಳ್ಳಾಪುರ ವಿದ್ಯುತ್ ಕೇಂದ್ರಕ್ಕೆ ಸಂಪರ್ಕಗೊಂಡಿರುವ 66 ಕೆವಿ ದೊಡ್ಡಬಳ್ಳಾಪುರ-ದೇವನಹಳ್ಳಿ ಪ್ರಸರಣ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ. ಆದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್‌ ಕಟ್‌?: ಜುಲೈ 17ರಿಂದ 24ರ ವರೆಗೆ ಮಧ್ಯಾಹ್ನ 12 ರಿಂದ ಸಂಜೆ 4 ರ ಗಂಟೆವರೆಗೆ ದೇವನಹಳ್ಳಿ ಟೌನ್, ದೇವನಹಳ್ಳಿಯಲ್ಲಿ ವಸತಿ ಬಡಾವಣೆಗಳು, ಗೋಕರೆ, ಭುವನಹಳ್ಳಿ, ಯರ್ತಿಗಾನಹಳ್ಳಿ, ಚಿಕ್ಕಸನ್ನೆ, ಅವತಿ, ಬಿದಲೂರು, ವಿಶ್ವನಾಥಪುರ, ಬೊಮ್ಮವರ, ಯಲಿಯೂರು, ಚಿಮಾಚನಹಳ್ಳಿ, ಕನ್ನಮಂಗಲ, ಸಣ್ಣಮಾನಿಕೆರೆ, ಹೀರಾನಂದನಿ, ಕೊಯ್ಯೀರ, ತೈಲಗೆರೆ, ಗೊಬ್ಬರಗುಂಟೆ, ಕೋರಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅಲ್ಲದೆ, ಬೆಂಗಳೂರು ಗ್ರಾಮೀಣ ಡಿಸಿ ಕಚೇರಿ, ಕುಂದನ ಗ್ರಾಮ ಪಂಚಾಯತ್, ಕೊಯಿರಾ ಗ್ರಾಮ ಪಂಚಾಯಿತ್‌, ಆಲೂರು-ದುದ್ದನಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಹೆಚ್ಚುವರಿ ಭಾಗಗಳಲ್ಲಿ ವಿದ್ಯುತ್ ಕಡಿತ: ಬೆಂಗಳೂರು ನಗರ ಪ್ರದೇಶಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಂಡ ಹಿನ್ನೆಲೆ ಈ ಭಾಗದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3:30 ಗಂಟೆವರೆಗೆ ವಿದ್ಯುತ್ ಕಡಿತಗೊಳಿಸುವುದಾಗಿ ಬೆಸ್ಕಾಂ ತಿಳಿಸಿದೆ.

ರವೀಂದ್ರ ನಗರ, ಪ್ರಶಾನಾಥ್ ನಗರ, ಸಂತೋಷ್ ನಗರ, ಏರ್ ಫೋರ್ಸ್ ಜಾಲಹಳ್ಳಿ ಪಶ್ಚಿಮ, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್‌, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗತಿ ರಸ್ತೆ, ತ್ರಿವೇಣಿ, ಎಚ್‌ಎಚ್‌ವಿ, ಡಿಎಂಜಿ, ಕೃಷ್ಣಾ ಫ್ಯಾಬ್ರಿಕೇಷನ್ಸ್, ಜೆಮಿನಿ ಇಂಡಸ್ಟ್ರೀಸ್, ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ವಿಪ್ರೋ ವೆಲ್‌ಕಾಸ್ಟ್ ಕಾರ್ಖಾನೆ, ಐಟಿಸಿ, ವೋಲ್ವೋ, ಅವೆರಿ ಡೆನ್ನಿಸನ್, ಹಿಟಾಚಿ ಇಂಡಸ್ಟ್ರೀಸ್, ಗೀತಾ ಟಿಂಬರ್ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಿದೆ.

ವಿದ್ಯುತ್ ಕಡಿತವಾಗುವ ಪ್ರದೇಶಗಳ ನಿವಾಸಿಗಳು ಮುಂಜಾಗ್ರತಾವಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಗ್ರಾಹಕರಿಗೆ ಪ್ರಮುಖ ಸೂಚನೆಗಳು ಮೊಬೈಲ್, ಲ್ಯಾಪ್‌ಟಾಪ್, ತುರ್ತು ದೀಪಗಳಂತಹ ಅಗತ್ಯ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳಿ. ಯುಪಿಎಸ್‌ನಂತಹ ವಿದ್ಯುತ್ ಬ್ಯಾಕಪ್ ವ್ಯವಸ್ಥೆಗಳು ಸಂಪೂರ್ಣ ಚಾರ್ಜ್ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಿ.

ಅಲ್ಲದೆ, ಮನೆಯಿಂದ ಕೆಲಸ ಮಾಡುವವರು ತಮ್ಮ ವೇಳಾಪಟ್ಟಿಯನ್ನು ವಿದ್ಯುತ್ ಇಲ್ಲದಿರುವ ಸಮಯಕ್ಕೆ ತಕ್ಕಂತೆ ಯೋಜಿಸಿಕೊಳ್ಳುವುದು ಉತ್ತಮ. ವಿದ್ಯುತ್ ಪಂಪ್‌ಗಳನ್ನು ಅವಲಂಬಿಸಿದವರು ಕುಡಿಯುವ ನೀರು, ಅಡುಗೆ ಮತ್ತು ಇತರ ಅಗತ್ಯಗಳಿಗೆ ನೀರನ್ನು ಸಂಗ್ರಹಿಸಿಡಿ ಎಂದು ಸೂಚನೆ ನೀಡಿದೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಬೆಸ್ಕಾಂನ ಅಧಿಕೃತ ವೆಬ್‌ಸೈಟ್‌ bescom.karnataka.gov.in ಅಥವಾ @NammaBESCOMಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+