ಆಗಸ್ಟ್ 13ರವರೆಗೆ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಆಗಸ್ಟ್ 10 ರಿಂದ 13 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕೇಬಲ್ ಪರಿವರ್ತನೆ ಕೆಲಸ ಮತ್ತು ಇತರ ನಿರ್ವಹಣಾ ಯೋಜನೆಗಳಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (ಬೆಸ್ಕಾಂ) ನಿರ್ವಹಿಸುತ್ತಿರುವ ನಿರ್ವಹಣಾ ಕಾರ್ಯದ ಪರಿಣಾಮವಾಗಿ ನಗರದ ಹಲವಾರು ಭಾಗಗಳು ಈಗಾಗಲೇ ವಿದ್ಯುತ್ ಸ್ಥಗಿತದಿಂದ ಸಮಸ್ಯೆ ಎದುರಿಸುತ್ತಿವೆ.
ಭೂಗತ ಕೇಬಲ್‌ಗಳ ಚಾರ್ಜಿಂಗ್, ಮರ ಕಡಿಯುವುದು, ಟ್ರಾನ್ಸ್‌ಫಾರ್ಮರ್ ಕೆಲಸ ಮತ್ತು ಮಾಸ್ಟರ್ ಟೆಸ್ಟಿಂಗ್ ಸೇರಿದಂತೆ ಇಲಾಖೆಯ ನಿರ್ವಹಣೆ ಕಾರ್ಯಗಳಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೇಳಲಾಗಿದೆ.

ಆಗಸ್ಟ್ 10 ರಂದು ಬೆಂಗಳೂರಿನ ಜಕ್ಕಸಂದ್ರ, ಎಚ್‌ಎಸ್‌ಆರ್ 5ನೇ ಸೆಕ್ಟರ್, ಟೀಚರ್ಸ್ ಕಾಲೋನಿ, ವೆಂಕಟಾಪುರದ ಕೆಲವು ಭಾಗಗಳು, ಸಲಾರ್‌ಪುರಿಯಾ ಗ್ರೀನೇಜ್ ಅಪಾರ್ಟ್‌ಮೆಂಟ್‌ಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಆಗಸ್ಟ್ 11 ರಿಂದ 13ರವರೆಗೆ ಎಲೆಕ್ಟ್ರಾನಿಕ್ಸ್ ಸಿಟಿ 2ನೇ ಹಂತ, ವೀರಸಂದ್ರ, ಅನಂತ ನಗರ, ದೊಡ್ಡನಾಗಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 28 ರವರೆಗೆ ಹಲವು ಭಾಗಗಳಲ್ಲಿ ದುರಸ್ಥಿ ಕಾರ್ಯ
ಈಗಾಗಲೇ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸ್ಥಗಿತದಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಹಲವು ಭಾಗಗಳಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಆಗಸ್ಟ್ 1ರಿಂದ 28ರ ವರೆಗೆ ವಿವಿಧ ಭಾಗಗಳಲ್ಲಿ ಕಾಮಗಾರಿ ನಡೆಯುತ್ತದೆ ಎಂದು ಬೆಸ್ಕಾಂ ಈ ಮೊದಲೇ ತಿಳಿಸಿತ್ತು.
ಮುಖ್ಯವಾಗಿ ಟ್ರಾನ್ಸ್‌ಫಾರ್ಮರ್ ಗಳ ಕಂಬಗಳನ್ನು ನಗರದ ಬಹುತೇಕ ಭಾಗಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಭೂಗತವಾಗಿರುವ ಕೇಬಲ್‌ಗಳ ಚಾರ್ಜಿಂಗ್, ದುರಸ್ಥಿ ಕಾರ್ಯ ಮುಗಿಸಲು ಬೆಸ್ಕಾಂ ಕೆಲಸ ಮಾಡುತ್ತಿದೆ.
ಎಚ್‌ಎಸ್‌ಆರ್, ಚಂದಾಪುರದ ಹಲವು ಭಾಗಗಳು ಮತ್ತು ವಿಧಾನಸೌಧ, ನೆಲಮಂಗಲ, ಕೆಂಗೇರಿ, ಹೊಸಕೋಟೆ, ನಂದಗುಡಿ, ದೇವನಹಳ್ಳಿ, ಆವಲಹಳ್ಳಿ, ಆರ್‌ಆರ್ ನಗರ ವಿಭಾಗ, ಜಯನಗರ, ರಾಜಾಜಿನಗರ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್ ವಿಭಾಗ, ಶಿವಾಜಿನಗರ ವಿಭಾಗ, ಹೆಬ್ಬಾಳ ವಿಭಾಗ, ಹೆಚ್ಚುವರಿ ಕೇಂದ್ರ ವಿಭಾಗ, ಯಲಹಂಕ ನ್ಯೂ ಟೌನ್, ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ ಹೆಚ್ಚುವರಿ ಕೇಂದ್ರ ಉಪವಿಭಾಗಗಳಲ್ಲಿ ಹಲವಾರು ವಿಭಾಗಗಳು ಮತ್ತು ಉಪವಿಭಾಗಗಳಲ್ಲಿ ಆಗಸ್ಟ್ 28 ರವರೆಗೆ ಹಲವು ದಿನಗಳ ಕಾಲ ವಿದ್ಯುತ್ ಸ್ಥಗಿತವಾಗುತ್ತದೆ ಎಂದು ಹೇಳಿದೆ.
Recommended Video
-
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications