Bengaluru Power Cut: ಬೆಂಗಳೂರಿನ ಈ ಭಾಗದಲ್ಲಿ ಇಂದು 8 ಗಂಟೆ ಪವರ್ ಕಟ್!
Bengaluru Power Cut: ಬೆಂಗಳೂರಿನ ವಿವಿಧ ಭಾಗದಲ್ಲಿ ಇಂದು ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ಹೇಳಿದೆ. ಬೆಂಗಳೂರಿನ ಹಲವು ಭಾಗದಲ್ಲಿ ಫೆಬ್ರವರಿ 5 (ಬುಧವಾರ)ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿ.(BESCOM) ತಿಳಿಸಿದೆ. ಇಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ಭಾರೀ ವ್ಯತ್ಯಾಸವಾಗಲಿದೆ.
ಹೊಸಕೋಟೆಯ ದೇವನಗುಂಡಿ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಭಾಗದಲ್ಲಿ ಬೆಂಗಳೂರು ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ. ಇನ್ನು ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ F-1 ಕಲ್ಕುಂಟೆ ಅಗ್ರಹಾರ ಹಾಗೂ F-2 ಶಿವನಪುರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಕಡಿತ: ಬೆಂಗಳೂರಿನ ವಿವಿಧ ಭಾಗದಲ್ಲಿ 8 ಗಂಟೆಗೂ ಹೆಚ್ಚು ಸಮಯ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಪವರ್‌ಕಟ್ ಆಗಲಿದೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ಕಡಿತ: ದೊಡ್ಡದುನ್ನಸಂದ್ರ, ಅನುಗೊಂಡನಹಳ್ಳಿ, ಮುತ್ತೂರು, ಯಡಗೊಂಡನಹಳ್ಳಿ, ಮೇಡಿಮಲ್ಲಸಂದ್ರ,
ಮಠ ಮಲ್ಲಸಂದ್ರ, ಕೆ.ಅರೇಹಳ್ಳಿ, ಕೆ.ಅಗ್ರಹಾರ, ಬ್ಯಾಲಹಳ್ಳಿ, ಮುತ್ತುಗದಹಳ್ಳಿ, ತತ್ತನೂರು, ಗುಂಡೂರು, ಬಾಗೂರು, ಮಾರನಗೆರೆ, ಸಿದ್ದನಪುರ
ಶಿವನಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆಯ ಗುಣಮಟ್ಟ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕೇಬಲ್ ತಂತಿಗಳನ್ನು ಬದಲಾಯಿಸುತ್ತಿರುವುದಾಗಿಯೂ ಬೆಸ್ಕಾಂನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಬುಧವಾರ ವಿದ್ಯುತ್ ಕಡಿತದ ಹಿನ್ನೆಲೆಯಲ್ಲಿ ಅದಕ್ಕೆ ಅನುಗುಣವಾಗಿ ಪ್ಲ್ಯಾನ್ ಮಾಡಿಕೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.
ಬೆಂಗಳೂರಿನ ಹಲವು ಭಾಗದಲ್ಲಿ ಸಮಸ್ಯೆ: ಇನ್ನು ಬೆಸ್ಕಾಂ ಬೆಂಗಳೂರಿನ ಹಲವು ಭಾಗದಲ್ಲಿ ಯಾವುದೇ ಮಾಹಿತಿ ನೀಡದೆ ಪವರ್ ಕಟ್ ಮಾಡುತ್ತಿದ್ದು ಸಮಸ್ಯೆ ಎದುರಾಗಿದೆ. ಬೆಂಗಳೂರಿನ ವಿವಿಧೆಡೆ ಯಾವುದೇ ಮಾಹಿತಿ ಅಥವಾ ಮುನ್ಸೂಚನೆಯನ್ನು ಕೊಡದೆ ಪವರ್ ಕಟ್ ಮಾಡಲಾಗುತ್ತಿದೆ. ಈ ರೀತಿ ಆಗುತ್ತಿರುವುದರಿಂದ ಜನರಿಗೆ ಸಮಸ್ಯೆ ಆಗುತ್ತಿದೆ.
ನಗರದ ವಿವಿಧ ಭಾಗದಲ್ಲಿ ಬೆಳಿಗ್ಗೆ ಸಮಯದಲ್ಲಿ ಪವರ್ ಕಟ್ ಆಗುವುದು ಜಾಸ್ತಿ ಆಗುತ್ತಿದೆ. ಅಲ್ಲದೆ ಬೆಸ್ಕಾಂ ಸಹಾಯವಾಣಿಯ ಕೆಲವು ಸಿಬ್ಬಂದಿ ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎನ್ನುವ ಆರೋಪವೂ ಇದೆ.
ಈಗಲೇ ಈ ರೀತಿಯಾದರೆ ಮುಂದಿನ ದಿನಗಳಲ್ಲಿ ಬೇಸಿಗೆ ಬರಲಿದ್ದು, ಆ ಸಮಯದಲ್ಲಿ ಪರಿಸ್ಥಿತಿ ಹೇಗಿರಲಿದೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ನಗರದಲ್ಲಿ ಅನಧಿಕೃತ ಪವರ್ ಕಟ್‌ನ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಸ್ಕಾಂ ಸಿಬ್ಬಂದಿ ಸಹ ನಮಗೆ ನಿಖರ ಮಾಹಿತಿ ಬೆಳಿಗ್ಗೆ 10.30ರ ನಂತರ ಸಿಗುತ್ತದೆ ಎನ್ನುತ್ತಿದ್ದಾರೆ. ಇದು ಬೆಳಿಗ್ಗೆ ಕೆಲಸಕ್ಕೆ ಹೋಗುವವರಿಗೆ ಸಮಸ್ಯೆ ಆಗುತ್ತಿದೆ.












Click it and Unblock the Notifications